ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಏರ್ ಇಂಡಿಯಾಗೆ 1.10 ಕೋಟಿ ದಂಡ ವಿಧಿಸಿದ ಡಿಜಿಸಿಎ:ಯಾಕೆ ಗೊತ್ತ ?

ಸುರಕ್ಷತೆಗೆ ಸಂಬಂಧಿಸಿದ ನಿಯಮ ಉಲ್ಲಂಘನೆಯಾಗಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ನಿಯಂತ್ರಕ ಸಂಸ್ಥೆ ಏರ್ ಇಂಡಿಯಾ ಗೆ 1.1 ಕೋಟಿ ರೂಪಾಯಿ ದಂಡ ವಿಧಿಸಿದೆ. 
05:32 PM Jan 24, 2024 IST | Ashitha S

ನವದೆಹಲಿ: ಸುರಕ್ಷತೆಗೆ ಸಂಬಂಧಿಸಿದ ನಿಯಮ ಉಲ್ಲಂಘನೆಯಾಗಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ನಿಯಂತ್ರಕ ಸಂಸ್ಥೆ ಏರ್ ಇಂಡಿಯಾ ಗೆ 1.1 ಕೋಟಿ ರೂಪಾಯಿ ದಂಡ ವಿಧಿಸಿದೆ.

Advertisement

ದೀರ್ಘಾವಧಿ ತೆಗೆದುಕೊಳ್ಳುವ ದುರ್ಗಮ ಮಾರ್ಗಗಳಲ್ಲಿ ಸಂಚರಿಸುವ ವಿಮಾನಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ಅಂಶಗಳ ಉಲ್ಲಂಘನೆಯಾಗಿರುವುದರ ಬಗ್ಗೆ ದೂರು ಬಂದಿತ್ತು ಎಂದು ದೇಶದ ವೈಮಾನಿಕ ನಿಯಂತ್ರಕ ಸಂಸ್ಥೆ ತಿಳಿಸಿದೆ. ಈ ಪ್ರಕರಣವು ತಯಾರಕರು ನಿಗದಿಪಡಿಸಿದ ಕಾರ್ಯಕ್ಷಮತೆಯ ಮಿತಿಗಳನ್ನು ಅನುಸರಿಸದ ಗುತ್ತಿಗೆ ವಿಮಾನಕ್ಕೆ ಸಂಬಂಧಿಸಿದ್ದಾಗಿದೆ.

ಏರ್‌ಲೈನ್ ಉದ್ಯೋಗಿಯೊಬ್ಬರು ಸ್ವಯಂಪ್ರೇರಣೆಯಿಂದ ಉಲ್ಲಂಘನೆಗಳ ಬಗ್ಗೆ ದೂರು ನೀಡಿದ ನಂತರ ತನಿಖೆ ನಡೆಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹೇಳಿದೆ. "ವಿಮಾನಯಾನ ಸಂಸ್ಥೆಯು ಅನುಸರಿಸದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಡಿಜಿಸಿಎ ಹೇಳಿದೆ. ಏರ್‌ಲೈನ್‌ಗೆ ಶೋಕಾಸ್ ನೋಟಿಸ್ ನ್ನು ನೀಡಿ ಅಂತಿಮವಾಗಿ ದಂಡವನ್ನು ವಿಧಿಸಲಾಗಿದೆ.  ತನ್ನ ನೋಟಿಸ್‌ಗೆ ಏರ್‌ಲೈನ್‌ನ ಪ್ರತಿಕ್ರಿಯೆಯನ್ನು ಆಧರಿಸಿ, ಡಿಜಿಸಿಎ ಏರ್ ಇಂಡಿಯಾಗೆ ₹ 1.1 ಕೋಟಿ ದಂಡ ವಿಧಿಸಿದೆ.

Advertisement

"ಗುತ್ತಿಗೆಗೆ ಪಡೆದ ವಿಮಾನದ ಕಾರ್ಯಾಚರಣೆಗಳು ನಿಯಂತ್ರಕ / OEM ಕಾರ್ಯಕ್ಷಮತೆಯ ಮಿತಿಗಳಿಗೆ ಅನುಗುಣವಾಗಿಲ್ಲದ ಕಾರಣ, DGCA ಈ ಕ್ರಮ ಕೈಗೊಂಡಿದೆ ಮತ್ತು ಏರ್ ಇಂಡಿಯಾಕ್ಕೆ ₹ 1.10 ಕೋಟಿ ದಂಡವನ್ನು ವಿಧಿಸಿದೆ" ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement
Tags :
GOVERNMENTindiaLatestNewsNewsKannadaಏರ್ ಇಂಡಿಯಾಡಿಜಿಸಿಎನವದೆಹಲಿ
Advertisement
Next Article