ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಟಿ ಮೀರಾ ಜಾಸ್ಮಿನ್ ತಂದೆ ಜೋಸೆಫ್ ಫಿಲಿಪ್ ನಿಧನ

ನಟಿ ಮೀರಾ ಜಾಸ್ಮಿನ್ ಅವರ ತಂದೆ ಜೋಸೆಫ್ ಫಿಲಿಪ್ ಅವರು ಕೇರಳದ ಎರ್ನಾಕುಲಂನಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ನಟಿ ಇದೀಗ ತಂದೆಯ ಫೋಟೊಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.
02:00 PM Apr 05, 2024 IST | Ashitha S

ಬೆಂಗಳೂರು: ನಟಿ ಮೀರಾ ಜಾಸ್ಮಿನ್ ಅವರ ತಂದೆ ಜೋಸೆಫ್ ಫಿಲಿಪ್ ಅವರು ಕೇರಳದ ಎರ್ನಾಕುಲಂನಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ನಟಿ ಇದೀಗ ತಂದೆಯ ಫೋಟೊಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.

Advertisement

ವಯೋಸಹಜ ಕಾಯಿಲೆಯಿಂದ ಜೋಸೆಫ್ ಫಿಲಿಪ್ ಬಳಲುತ್ತಿದ್ದರು ಎನ್ನಲಾಗಿದೆ. ಜೋಸೆಫ್ ಫಿಲಿಪ್ ಅಂತ್ಯಕ್ರಿಯೆ ಭಾನುವಾರ (ಏ.7) ಕೇರಳದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮ ಪೋಸ್ಟ್‌ನೊಂದಿಗೆ ತಂದೆಯ ನಿಧನದ ಸುದ್ದಿಯನ್ನು ನಟಿ ಹೇಳಿಕೊಂಡಿದ್ದಾರೆ.

Advertisement

ಮೀರಾ ಅವರ ಪೋಸ್ಟ್‌ ಮೊದಲ ಫೋಟೊದಲ್ಲಿ ತಂದೆಯ ಹಳೆಯ ಫೋಟೊ ಮತ್ತು ಇನ್ನೆರಡು ಚಿತ್ರಗಳಲ್ಲಿ ಕುಟುಂಬದ ಜತೆ ಇರುವ ಫೋಟೊ ಹಂಚಿಕೊಂಡಿದ್ದಾರೆ. ಫೋಟೊ ಜೊತೆಗೆ ಮೀರಾ, "ನಾವು ಮತ್ತೆ ಭೇಟಿಯಾಗುವವರೆಗೆ" ಎಂದು ಬರೆದು ಬಿಳಿ ಹೃದಯದ ಇಮೋಜಿ ಬರೆದುಕೊಂಡಿದ್ದಾರೆ.

Advertisement
Tags :
GOVERNMENTindiaKARNATAKANewsKannadaNewsKarnataka
Advertisement
Next Article