ನಿಶ್ಚಿತಾರ್ಥ ದಿನದಂದೇ ಭೀಕರ ಅಪಘಾತದಲ್ಲಿ ಕೊನೆಯುಸಿರೆಳೆದ ನಟ !
ನಟ ಸೂರಜ್ (40) ಮೆಹರ್ ಬುಧವಾರ (ಏ.10) ತಡರಾತ್ರಿ ಸಿನಿಮಾ ಚಿತ್ರೀಕರಣ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕಾರು ಪಿಕ್ ಅಪ್ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸೂರಜ್ ಕೊನೆಯುಸಿರೆಳೆದಿರುವ ಘಟನೆ ರಾಯ್ ಪುರ್ ನಲ್ಲಿ ನಡೆದಿದೆ.
05:53 PM Apr 11, 2024 IST
|
Ashitha S
ಛತ್ತೀಸ್ ಗಢ್: ನಟ ಸೂರಜ್ (40) ಮೆಹರ್ ಬುಧವಾರ (ಏ.10) ತಡರಾತ್ರಿ ಸಿನಿಮಾ ಚಿತ್ರೀಕರಣ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕಾರು ಪಿಕ್ ಅಪ್ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸೂರಜ್ ಕೊನೆಯುಸಿರೆಳೆದಿರುವ ಘಟನೆ ರಾಯ್ ಪುರ್ ನಲ್ಲಿ ನಡೆದಿದೆ.
Advertisement
ವಿಪರ್ಯಾಸ ಎಂದರೆ ನಟ ಸೂರಜ್ ಮೆಹರ್ ನಿಶ್ಚಿತಾರ್ಥ ನೆರವೇರಿದ (ಬುಧವಾರ) ದಿನದಂದೇ ಕಾರು ಅಪಘಾತದಲ್ಲಿ ಇಹಲೋಕ ತ್ಯಜಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿ ಪ್ರಕಾರ, ಸೂರಜ್ ಕಾರು ಪಿಕ್ ಅಪ್ ಟ್ರಕ್ ಗೆ ಡಿಕ್ಕಿಹೊಡೆದಿತ್ತು. ಸೂರಜ್ ಸಿನಿಮಾ ಚಿತ್ರೀಕರಣ ಮುಗಿಸಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಸೂರಜ್ ಕಾರು ಚಾಲಕ ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
Advertisement
Advertisement
Next Article