ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಒಟ್ಟಿಗೆ ಕಾಣಿಸಿಕೊಂಡ ಐಶ್ವರ್ಯಾ, ಅಭಿಷೇಕ್​, ಅಮಿತಾಭ್

ಇತ್ತೀಚೆಗೆ ನಟಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯುತ್ತಾರೆ ಎಂದು ವದಂತಿ ಹರಡಿತ್ತು
10:57 AM Dec 16, 2023 IST | Ramya Bolantoor

ಮುಂಬೈ:  ಇತ್ತೀಚೆಗೆ ನಟಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯುತ್ತಾರೆ ಎಂದು ವದಂತಿ ಹರಡಿತ್ತು. ಅದಕ್ಕೆ ಪೂರಕವಾಗಿ ಹಲವು ಘಟನೆಗಳು ನಡೆದಿವೆ. ಆದರೆ ಈಗ ಬಚ್ಚನ್ ಕುಟುಂಬದ ಎಲ್ಲರೂ ಒಟ್ಟಾಗಿ ಕಾಣಿಸಿಕೊಂಡಿದ್ದು, ವದಂತಿಗಳಿಗೆ ನಾಂದಿ ಹಾಡಿದ್ದಾರೆ. ಅಭಿಷೇಕ್ ಹಾಗೂ ಐಶ್ವರ್ಯಾ ಒಟ್ಟಿಗೆ ಕಾಣಿಸಿಕೊಂಡ ಬಳಿಕ ಅವರ ಅಭಿಮಾನಿಗಳು ಫುಲ್‌ ಖುಷಿಪಟ್ಟಿದ್ದಾರೆ.

Advertisement

ಮುಂಬೈನಲ್ಲಿರುವ ಧೀರೂಬಾಯಿ ಅಂಬಾನಿ ಇಂಟರ್​ನ್ಯಾಷನಲ್​ ಸ್ಕೂಲ್​ನಲ್ಲಿ ಬಚ್ಚನ್ ಕುಟುಂಬದ ಕುಡಿ ಆರಾಧ್ಯಾ ಶಿಕ್ಷಣ ಪಡೆಯುತ್ತಿದ್ದಾಳೆ. ಅವಳ ಶಾಲೆಯಲ್ಲಿ ಶುಕ್ರವಾರ (ಡಿಸೆಂಬರ್ 15) ನಡೆದ ಕಾರ್ಯಕ್ರಮಕ್ಕೆ ಐಶ್ವರ್ಯಾ, ಅಭಿಷೇಕ್, ಅಮಿತಾಭ್, ಅಗಸ್ತ್ಯ ನಂದ ಆಗಮಿಸಿದ್ದರು. ಈ ಕಾರ್ಯಕ್ರಮದ ವಿಡಿಯೋನ ಪಾಪರಾಜಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಐಶ್ವರ್ಯಾ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

https://www.instagram.com/snehzala/?utm_source=ig_embed&ig_rid=b3a51a8a-b67b-4ce4-aeb2-f47176afe8a8

Advertisement

Advertisement
Tags :
LatestNewsNewsKannadaಅಭಿಷೇಕ್ ಬಚ್ಚನ್ಐಶ್ವರ್ಯಾ ರೈಮುಂಬೈ
Advertisement
Next Article