ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

‘ಕ್ಯಾಪ್ಟನ್ ಮಿಲ್ಲರ್’ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟಿಗೆ ಲೈಂಗಿಕ ಕಿರುಕುಳ

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಸಂಖ್ಯೆ ದಿನ ಹೆಚ್ಚಾಗುತ್ತಿದೆ. ಸಾಮಾನ್ಯ ಮಹಿಳೆಯರಿಂದ ಹಿಡಿದು ದೊಡ್ಡ ದೊಡ್ಡ ಸೆಲೆಬ್ರಿಟಿಗಳವರೆಗೂ ಕಿರುಕುಳವನ್ನು ಅನುಭವಿಸಿದವರಿಲ್ಲ ಇಂತದ್ದೇ ಒಂದು ಘಟನೆ ಕ್ಯಾಪ್ಟನ್ ಮಿಲ್ಲರ್ ಪ್ರೀ ಸಿನಿಮಾ ರಿಲೀಸ್ ಕಾರ್ಯಕ್ರಮದಲ್ಲಿ ನಡೆದಿದೆ.
03:52 PM Jan 05, 2024 IST | Ashika S

ಚೆನ್ನೈ: ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಸಂಖ್ಯೆ ದಿನ ಹೆಚ್ಚಾಗುತ್ತಿದೆ. ಸಾಮಾನ್ಯ ಮಹಿಳೆಯರಿಂದ ಹಿಡಿದು ದೊಡ್ಡ ದೊಡ್ಡ ಸೆಲೆಬ್ರಿಟಿಗಳವರೆಗೂ ಕಿರುಕುಳವನ್ನು ಅನುಭವಿಸಿದವರಿಲ್ಲ ಇಂತದ್ದೇ ಒಂದು ಘಟನೆ ಕ್ಯಾಪ್ಟನ್ ಮಿಲ್ಲರ್ ಪ್ರೀ ಸಿನಿಮಾ ರಿಲೀಸ್ ಕಾರ್ಯಕ್ರಮದಲ್ಲಿ ನಡೆದಿದೆ.

Advertisement

ತಮಿಳು ಸಿನಿಮಾ ‘ಕ್ಯಾಪ್ಟನ್ ಮಿಲ್ಲರ್’ನ ಪ್ರೀ ರಿಲೀಸ್ ಕಾರ್ಯಕ್ರಮ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ಧನುಶ್ ಸೇರದಂತೆ ಹಲವು ನಟ-ನಟಿಯರು ತಮಿಳು ಸಿನಿಮಾರಂಗದ ಪ್ರಮುಖರು ಸಹ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ನಟಿಯೊಬ್ಬರು ಕಿರುಕುಳ ಎದುರಿಸಿದ್ದು, ಕಿರುಕುಳ ನೀಡಿದವನ ಹಿಡಿದು ನಟಿಯೇ ಥಳಿಸಿದ್ದಾರೆ. ಆ ಘಟನೆಯ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ನಟಿ ಐಶ್ವರ್ಯಾ ರಘುಪತಿ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿಯೂ ಈ ನಟಿ ಭಾಗಿಯಾಗಿದ್ದರು. ಆ ಕಾರ್ಯಕ್ರಮದ ನಿರೂಪಣೆಯನ್ನೂ ಸಹ ಐಶ್ವರ್ಯಾ ರಘುಪತಿ ಅವರೇ ನಡೆಸಿಕೊಟ್ಟರು. ಆದರೆ ಕಾರ್ಯಕ್ರಮ ಮುಗಿಸಿ ಹೊರಡುವಾಗ ವ್ಯಕ್ತಿಯೊಬ್ಬ ಐಶ್ವರ್ಯಾ ರಘುಪತಿ ಅವರೊಟ್ಟಿಗೆ ಅನುಚಿತವಾಗಿ ನಡೆದುಕೊಂಡಿದ್ದಾನೆ. ಐಶ್ವರ್ಯಾರ ದೇಹ ಭಾಗವನ್ನು ಅಶ್ಲೀಲವಾಗಿ ಮುಟ್ಟಿದ್ದಾನೆ. ಕೂಡಲೇ ಆಕ್ರೋಶಗೊಂಡ ನಟಿ, ಆತನನ್ನು ಹಿಡಿದು ಎಲ್ಲರೆದರು ಭಾರಿಸಿದ್ದಾರೆ. ಮಾತ್ರವಲ್ಲದೆ ಆತನನ್ನು ನಿಂದಿಸಿ, ಕಾಲಿಗೆ ಬೀಳುವಂತೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಸಹ ಹಂಚಿಕೊಂಡಿರುವ ಐಶ್ವರ್ಯಾ ರಘುಪತಿ, ‘ಆ ಜನಜಂಗುಳಿಯಲ್ಲಿ ಒಬ್ಬ ವ್ಯಕ್ತಿ ನನ್ನೊಟ್ಟಿಗೆ ಅನುಚಿತವಾಗಿ ವರ್ತಿಸಿದ. ಕೂಡಲೇ ನಾನು ಅವನನ್ನು ಹಿಡಿದುಕೊಂಡೆ. ನಾನು ಹೊಡೆಯುವ ವರೆಗೆ ನನ್ನ ಬಿಗಿ ಹಿಡಿತ ಸಡಿಸಲಿಲ್ಲ, ಅವನು ಓಡಿ ಹೋಗಲು ಯತ್ನಿಸಿದ, ಬಿಡದೆ ಬೆನ್ನಟ್ಟಿ ಹೊಡೆದು ಕೋಪ ತೀರಿಸಿಕೊಂಡೆ. ಮಹಿಳೆಯ ದೇಹದ ಭಾಗವನ್ನು ಹಿಡಿದುಕೊಳ್ಳು ಅದೆಷ್ಟು ಧೈರ್ಯ ಅವನಿಗೆ, ಇದು ನನಗೆ ಅತೀವ ಕೋಪ ತರಿಸಿತ್ತು, ಹಾಗಾಗಿಯೇ ನಾನು ಅವನನ್ನು ಎದುರಿಸಿದೆ’ ಎಂದಿದ್ದಾರೆ ನಟಿ.

Advertisement
Tags :
LatetsNewsNewsKannadaಕಾರ್ಯಕ್ರಮಕ್ಯಾಪ್ಟನ್ ಮಿಲ್ಲರ್ಪ್ರೀ ಸಿನಿಮಾರಿಲೀಸ್ಲೈಂಗಿಕ ಕಿರುಕುಳಸೆಲೆಬ್ರಿಟಿ
Advertisement
Next Article