ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ʼಅಜಂತಾ-ಎಲ್ಲೋರಾ ಚಲನಚಿತ್ರೋತ್ಸವʼ: ʻಜಾವೇದ್ ಅಖ್ತರ್ʼಗೆ ಗೌರವ

ಅಜಂತಾ-ಎಲ್ಲೋರಾ ಚಲನಚಿತ್ರೋತ್ಸವದಲ್ಲಿ ಹಿರಿಯ ಗೀತರಚನೆಕಾರ-ಚಿತ್ರಕಥೆಗಾರ ಜಾವೇದ್ ಅಖ್ತರ್ ಅವರಿಗೆ ʻಪದ್ಮಪಾಣಿ ಜೀವಮಾನ ಸಾಧನೆ ಪ್ರಶಸ್ತಿʼಯನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿದುಬಂದಿದೆ.
12:55 PM Dec 19, 2023 IST | Ramya Bolantoor

ಮುಂಬೈ: ಅಜಂತಾ-ಎಲ್ಲೋರಾ ಚಲನಚಿತ್ರೋತ್ಸವದಲ್ಲಿ ಹಿರಿಯ ಗೀತರಚನೆಕಾರ-ಚಿತ್ರಕಥೆಗಾರ ಜಾವೇದ್ ಅಖ್ತರ್ ಅವರಿಗೆ ʻಪದ್ಮಪಾಣಿ ಜೀವಮಾನ ಸಾಧನೆ ಪ್ರಶಸ್ತಿʼಯನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿದುಬಂದಿದೆ.

Advertisement

ಹಿಂದಿ ಚಿತ್ರರಂಗದ ಕ್ಲಾಸಿಕ್‌ಗಳಾದ "ಜಂಜೀರ್", "ದೀವಾರ್", "ಶೋಲೆ", "ಡಾನ್", "ಕಾಲಾ ಪತ್ತರ್" ಮತ್ತು "ಮಿಸ್ಟರ್ ಇಂಡಿಯಾ" ಗಳ ಸಹ-ಲೇಖಕರಾದ ಅಖ್ತರ್ ಅವರನ್ನು ಭಾರತೀಯ ಚಲನಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ಗೌರವಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಜನವರಿ 3, 2024 ರಂದು ಛತ್ರಪತಿ ಸಂಭಾಜಿನಗರದ ಎಂಜಿಎಂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ರುಕ್ಮಿಣಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

Advertisement

ಅಜಂತಾ-ಎಲ್ಲೋರಾ ಚಲನಚಿತ್ರೋತ್ಸವದ ಆಯೋಜನಾ ಸಮಿತಿಯ ಅಧ್ಯಕ್ಷ ನಂದಕಿಶೋರ್ ಕಗ್ಲಿವಾಲ್ ಮತ್ತು ಮುಖ್ಯ ಮಾರ್ಗದರ್ಶಕ ಅಂಕುಶರಾವ್ ಕದಂ ಈ ಘೋಷಣೆ ಮಾಡಿದ್ದಾರೆ.

Advertisement
Tags :
Ajanta-EllorafestivalfilmLatestNewsಮುಂಬೈ
Advertisement
Next Article