ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಾಲಿವುಡ್ ನಟ ಶ್ರೇಯಸ್ ತಲ್ಪಡೆಗೆ ಹೃದಯಾಘಾತ

ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ಮಿಂಚಿರುವ ನಟ ಶ್ರೇಯಸ್ ತಲ್ಪಡೆ ಅವರಿಗೆ ಗುರುವಾರ  ಸಂಜೆ ಹೃದಯಾಘಾತವಾಗಿದೆ.
07:35 AM Dec 15, 2023 IST | Ashika S

ಮುಂಬೈ: ಬಾಲಿವುಡ್  ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ಮಿಂಚಿರುವ ನಟ ಶ್ರೇಯಸ್ ತಲ್ಪಡೆ ಅವರಿಗೆ ಗುರುವಾರ  ಸಂಜೆ ಹೃದಯಾಘಾತವಾಗಿದೆ.

Advertisement

‘ವೆಲ್​ಕಮ್​ ಟು ದಿ ಜಂಗಲ್’ ಸಿನಿಮಾ ಶೂಟಿಂಗ್ ಮುಗಿಸಿ ಮನೆಗೆ ಹೊರಡುವ ವೇಳೆ ಅವರಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು, ಬಳಿಕ ಹಾರ್ಟ್​ ಅಟ್ಯಾಕ್ ಆಗಿದೆ.  ಬಳಿಕ ಮುಂಬೈನ ಅಂಧೇರಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶ್ರೇಯಸ್ ತಲ್ಪಡೆ ಚಿತ್ರರಂಗಕ್ಕೆ 2002ರಲ್ಲೇ ಕಾಲಿಟ್ಟರು. ‘ಆಂಖೇ’ ಅವರು ನಟಿಸಿದ ಮೊದಲ ಸಿನಿಮಾ. ಆ ಬಳಿಕ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. 2007ರಲ್ಲಿ ರಿಲೀಸ್ ಆದ ‘ಓಂ ಶಾಂತಿ ಓಂ’ ಸಿನಿಮಾದಲ್ಲಿ ಶಾರುಖ್​ನ ಗೆಳೆಯನಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ‘ಗೋಲ್​ಮಾಲ್​ ರಿಟರ್ನ್ಸ್​’, ಗೋಲ್​ಮಾಲ್​ 3’, ‘ಹೌಸ್​ಫುಲ್ 2’ ಅಂಥ ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ನಟಿಸಿದ್ದಾರೆ.

Advertisement

ಅವರು ಈಗ ಸುಸ್ಥಿತಿಯಲ್ಲಿದ್ದಾರೆ ಎಂದು ಆಪ್ತ ವಲಯದವರು ಹೇಳಿದ್ದಾರೆ.

Advertisement
Tags :
LatetsNewsNewsKannadaತೆರೆನಟಶ್ರೇಯಸ್ ತಲ್ಪಡೆಸ್ಟಾರ್​ ನಟಹೃದಯಾಘಾತ
Advertisement
Next Article