For the best experience, open
https://m.newskannada.com
on your mobile browser.
Advertisement

ಸೊಸೆ ಅತ್ತೆ-ಮಾವನಿಂದ ಜೀವನಾಂಶ ಕೇಳುವಂತಿಲ್ಲ: ಹೈಕೋರ್ಟ್‌

ಸೊಸೆಗೆ ತನ್ನ ಅತ್ತೆ, ಮಾವನಿಂದ ಜೀವನಾಂಶ ಕೇಳುವ ಹಕಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಹಾಗಾಗಿ ಯಾರಾದರೂ ಸೊಸೆಯಂದಿರು ಮಾವನ ಬಳಿ ಜೀವನಾಂಶ ಕೇಳುವ ಲೆಕ್ಕಾಚಾರ ಇದ್ದರೆ ಅದು ಕೈಗೊಡುವುದಿಲ್ಲ. ಅಪರಾಧ ದಂಡ ಸಂಹಿತೆ ಸೆಕ್ಷನ್‌ 125ರಡಿ ಪತ್ನಿ ತನ್ನ ಪತಿಯಿಂದ ಜೀವನಾಂಶ ಕೇಳಬಹುದು.
02:01 PM Mar 12, 2024 IST | Ashitha S
ಸೊಸೆ ಅತ್ತೆ ಮಾವನಿಂದ ಜೀವನಾಂಶ ಕೇಳುವಂತಿಲ್ಲ  ಹೈಕೋರ್ಟ್‌

ಬೆಂಗಳೂರು: ಸೊಸೆಗೆ ತನ್ನ ಅತ್ತೆ, ಮಾವನಿಂದ ಜೀವನಾಂಶ ಕೇಳುವ ಹಕಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಹಾಗಾಗಿ ಯಾರಾದರೂ ಸೊಸೆಯಂದಿರು ಮಾವನ ಬಳಿ ಜೀವನಾಂಶ ಕೇಳುವ ಲೆಕ್ಕಾಚಾರ ಇದ್ದರೆ ಅದು ಕೈಗೊಡುವುದಿಲ್ಲ. ಅಪರಾಧ ದಂಡ ಸಂಹಿತೆ ಸೆಕ್ಷನ್‌ 125ರಡಿ ಪತ್ನಿ ತನ್ನ ಪತಿಯಿಂದ ಜೀವನಾಂಶ ಕೇಳಬಹುದು.

Advertisement

ಆದರೆ ಪತಿ ನಿಧನದ ನಂತರ ಪತ್ನಿ ಅತ್ತೆ, ಮಾವನನ್ನು ಜೀನಾಂಶ ಕೇಳುವಂತೆಯೇ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಬಳ್ಳಾರಿಯ ದಂಪತಿಯ ಪ್ರಕರಣದಲ್ಲಿ ತನ್ನ ಪತಿ ನಿಧನದ ನಂತರ ಪತ್ನಿ, ತನ್ನ ಪತಿಯ ತಂದೆ-ತಾಯಿಯಿಂದ ಜೀವನಾಂಶ ಕೋರಲಾಗದು ಎಂದು ಆದೇಶ ನೀಡಿ, ಸೊಸೆ ಮತ್ತು ಆಕೆಯ ಮಕ್ಕಳಿಗೆ, ಅತ್ತೆ-ಮಾವ ಮಾಸಿಕ 25 ಸಾವಿರ ರೂ. ಜೀವನಾಂಶ ನೀಡಬೇಕೆಂದು ಅಧೀನ ನ್ಯಾಯಾಲಯ ಹೊರಡಿಸಿದ್ದ ಅದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹುಬ್ಬಳ್ಳಿಯ ಅಬ್ದುಲ್‌ ಖಾದರ್‌ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿಆಲಿಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ನೀಡಿದೆ.

Advertisement

Advertisement
Tags :
Advertisement