For the best experience, open
https://m.newskannada.com
on your mobile browser.
Advertisement

ನಟ ದರ್ಶನ್ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದ ಕನ್ನಡ ಶಫಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ದ ದೂರು ಕೊಟ್ಟಿದ್ದ ಕನ್ನಡ ಪರ ಸಂಘಟನೆಯ ಕನ್ನಡ ಶಫಿ ಇದೀಗ ದೂರು ಪಡೆದಿದ್ದಾರೆ. ನಿರ್ಮಾಪಕ ಉಮಾಪತಿ ಅವರಿಗೆ ನಟ ದರ್ಶನ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಶಫಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.
02:25 PM Feb 23, 2024 IST | Gayathri SG
ನಟ ದರ್ಶನ್ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದ ಕನ್ನಡ ಶಫಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ದ ದೂರು ಕೊಟ್ಟಿದ್ದ ಕನ್ನಡ ಪರ ಸಂಘಟನೆಯ ಕನ್ನಡ ಶಫಿ ಇದೀಗ ದೂರು ಪಡೆದಿದ್ದಾರೆ. ನಿರ್ಮಾಪಕ ಉಮಾಪತಿ ಅವರಿಗೆ ನಟ ದರ್ಶನ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಶಫಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.

Advertisement

ಶಫಿ ನೀಡಿದ ದೂರಿನಲ್ಲಿ ದರ್ಶನ್ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಉಲ್ಲೇಖಿಸಿದ್ದರು. ಆದರೆ ಇದೀಗ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ದೂರು ನೀಡಿದ ಬಗ್ಗೆ ಕ್ಷಮೆ ಕೇಳುವುದಷ್ಟೇ ಅಲ್ಲ, ದೂರು ಹಿಂಪಡೆಯುವುದಾಗಿಯೂ ಕನ್ನಡ ಪ್ರಜಾಪರ ವೇದಿಕೆ ಕನ್ನಡ ಶಫಿ ವಿಡಿಯೋ ಮೂಲಕ ಹೇಳಿದ್ದಾರೆ. ಬೇರೆ ಸಂಘಟನೆಯವರು ಹಾಗೂ ನಾವು ಸೇರಿ ಆತುರದಿಂದ ನಿರ್ಧಾರ ಕೈಗೊಂಡೆವು. ಇದರಿಂದ ಹಿರಿಯ ನಟರ ಮನಸ್ಸಿಗೆ ನೋವಾಗಿದೆ. ಎಲ್ಲಾ ಕನ್ನಡ ಮನಸ್ಸುಗಳಿಗೂ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

Advertisement
Advertisement
Tags :
Advertisement