For the best experience, open
https://m.newskannada.com
on your mobile browser.
Advertisement

ಮ್ಯಾನ್ಮಾರ್‌ಗೆ ಭಾರತದ ರಾಯಭಾರಿಯಾಗಿ ಅಭಯ್ ಠಾಕೂರ್ ನೇಮಕ

ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ವಿಶೇಷ ರಾಜತಾಂತ್ರಿಕ ಅಧಿಕಾರಿಯಾಗಿರುವ ಅಭಯ್ ಠಾಕೂರ್ ಅವರನ್ನು ಮ್ಯಾನ್ಮಾರ್ ದೇಶದ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
06:01 PM Mar 26, 2024 IST | Ashitha S
ಮ್ಯಾನ್ಮಾರ್‌ಗೆ ಭಾರತದ ರಾಯಭಾರಿಯಾಗಿ ಅಭಯ್ ಠಾಕೂರ್ ನೇಮಕ

ವದೆಹಲಿ: ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ವಿಶೇಷ ರಾಜತಾಂತ್ರಿಕ ಅಧಿಕಾರಿಯಾಗಿರುವ ಅಭಯ್ ಠಾಕೂರ್ ಅವರನ್ನು ಮ್ಯಾನ್ಮಾರ್ ದೇಶದ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.

Advertisement

ಈ ಬಗ್ಗೆ ಭಾರತದ ವಿಶೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತೀಯ ವಿದೇಶಾಂಗ ಸೇವೆಯ (ಐಎಫ್‌ಎಸ್) 1992ರ ಬ್ಯಾಚ್‌ನ ಅಧಿಕಾರಿಯಾಗಿರುವ ಅಭಯ್ ಠಾಕೂರ್ ಅವರು ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆಯಲ್ಲಿ ವಿಶೇಷ ಅಧಿಕಾರಿಯಾಗಿ ಕೆಲಸ ಮಾಡಿದ್ದರು.

ಪ್ರಸ್ತುತ ಅವರು ವಿದೇಶಾಂಗ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಭಯ್ ಠಾಕೂರ್ ಅವರು ಮ್ಯಾನ್ಮಾರ್‌ಗೆ ತೆರಳಿ ಶೀಘ್ರದಲ್ಲೇ ಅಧಿಕಾರವಹಿಸಿಕೊಳ್ಳಲ್ಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

Advertisement

ಮ್ಯಾನ್ಮಾರ್‌ನಲ್ಲಿ 2021ರ ಫೆಬ್ರುವರಿಯಲ್ಲಿ ಸೇನೆಯು ದಂಗೆಯ ಮೂಲಕ ದೇಶದ ಅಧಿಕಾರ ನಡೆಸುತ್ತಿದ್ದೆ. ಇದೀಗ ಪ್ರಜಾಪ್ರಭುತ್ವ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಅಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಂತದಲ್ಲಿ ಭಾರತದ ರಾಯಭಾರಿಯಾಗಿ ಅವರನ್ನು ನೇಮಕ ಮಾಡಲಾಗಿದೆ.

Advertisement
Tags :
Advertisement