For the best experience, open
https://m.newskannada.com
on your mobile browser.
Advertisement

ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದ ಅಭಿಷೇಕ್‌ ಅಂಬರೀಷ್‌

ಹುಬ್ಬಳ್ಳಿ: ಭಾರತದಲ್ಲಿ ವಂಶಪಾರಂಪರ್ಯ ರಾಜಕಾರಣ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಅದಕ್ಕೆ ಯಾವುದೇ ಪಕ್ಷಗಳು ಹೊರತಾಗಿಲ್ಲ. ಈ ಕುರಿತು ಸಂಸದೆ ಸುಮಲತಾ ಪುತ್ರ ಅಭಿಷೇಕ್‌ ಅಂಬರೀಷ್‌ ಸ್ಪಷ್ಟನೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಸಿನಿಮಾ ಅಂದರೆ ದುಡ್ಡು ಕೊಟ್ಟು ಜನ ನಮ್ಮನ್ನ ನೋಡಲು ಬರ್ತಾರೆ. ಆದರೆ ರಾಜಕಾರಣಕ್ಕೆ ನಾವೇ ದುಡ್ಡು ಕೊಟ್ಟು ಜನರನ್ನು ಕರೆಯಬೇಕು. ಹಾಗಾಗಿ ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರಲ್ಲ ಎಂದು ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.
04:37 PM Nov 21, 2023 IST | Umesha HS

ಸಿನಿಮಾ ರಂಗ ಬೇರೆ, ರಾಜಕಾರಣ ಬೇರೆ. ಅಂಬರೀಶಣ್ಣ 34 ವರ್ಷ ಚಿತ್ರರಂಗದಲ್ಲಿದ್ದು ನಂತರ ರಾಜಕೀಯಕ್ಕೆ ಬಂದರು ಎಂದು ಹೇಳಿದ್ದಾರೆ. ನಮ್ಮ ತಾಯಿ ತಾವು ಇರೋವರೆಗೆ ರಾಜಕೀಯಕ್ಕೆ ಬರಬೇಡ ಅಂತಾ ಹೇಳಿದ್ದಾರೆ. ಹೀಗಾಗಿ ನಾನು ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲ್ಲ. ಸೇವೆ ಮಾಡುವಂತಹ ಕೆಲಸಗಳಿದ್ದರೆ, ಮಾತ್ರ ಭಾಗವಹಿಸುತ್ತೇನೆ. ರಾಜಕೀಯ ಆಡಳಿತದಲ್ಲಿ ಮಕ್ಕಳ ಹಸ್ತಕ್ಷೇಪ ಸರಿಯಲ್ಲ ಎಂದಿದ್ದಾರೆ.

Advertisement
Advertisement
Tags :
Advertisement