For the best experience, open
https://m.newskannada.com
on your mobile browser.
Advertisement

ಶಿವರಾಮ್​ ಅಂತ್ಯಕ್ರಿಯೆಗೆ ಜಾಗ ಕೊಡಿ: ಸಿಎಂಗೆ ನಟ ವಿಜಯ್ ಮನವಿ

ಖ್ಯಾತಿ ನಟ ಮತ್ತು ಕನ್ನಡದಲ್ಲೇ ಐಎಎಸ್‌ ಪಾಸ್​ ಮಾಡಿದ್ದ ಸಾಧಕ ಕೆ. ಶಿವರಾಮ್‌  ಪಾರ್ಥಿವ ಶರೀರದ ಅಂತಿಮ ದರ್ಶನ ಕಾರ್ಯಕ್ರಮ ರವೀಂದ್ರ ಕಲಾ ಕ್ಷೇತ್ರದ ಆವರಣದಲ್ಲೇ ನಡೆಯುತ್ತಿದೆ.
04:05 PM Mar 01, 2024 IST | Ashika S
ಶಿವರಾಮ್​ ಅಂತ್ಯಕ್ರಿಯೆಗೆ ಜಾಗ ಕೊಡಿ  ಸಿಎಂಗೆ ನಟ ವಿಜಯ್ ಮನವಿ

ಬೆಂಗಳೂರು: ಖ್ಯಾತಿ ನಟ ಮತ್ತು ಕನ್ನಡದಲ್ಲೇ ಐಎಎಸ್‌ ಪಾಸ್​ ಮಾಡಿದ್ದ ಸಾಧಕ ಕೆ. ಶಿವರಾಮ್‌  ಪಾರ್ಥಿವ ಶರೀರದ ಅಂತಿಮ ದರ್ಶನ ಕಾರ್ಯಕ್ರಮ ರವೀಂದ್ರ ಕಲಾ ಕ್ಷೇತ್ರದ ಆವರಣದಲ್ಲೇ ನಡೆಯುತ್ತಿದೆ. ಛಲವಾದಿ ಮಹಾಸಭಾಕ್ಕೆ ಸೇರಿದ ಜಾಗದಲ್ಲೇ ಅಂತ್ಯಕ್ರಿಯೆ ಮಾಡಲು ನಟ ವಿಜಯ್ ಸಿಎಂಗೆ ಮನವಿ ಮಾಡಿದ್ದಾರೆ.

Advertisement

ಕೆ. ಶಿವರಾಮ್‌ ಪಾರ್ಥಿವ ಶರೀರದ ಅಂತ್ಯಕ್ರಿಯೆ ಛಲವಾದಿ ಮಹಾಸಭಾಕ್ಕೆ ಸೇರಿದ ಜಾಗದಲ್ಲೇ ಮಾಡಲು ಅವಕಾಶ ನೀಡಬೇಕು ಎಂದು ಅಭಿಮಾನಿಗಳು ಕೋರಿದ್ದಾರೆ. ಆರಂಭದಲ್ಲಿ ಅಭಿಮಾನಿಗಳ ಈ ಬೇಡಿಕೆಗೆ ಸರ್ಕಾರ ಒಪ್ಪಿರಲಿಲ್ಲ.

ಹೀಗಾಗಿ ಶಿವರಾಮ್‌ ಪತ್ನಿ ವಾಣಿ ಅವರು ಮತ್ತು ಅಭಿಮಾನಿಗಳು ಸರ್ಕಾರದ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಈ ಬೆನ್ನಲ್ಲೇ ಎಚ್ಚೆತ್ತ ಸಂಸದ ಡಿ.ಕೆ ಸುರೇಶ್,​​ ಛಲವಾದಿ ಮಹಾಸಭಾಕ್ಕೆ ಸೇರಿದ ಜಾಗದಲ್ಲೇ ಕೆ. ಶಿವರಾಮ್‌ ಅಂತ್ಯಕ್ರಿಯೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ನಿಮ್ಮೊಂದಿಗೆ ಕಾಂಗ್ರೆಸ್​ ಸರ್ಕಾರ ಇದೆ ಎಂದಿದ್ದರು.

Advertisement

ಈಗ ನಟ ಒಂಟಿ ಸಲ ವಿಜಯ್ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ನಟ ಕೆ. ಶಿವರಾಮ್​ ಚಿತ್ರರಂಗಕ್ಕೆ ಸೇರಿದವರು. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಾಕಷ್ಟು ಕೊಡುಗೆ ನೀಡಿದ್ದವರು. ಇವರ ಅಂತ್ಯಕ್ರಿಯೆ ಛಲವಾದಿ ಮಹಾಸಭಾಕ್ಕೆ ಸೇರಿದ ಜಾಗದಲ್ಲೇ ಮಾಡಬೇಕು.

ಇದಕ್ಕೆ ಸಿಎಂ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ, ಆದ್ರೂ ಕೆಲವು ಅಧಿಕಾರಿಗಳು ಗೊಂದಲ ಸೃಷ್ಟಿಸಿದ್ದಾರೆ. ಹೀಗಾಗಿ, ಸಿಎಂ ಸಿದ್ದರಾಮಯ್ಯಗೆ ಈ ವಿಷಯ ತಲುಪಿಸಿ ಒಂದು ಗ್ರೀನ್​ ಸಿಗ್ನಲ್​ ಕೊಡಿಸಿ ಎಂದು ವಿಜಯ್ ಕೇಳಿಕೊಂಡಿದ್ದಾರೆ.

Advertisement
Tags :
Advertisement