For the best experience, open
https://m.newskannada.com
on your mobile browser.
Advertisement

ಖ್ಯಾತ ನಟ ಕೆ. ಶಿವರಾಮ್ ಗೆ ಕಾರ್ಡಿಯಕ್ ಅರೆಸ್ಟ್: ಆಸ್ಪತ್ರೆಗೆ ದಾಖಲು

ಖ್ಯಾತ ನಟ ಕೆ. ಶಿವರಾಮ್ ಅವರಿಗೆ ಹೃದಯಾಘಾತವಾಗಿದ್ದು,ಅವರನ್ನು ಬೆಂಗಳೂರಿನ ಎಚ್​ಸಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಶಿವರಾಮ್ ಅವರಿಗೆ 71 ವರ್ಷ ವಯಸ್ಸಾಗಿದೆ.
03:21 PM Feb 28, 2024 IST | Ashika S
ಖ್ಯಾತ ನಟ ಕೆ  ಶಿವರಾಮ್ ಗೆ ಕಾರ್ಡಿಯಕ್ ಅರೆಸ್ಟ್  ಆಸ್ಪತ್ರೆಗೆ ದಾಖಲು

ಬೆಂಗಳೂರು: ಖ್ಯಾತ ನಟ ಕೆ. ಶಿವರಾಮ್ ಅವರಿಗೆ ಹೃದಯಾಘಾತವಾಗಿದ್ದು,ಅವರನ್ನು ಬೆಂಗಳೂರಿನ ಎಚ್​ಸಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಶಿವರಾಮ್ ಅವರಿಗೆ 71 ವರ್ಷ ವಯಸ್ಸಾಗಿದೆ.

Advertisement

ಕಾರ್ಡಿಯಕ್ ಅರೆಸ್ಟ್ ಹಾಗೂ ಬ್ರೈನ್ ಡೆಡ್ ಆಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಕೆ ಶಿವರಾಮ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗುತ್ತಿದ್ದು ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.

ಶಿವರಾಮ್ ಅವರ ಅಳಿಯ ಭರತ್ ನೀಡಿರುವ ಮಾಹಿತಿಯಂತೆ, 20 ದಿನಗಳ ಹಿಂದೆ ರಕ್ತದೊತ್ತಡದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಆರೋಗ್ಯ ಚಿಂತಾಜನಕ ಆಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಕೆ ಶಿವರಾಮ್​ ಐಎಎಸ್​ ಅಧಿಕಾರಿಯಾಗಿದ್ದರು. ಬಳಿಕ ಸಿನಿಮಾ ಕ್ಷೇತ್ರದ ಆಸಕ್ತಿಯಿಂದ ಸರ್ಕಾರಿ ಸೇವೆಗೆ ವಿದಾಯ ಹೇಳಿ ಸಿನಿಮಾದತ್ತ ಚಿತ್ತ ನೆಟ್ಟರು.

ಇವರು ‘ಬಾನಲ್ಲೆ ಮಧುಚಂದ್ರಕ್ಕೆ’, ‘ವಸಂತಕಾವ್ಯ’ ಚಿತ್ರದಲ್ಲಿ ನಾಯಕನಾಗಿ ನಟನೆ ಮಾಡಿದ್ದರು. ಆ ಬಳಿಕ ರಾಜಕೀಯದತ್ತ ಒಲವು ತೋರಿಸಿ ರಾಜಕೀಯ ರಂಗಕ್ಕೆ ಪ್ರವೇಶ ಬೆಳೆಸಿದರು. ಬಿಜೆಪಿ ಪಕ್ಷ ಸೇರ್ಪಡೆಗೊಂಡರು.

Advertisement
Tags :
Advertisement