For the best experience, open
https://m.newskannada.com
on your mobile browser.
Advertisement

ಬೆಂಗಳೂರಿನ ಬಿಐಎಎಲ್ ಜೊತೆ ಏರ್ ಇಂಡಿಯಾ ಒಪ್ಪಂದ

ಭಾರತದ ಪ್ರಮುಖ ಜಾಗತಿಕ ವಿಮಾನಯಾನ ಸಂಸ್ಥೆಯಾದ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಮತ್ತು ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಸಂಸ್ಥೆಗಳ ಮಧ್ಯೆ ಮಹತ್ವದ ಒಪ್ಪಂದಾಗಿದೆ.
05:15 PM Apr 08, 2024 IST | Ashitha S
ಬೆಂಗಳೂರಿನ ಬಿಐಎಎಲ್ ಜೊತೆ ಏರ್ ಇಂಡಿಯಾ ಒಪ್ಪಂದ

ಬೆಂಗಳೂರು: ಭಾರತದ ಪ್ರಮುಖ ಜಾಗತಿಕ ವಿಮಾನಯಾನ ಸಂಸ್ಥೆಯಾದ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಮತ್ತು ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಸಂಸ್ಥೆಗಳ ಮಧ್ಯೆ ಮಹತ್ವದ ಒಪ್ಪಂದಾಗಿದೆ.

Advertisement

ದಕ್ಷಿಣ ಭಾರತದ ಪ್ರಮುಖ ವಾಯುಯಾನ ಕೇಂದ್ರವಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸುವ ಆಶಯ ಇದೆ. ಈ ಮೂಲಕ ಭಾರತದಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ವಿಮಾನಯಾನ ಸಂಪರ್ಕ ಹೆಚ್ಚಿಸುವ ಗುರಿ ಹೊಂದಿದ್ದು, ಈ ಒಪ್ಪಂದವು ಭಾರತೀಯ ವಾಯುಯಾನ ಉದ್ಯಮದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಏರ್ ಇಂಡಿಯಾ ಮತ್ತು BIAL ಮುಂದಿನ ಐದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಸಂಪರ್ಕ, ಕಾರ್ಯಾಚರಣೆಯ ದಕ್ಷತೆ ಮತ್ತು ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವ ಗುರಿ ಹೊಂದಿದೆ.

Advertisement

ಈ ಒಪ್ಪಂದದ ಭಾಗವಾಗಿ, BLR ವಿಮಾನ ನಿಲ್ದಾಣದಲ್ಲಿ ಎಂಆರ್​ಒ ಸೌಲಭ್ಯಗಳನ್ನು ಸ್ಥಾಪಿಸಲು ಏರ್ ಇಂಡಿಯಾ ಕರ್ನಾಟಕ ಸರ್ಕಾರದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಏರ್ ಇಂಡಿಯಾದ ಬದ್ಧತೆಯನ್ನು ಒತ್ತಿಹೇಳುತ್ತದೆ.

ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಿಂದ ನೇರ ದೀರ್ಘ-ಪ್ರಯಾಣದ ಮಾರ್ಗಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತನ್ನ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸುತ್ತಿದೆ. ಈ ಪಾಲುದಾರಿಕೆಯು MRO ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಜೊತೆಗೆ, ರಾಜ್ಯದಲ್ಲಿ ಹೆಚ್ಚು ನುರಿತ ವ್ಯಕ್ತಿಗಳಿಗೆ 1,200 ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಯೋಜಿಸಲಾಗಿದೆ.

Advertisement
Tags :
Advertisement