For the best experience, open
https://m.newskannada.com
on your mobile browser.
Advertisement

ಏಕಾಂಗಿ ಸ್ಪರ್ಧೆ ಘೋಷಣೆ ಮಾಡಿದ ಅರವಿಂದ್ ಕೇಜ್ರಿವಾಲ್ !

ಪಂಜಾಬ್‌ನಲ್ಲಿ ಯಾವುದೇ ಮೈತ್ರಿ ಎಲ್ಲ ಎಂದಿದ್ದ ಆಮ್ ಆದ್ಮಿ ಪಾರ್ಟಿ ಇದೀಗ ದೆಹಲಿಯಲ್ಲೂ ಇಂಡಿಯಾ ಮೈತ್ರಿಗೆ ಶಾಕ್ ನೀಡಿದೆ.
02:32 PM Feb 12, 2024 IST | Ashitha S
ಏಕಾಂಗಿ ಸ್ಪರ್ಧೆ ಘೋಷಣೆ ಮಾಡಿದ ಅರವಿಂದ್ ಕೇಜ್ರಿವಾಲ್

ದೆಹಲಿ: ಪಂಜಾಬ್‌ನಲ್ಲಿ ಯಾವುದೇ ಮೈತ್ರಿ ಎಲ್ಲ ಎಂದಿದ್ದ ಆಮ್ ಆದ್ಮಿ ಪಾರ್ಟಿ ಇದೀಗ ದೆಹಲಿಯಲ್ಲೂ ಇಂಡಿಯಾ ಮೈತ್ರಿಗೆ ಶಾಕ್ ನೀಡಿದೆ.

Advertisement

ದೆಹಲಿಯ ಎಲ್ಲಾ 7 ಕ್ಷೇತ್ರದಲ್ಲಿ ಆಪ್ ಸ್ಪರ್ಧಿಸುವುದಾಗಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಇದೀಗ ಇಂಡಿಯಾ ಒಕ್ಕೂಟದ ಮೈತ್ರಿ ಕೆಲವೇ ರಾಜ್ಯಕ್ಕೆ ಕೆಲವೇ ಪಕ್ಷಕ್ಕೆ ಮಾತ್ರ ಸೀಮಿತವಾಗಿದೆ. ಎರಡು ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಪಂಜಾಬ್‌ನಲ್ಲಿ 13, ಚಂಡೀಘಡದಲ್ಲಿ 1 ಕ್ಷೇತ್ರದಲ್ಲಿ ಎಎಪಿ ಸ್ಪರ್ಧೆ ಮಾಡಲಿದ್ದು, ಮುಂದಿನ 10- 15 ದಿನಗಳಲ್ಲಿ 14 ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಿದೆ. ಎರಡು ವರ್ಷಗಳ ಹಿಂದಿನಂತೆ ನಿಮ್ಮ ಆರ್ಶೀವಾದ ನೀಡಿ.

ಎಎಪಿ ಎಲ್ಲಾ 14 ಕ್ಷೇತ್ರಗಳಲ್ಲಿ ಗೆಲ್ಲುವಂತೆ ನೋಡಿಕೊಳ್ಳಿ. ನಮ್ಮ ಕೈ ಬಲಪಡಿಸಿದ್ಟು ನಾವು ಹೆಚ್ಚಿನ ಕೆಲಸ ಮಾಡಲು ಸಾಧ್ಯ ಎಂದು ಮತದಾರರಲ್ಲಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.

Advertisement

Advertisement
Tags :
Advertisement