For the best experience, open
https://m.newskannada.com
on your mobile browser.
Advertisement

ನೇಪಾಳದ ಮೇಯರ್ ಪುತ್ರಿ ಗೋವಾದಲ್ಲಿ ನಿಗೂಢ ನಾಪತ್ತೆ !

ನೇಪಾಳದ ಮೇಯರ್ ಗೋಪಾಲ್ ಹಮಾಲ್ ಎಂಬುವವರ ಪುತ್ರಿ ಗೋವಾದಲ್ಲಿ ನಾಪತ್ತೆ ಆಗಿದ್ದಾರೆ. ಆರತಿ ಹಮಾಲ್ (36) ಕಾಣೆಯಾದ ಮೇಯರ್ ಮಗಳು. ಆರತಿ ಹಮಾಲ್ ಕಳೆದ ಕೆಲವು ತಿಂಗಳುಗಳಿಂದ ಗೋವಾದಲ್ಲಿ ವಾಸ್ತವ್ಯ ಹೂಡಿದ್ದರು.
12:15 PM Mar 27, 2024 IST | Ashitha S
ನೇಪಾಳದ ಮೇಯರ್ ಪುತ್ರಿ ಗೋವಾದಲ್ಲಿ ನಿಗೂಢ ನಾಪತ್ತೆ

ಕಠ್ಮಂಡು: ನೇಪಾಳದ ಮೇಯರ್ ಗೋಪಾಲ್ ಹಮಾಲ್ ಎಂಬುವವರ ಪುತ್ರಿ ಗೋವಾದಲ್ಲಿ ನಾಪತ್ತೆ ಆಗಿದ್ದಾರೆ. ಆರತಿ ಹಮಾಲ್ (36) ಕಾಣೆಯಾದ ಮೇಯರ್ ಮಗಳು. ಆರತಿ ಹಮಾಲ್ ಕಳೆದ ಕೆಲವು ತಿಂಗಳುಗಳಿಂದ ಗೋವಾದಲ್ಲಿ ವಾಸ್ತವ್ಯ ಹೂಡಿದ್ದರು.

Advertisement

ಓಶೋ ಧ್ಯಾನದ ಅನುಯಾಯಿ ಆಗಿರುವ ಆರತಿ ಹಮಾಲ್ ಸೋಮವಾರ ರಾತ್ರಿ 9.30ರ ಸುಮಾರಿಗೆ ಅಶ್ವೆಮ್ ಸೇತುವೆಯ ಸಮೀಪದಲ್ಲಿ ಆರತಿ ಕೊನೆಯದಾಗಿ ಕಾಣಿಸಿಕೊಂಡಿದ್ದರಂತೆ. ಬಳಿಕ ಯಾವುದೇ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಎಂದು ಆಕೆಯ ಸ್ನೇಹಿತೆ ಆಕೆಯ ಈ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆ ಧಂಗಧಿ ಉಪ-ಮಹಾನಗರದ ಮೇಯರ್ ಗೋಪಾಲ್ ಹಮಾಲ್ ಅವರು ತಮ್ಮ ಹಿರಿಯ ಮಗಳನ್ನು ಹುಡುಕಲು ಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಿ ಮನವಿ ಮಾಡಿದ್ದಾರೆ. ನನ್ನ ಹಿರಿಯ ಮಗಳು, ಆರತಿ ಅವರು ಓಶೋ ಧ್ಯಾನಸ್ಥರಾಗಿದ್ದರು.

Advertisement

ಅವರು ಕೆಲವು ತಿಂಗಳುಗಳಿಂದ ಗೋವಾದಲ್ಲಿ ವಾಸಿಸುತ್ತಿದ್ದರು. ಆದರೆ ಆರತಿ ಜೋರ್ಬಾ ವೈಬ್ಸ್ ಅಶ್ವೆಮ್ ಬ್ರೀಜ್ ಅವರ ಸಂಪರ್ಕವನ್ನು ಕಳೆದುಕೊಂಡಿದ್ದಾರೆ ಎಂದು ಅವರ ಸ್ನೇಹಿತೆಯಿಂದ ನನಗೆ ಸಂದೇಶ ಬಂದಿದೆ. ನಾನು ವಿನಮ್ರವಾಗಿ ವಿನಂತಿಸುತ್ತೇನೆ. ಗೋವಾದಲ್ಲಿ ವಾಸಿಸುವವರು ನನ್ನ ಮಗಳು ಆರತಿಯ ಹುಡುಕಾಟದಲ್ಲಿ ಸಹಾಯ ಮಾಡುತ್ತಾರೆ. ನಮ್ಮ ಹಿರಿಯ ಮಗಳು ಆರತಿಯನ್ನು ಹುಡುಕಲು ನನ್ನ ಕಿರಿಯ ಮಗಳು ಅರ್ಜೂ ಮತ್ತು ಅಳಿಯ ಇಂದು ರಾತ್ರಿ ಗೋವಾಕ್ಕೆ ಹೋಗ್ತಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ. ಸದ್ಯ ಗೋವಾ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸ್ತಿದ್ದಾರೆ.

Advertisement
Tags :
Advertisement