For the best experience, open
https://m.newskannada.com
on your mobile browser.
Advertisement

ಬೆಂಗಳೂರು - ಮೈಸೂರು ಮಾರ್ಗದ ಎಲ್ಲಾ ರೈಲುಗಳು ಸ್ಥಗಿತ

ಬೆಂಗಳೂರಿನ ಚೆಲ್ಲಘಟ್ಟ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಹಿನ್ನೆಲೆ ಯಲ್ಲಿ ಬೆಂಗಳೂರು-ಮೈಸೂರು ಮಾರ್ಗದ ಎಲ್ಲಾ ರೈಲು ಗಳನ್ನು ಮಂಗಳವಾರ ರಾತ್ರಿ 10 ಗಂಟೆಯಿಂದ ಇಂದು ಬೆಳಗ್ಗೆ 9 ಗಂಟೆಯ ವರೆಗೆ ಸ್ಥಗಿತ ಮಾಡಲಾಗಿದೆ.
09:55 AM Jul 10, 2024 IST | Ashitha S
ಬೆಂಗಳೂರು   ಮೈಸೂರು ಮಾರ್ಗದ ಎಲ್ಲಾ ರೈಲುಗಳು ಸ್ಥಗಿತ

ರಾಮನಗರ: ಬೆಂಗಳೂರಿನ ಚೆಲ್ಲಘಟ್ಟ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಹಿನ್ನೆಲೆ ಯಲ್ಲಿ ಬೆಂಗಳೂರು-ಮೈಸೂರು ಮಾರ್ಗದ ಎಲ್ಲಾ ರೈಲು ಗಳನ್ನು ಮಂಗಳವಾರ ರಾತ್ರಿ 10 ಗಂಟೆಯಿಂದ ಇಂದು ಬೆಳಗ್ಗೆ 9 ಗಂಟೆಯ ವರೆಗೆ ಸ್ಥಗಿತ ಮಾಡಲಾಗಿದೆ.

Advertisement

ಎಲ್ಲಾ ರೈಲುಗಳ ಸಂಚಾರ ಬಂದ್ ಆಗಿರುವುದರಿಂದ 10 ರಿಂದ 12 ಸಾವಿರ ಪ್ರಯಾಣಿಕರಿಗೆ ಅನಾನುಕೂಲವಾಗಿದೆ. ಬೆಂಗಳೂರಿಗೆ ಹೋಗಬೇಕಿರುವ ರೈಲುಗಳು ಶೆಟ್ಟಿಹಳ್ಳಿ, ಚನ್ನಪಟ್ಟಣ, ರಾಮನಗರ, ಬಿಡದಿ ರೈಲು ನಿಲ್ದಾಣ ಗಳಲ್ಲಿ ನಿಲುಗಡೆ ಮಾಡಲಾಗಿದೆ.

ಬೆಳಗ್ಗೆ 5 ಗಂಟೆಗೆ ಮುಗಿಯ ಬೇಕಿದ್ದ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ರೈಲು ಸಂಚಾರಕ್ಕೆ ಸಮಸ್ಯೆಯಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳ ಬೇಕಿದ್ದ 12 ಕ್ಕೂ ಹೆಚ್ಚು ರೈಲುಗಳು ಸ್ಥಗಿತವಾಗಿದೆ.

Advertisement

Advertisement
Tags :
Advertisement