For the best experience, open
https://m.newskannada.com
on your mobile browser.
Advertisement

ನಟಿ ಮಾಳವಿಕಾ ಅವಿನಾಶ್ ತಂದೆ ನಟೇಶನ್ ಗಣೇಶನ್ ನಿಧನ

ರಾಜ್ಯ ಬಿಜೆಪಿ ಉಪಾಧ್ಯಕ್ಷ, ನಟಿ, ಮಾಳವಿಕಾ ಅವಿನಾಶ್ ಅವರ ತಂದೆ ನಟೇಶನ್ ಗಣೇಶನ್ ಅವರು ನಿಧನರಾಗಿದ್ದಾರೆ.
04:45 PM May 19, 2024 IST | Ashika S
ನಟಿ ಮಾಳವಿಕಾ ಅವಿನಾಶ್ ತಂದೆ ನಟೇಶನ್ ಗಣೇಶನ್ ನಿಧನ

ಬೆಂಗಳೂರು: ರಾಜ್ಯ ಬಿಜೆಪಿ ಉಪಾಧ್ಯಕ್ಷ, ನಟಿ, ಮಾಳವಿಕಾ ಅವಿನಾಶ್ ಅವರ ತಂದೆ ನಟೇಶನ್ ಗಣೇಶನ್ ಅವರು ನಿಧನರಾಗಿದ್ದಾರೆ.

Advertisement

'ಅವರು ಬ್ಯಾಂಕರ್, ವಕೀಲ, ಬರಹಗಾರ, ನಾಟಕಕಾರ, ಸಾಹಿತ್ಯ ಮತ್ತು ವೇದಗಳಲ್ಲಿ ಆಳವಾದ ಜ್ಞಾನವನ್ನು ಹೊಂದಿರುವ ವಿದ್ವಾಂಸರಾಗಿದ್ದರು. ಅವರು ನನ್ನ ತಂದೆ ಮಾತ್ರವಲ್ಲ ಗುರು ಕೂಡ ಆಗಿದ್ದರು. ನನ್ನನ್ನು ಮತ್ತು ನನ್ನ ಸಹೋದರಿಯನ್ನು ಸಿಂಹಿಣಿಯಂತೆ ಬೆಳೆಸಿದ್ದರು ಎಂದು ನಟಿ ಭಾವುಕರಾಗಿದ್ದಾರೆ ಎಂದು  ಮಾಳವಿಕಾ ತಂದೆಯ ನಿಧನದ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತಂದೆಯ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು, ಇದನ್ನು ನಾನು 4 ದಿನಗಳ ಹಿಂದೆ ಕ್ಲಿಕ್ಕಿಸಿದ ಫೋಟೋ ಎಂದು ಬರೆದುಕೊಂಡಿದ್ದಾರೆ.  ನಟೇಶನ್ ಗಣೇಶನ್ ಸದಾ ನಮ್ಮ ಹೃದಯದಲ್ಲಿರುತ್ತಾರೆ ಎಂದು ನಟಿ ಬರೆದುಕೊಂಡಿದ್ದಾರೆ.

Advertisement

ನಟೇಶನ್ ಗಣೇಶನ್ ಅವರ ಅಂತ್ಯಸಂಸ್ಕಾರ ಕಾರ್ಯವು ಇಂದು (ಮೇ 19) ಸಂಜೆ 5 ಗಂಟೆಗೆ ಕೆಂಗೇರಿ, ಬಂಡೇಮಠದ ಹತ್ತಿರ ಇರುವ ಬಿ.ಬಿ.ಎಂ.ಪಿ ಚಿತಾಗಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement
Tags :
Advertisement