For the best experience, open
https://m.newskannada.com
on your mobile browser.
Advertisement

ಹೃದಯಾಘಾತದಿಂದ ರಂಗಭೂಮಿ, ಕಿರುತೆರೆ ನಟ ಪ್ರದೀಪ್ ವಿಧಿವಶ

ರಂಗಭೂಮಿ ಮತ್ತು ಕಿರುತೆರೆ ನಟ ಪ್ರದೀಪ್ (73) ಭಾನುವಾರ ಹೃದಯಾಘಾತದಿಂದ ನಿಧನರಾದರು. ಕಳೆದ 10 ದಿನಗಳ ಹಿಂದೆ ಹೃದಯ ಸಂಬಂಧಿ ಚಿಕಿತ್ಸೆ ಒಳಗಾಗಿದ್ದ ಪ್ರದೀಪ್‌(ಸುಬ್ಬರಾಮು) ಅವರು ಭಾನುವಾರ ಸಂಜೆ ಮತ್ತೆ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
09:47 AM Apr 15, 2024 IST | Ashitha S
ಹೃದಯಾಘಾತದಿಂದ ರಂಗಭೂಮಿ  ಕಿರುತೆರೆ ನಟ ಪ್ರದೀಪ್ ವಿಧಿವಶ

ಬೆಂಗಳೂರು: ರಂಗಭೂಮಿ ಮತ್ತು ಕಿರುತೆರೆ ನಟ ಪ್ರದೀಪ್ (73) ಭಾನುವಾರ ಹೃದಯಾಘಾತದಿಂದ ನಿಧನರಾದರು. ಕಳೆದ 10 ದಿನಗಳ ಹಿಂದೆ ಹೃದಯ ಸಂಬಂಧಿ ಚಿಕಿತ್ಸೆ ಒಳಗಾಗಿದ್ದ ಪ್ರದೀಪ್‌(ಸುಬ್ಬರಾಮು) ಅವರು ಭಾನುವಾರ ಸಂಜೆ ಮತ್ತೆ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

ನಾಳೆ ನಟ ಪ್ರದೀಪ್ ಅವರು ಅಂತ್ಯಕ್ರಿಯೆ ನಡೆಯಲಿದೆ. ಇವರು ರಂಗಭೂಮಿ ಹಾಗೂ ಕಿರುತೆರೆ ನಟಿಯಾದ ಪತ್ನಿ ಕಲ್ಯಾಣಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಬೆಂಗಳೂರಿನ ಹಲವು ರಂಗತಂಡಗಳಲ್ಲಿ ಕಳೆದ 4 ದಶಕಗಳಿಂದ ತೊಡಗಿಸಿಕೊಂಡಿದ್ದ ಪ್ರದೀಪ್ ಅವರು ತಮ್ಮ ಅದ್ಭುತ ನಟನೆಯಿಂದ ರಂಗಾಸಕ್ತರ ಗಮನ ಸೆಳೆದಿದ್ದರು.

ರಂಗಭೂಮಿಯ ಬೇಡಿಕೆ ಕಡಿಮೆಯಾದ ನಂತರ ಕಿರುತೆರೆಯಲ್ಲಿ ಪ್ರಸಾರವಾಗುವ ಹಲವು ಧಾರಾವಾಹಿಗಳಲ್ಲಿ ಅವರು ಅಭಿನಯಿಸುತ್ತಿದ್ದರು. ಸಾಕ್ರೆಟೀಸ್, ಬಂಜೆತೊಟ್ಟಿಲು, ಸಾಯಿನಮನ ಇತ್ಯಾದಿ ನಾಟಕಗಳು ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿದ್ದವು.

Advertisement

Advertisement
Tags :
Advertisement