For the best experience, open
https://m.newskannada.com
on your mobile browser.
Advertisement

ಮಂಗಳೂರಿಗೆ ಪ್ರಧಾನಿ ಮೋದಿ ಬಂದ ಬಳಿಕ ಕಾಂಗ್ರೆಸ್ ಗೆ ಹತಾಶೆಯಾಗಿದೆ; ಕಾಮತ್

ಮಂಗಳೂರು ಕಾಂಗ್ರೆಸ್ -ಬಿಜೆಪಿ ಕಾರ್ಯಕರ್ತರ ನಡುವೆ ಪ್ರಚಾರದ ವಿಚಾರದಲ್ಲಿ ಹೊಯ್ ಕೈ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ಶಾಸಕ ವೇದವ್ಯಾಸ್ ಕಾಮತ್ ಪ್ರತಿಕ್ರಿಯೆ ನೀಡಿದ್ದಾರೆ.
03:15 PM Apr 19, 2024 IST | Ashitha S
ಮಂಗಳೂರಿಗೆ ಪ್ರಧಾನಿ ಮೋದಿ ಬಂದ ಬಳಿಕ ಕಾಂಗ್ರೆಸ್ ಗೆ ಹತಾಶೆಯಾಗಿದೆ  ಕಾಮತ್

ಮಂಗಳೂರು: ಮಂಗಳೂರು ಕಾಂಗ್ರೆಸ್ -ಬಿಜೆಪಿ ಕಾರ್ಯಕರ್ತರ ನಡುವೆ ಪ್ರಚಾರದ ವಿಚಾರದಲ್ಲಿ ಹೊಯ್ ಕೈ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ಶಾಸಕ ವೇದವ್ಯಾಸ್ ಕಾಮತ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ದೇವಸ್ಥಾನದ ಹೊರಗೆ ಸಾರ್ವಜನಿಕ ರಸ್ತೆಯಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಬಂದು ಇಲ್ಲಿ ಮತಯಾಚನೆ ಮಾಡಬಾರದು ಎಂದಿದ್ದಾರೆ. ಸರಿಯಾದ ಸಂದರ್ಭದಲ್ಲಿ ನಾನು ಅಲ್ಲಿ ಮುಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿಯೂ ಅಲ್ಲಿ ಮತ ಯಾಚನೆ ಮಾಡಿದ್ದಾರೆ. ಮುಖ್ಯ ರಸ್ತೆಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಯಾಕೆ ಮತಯಾಚನೆ ಮಾಡಬಾರದು. ದೇವರ ಕಟ್ ಔಟ್ ಇದೆಯೆಂದು ಮತಯಾಚನೆ ಮಾಡಬಾರದಾ ?. ಯಾವುದೇ ದೇವಸ್ಥಾನದ ಒಳಗೆ ಹೋಗಿ ಮತಕೇಳುವ ಪರಿಸ್ಥಿತಿ ನಮಗೆ ಬರ್ಲಿಲ್ಲ.

ಮೋದಿಯವರನ್ನ ಕಾಣಲು ಬಂದ ಜನ ಕಂಡು ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ. ಚುನಾವಣಾ ಆಯೋಗದ ನೋಟಿಸ್ ನಲ್ಲಿ ಅದು ಸಾರ್ವಜನಿಕ ಜಾಗ ಎಂದು ಉಲ್ಲೇಖವಾಗಿದೆ. ಇಂತಹ ನೋಟಿಸ್ ಗಳು ಕಾಂಗ್ರೆಸ್ ಸರಕಾರದ ಕಾರಣದಿಂದ ಬರುತ್ತಾ ಇರುತ್ತೆ. ಮಂಗಳೂರಿಗೆ ಪ್ರಧಾನಿ ಮೋದಿ ಬಂದ ಬಳಿಕ ಕಾಂಗ್ರೆಸ್ ಗೆ ಹತಾಶೆಯಾಗಿದೆ. ಹೀಗಾಗಿ ಇಂತಹ ಕೆಲಸವನ್ನು ಮಾಡುತ್ತಿದೆ ಎಂದರು.

Advertisement

Advertisement
Tags :
Advertisement