For the best experience, open
https://m.newskannada.com
on your mobile browser.
Advertisement

ನೌಕಾಪಡೆಯ ಮುಖ್ಯಸ್ಥರಾಗಿ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅಧಿಕಾರ ಸ್ವೀಕಾರ

ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. 1964ರ ಮೇ 15ರಂದು ಜನಿಸಿದ ಅಡ್ಮಿರಲ್ ತ್ರಿಪಾಠಿ ಜುಲೈ 1, 1985ರಂದು ಭಾರತೀಯ ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನಿಯೋಜಿಸಲ್ಪಟ್ಟರು. ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧ ತಜ್ಞರಾಗಿರುವ ಅವರು ಸುಮಾರು 39 ವರ್ಷಗಳ ಕಾಲ ಸುದೀರ್ಘ ಮತ್ತು ವಿಶಿಷ್ಟ ಸೇವೆಯನ್ನು ಸಲ್ಲಿಸಿದ್ದಾರೆ.
05:20 PM Apr 30, 2024 IST | Ashitha S
ನೌಕಾಪಡೆಯ ಮುಖ್ಯಸ್ಥರಾಗಿ ಅಡ್ಮಿರಲ್ ದಿನೇಶ್ ಕೆ  ತ್ರಿಪಾಠಿ ಅಧಿಕಾರ ಸ್ವೀಕಾರ

ನವದೆಹಲಿ: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. 1964ರ ಮೇ 15ರಂದು ಜನಿಸಿದ ಅಡ್ಮಿರಲ್ ತ್ರಿಪಾಠಿ ಜುಲೈ 1, 1985ರಂದು ಭಾರತೀಯ ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನಿಯೋಜಿಸಲ್ಪಟ್ಟರು. ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧ ತಜ್ಞರಾಗಿರುವ ಅವರು ಸುಮಾರು 39 ವರ್ಷಗಳ ಕಾಲ ಸುದೀರ್ಘ ಮತ್ತು ವಿಶಿಷ್ಟ ಸೇವೆಯನ್ನು ಸಲ್ಲಿಸಿದ್ದಾರೆ.

Advertisement

ತ್ರಿಪಾಠಿ ಅವರು ಜುಲೈ 2020 ರಿಂದ ಮೇ 2021 ರವರೆಗೆ ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿದ್ದರು. ಇನ್ನು ಜನವರಿ 2024ರಲ್ಲಿ ನೌಕಾಪಡೆಯ ಉಪಾಧ್ಯಕ್ಷರಾಗಿ ನೇಮಕಗೊಳ್ಳುವ ಮೊದಲು ಪಶ್ಚಿಮ ನೇವಲ್ ಕಮಾಂಡ್ ಮುಖ್ಯಸ್ಥರಾಗಿದ್ದರು. ಈ ಹಿಂದೆ ನೌಕಾಪಡೆಯ ಸಿಬ್ಬಂದಿ ಮುಖ್ಯಸ್ಥರಾಗಿ ಕೂಡ ಸೇವೆ ಸಲ್ಲಿಸಿದ್ದರು.

ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಇಂದು ಭಾರತದ 26ನೇ ನೌಕಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 2 ವರ್ಷ ಮತ್ತು 5 ತಿಂಗಳುಗಳ ಕಾಲ ಈ ಹುದ್ದೆಯಲ್ಲಿದ್ದ ಅಡ್ಮಿರಲ್ ಆರ್. ಹರಿ ಕುಮಾರ್ ಬಳಿಕ ದಿನೇಶ್ ತ್ರಿಪಾಠಿ ಈ ಹುದ್ದೆಯನ್ನು ಏರಿದ್ದಾರೆ.

Advertisement

ತ್ರಿಪಾಠಿ ಅವರು ಕೊಚ್ಚಿಯ ಸಿಗ್ನಲ್ ಸ್ಕೂಲ್, ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್, ವೆಲ್ಲಿಂಗ್ಟನ್, ನೇವಲ್ ಹೈಯರ್ ಕಮಾಂಡ್ ಕೋರ್ಸ್, ಕಾರಂಜಾ ಮತ್ತು ಯುನೈಟೆಡ್ ಸ್ಟೇಟ್ಸ್ ನೇವಲ್ ವಾರ್ ಕಾಲೇಜಿನಲ್ಲಿ ನೇವಲ್ ಕಮಾಂಡ್ ಕಾಲೇಜಿನಲ್ಲಿ ಕೋರ್ಸ್‌ಗಳನ್ನು ಪಡೆದಿದ್ದಾರೆ.

ಅವರು ಪರಮ ವಿಶಿಷ್ಟ ಸೇವಾ ಪದಕ (ಪಿವಿಎಸ್ಎಂ), ಅತಿ ವಿಶಿಷ್ಟ ಸೇವಾ ಪದಕ (ಎವಿಎಸ್ಎಂ) ಮತ್ತು ನವೋ ಸೇನಾ ಪದಕ (ಎನ್ಎಸ್ಎಂ) ಗಳನ್ನೂ ಸಹ ಪಡೆದಿದ್ದಾರೆ

Advertisement
Tags :
Advertisement