For the best experience, open
https://m.newskannada.com
on your mobile browser.
Advertisement

ಅಪಘಾತ ಪ್ರಕರಣ: 19 ವರ್ಷಗಳ ನಂತರ ಆರೋಪಿ ಬಂಧನ

ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷಗಳಿಂದ ನಾಪತ್ತೆ ಆಗಿದ್ದ ಆರೋಪಿಯನ್ನು ನಗರದ ಸಂಚಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
01:24 PM Feb 27, 2024 IST | Gayathri SG
ಅಪಘಾತ ಪ್ರಕರಣ  19 ವರ್ಷಗಳ ನಂತರ ಆರೋಪಿ ಬಂಧನ

ಬಸವಕಲ್ಯಾಣ: ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷಗಳಿಂದ ನಾಪತ್ತೆ ಆಗಿದ್ದ ಆರೋಪಿಯನ್ನು ನಗರದ ಸಂಚಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Advertisement

2005ರಲ್ಲಿ ವಾಹನ ಅಪಘಾತಕ್ಕೆ ಸಂಬಂಧಿಸಿದಂತೆ ತೆಲಂಗಾಣ ರಾಜ್ಯದ ವಾರಂಗಲ್‌ನ ಶಾಂತಿನಗರದ ರಾಜೀವ ಗಟ್ಟಯ್ಯ ವಿರುದ್ಧ ಪ್ರಕರಣ ದಾಖಲಾಗಿತ್ತು.

ಆದರೆ, ಅಂದಿನಿಂದ ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆರೋಪಿಯ ಪತ್ತೆಗೆ ಜಾಲ ಬೀಸಿದ ಪೊಲೀಸರು ವಾರಂಗಲ್‌ನಲ್ಲಿಯೇ ಈತ ವಾಸವಿರುವ ಖಚಿತ ಸುಳಿವಿನ ಮೇರೆಗೆ ಅಲ್ಲಿಗೆ ಹೋಗಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಠಾಣೆಯ ಸಿಬ್ಬಂದಿ ಹೇಮಂತಕುಮಾರ, ರಾಜಶೇಖರರೆಡ್ಡಿ ಆರೋಪಿಯ ಬಂಧನದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Advertisement
Tags :
Advertisement