For the best experience, open
https://m.newskannada.com
on your mobile browser.
Advertisement

ಆಳ್ವಾಸ್‌ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ನೇಣಿಗೆ ಶರಣು

ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೇಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕೋಲಾರ ಮೂಲದ ಭುವನ್‌(17) ಇಂದು ನೇಣಿಗೆ ಶರಣಾಗಿದ್ದಾನೆ.ಇತ್ತೀಚೆಗಷ್ಟೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತರ್ಚಿಹಾಳ ಗ್ರಾಮದ ಮಲ್ಲಪ್ಪನವರ ಎಂಬುವವರ ಪುತ್ರ ಮನೋಜ್ ಎಂಬಾತ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಈ ಬೆನ್ನಲ್ಲೆ ಇನ್ನೋರ್ವ ಬಲಿಯಾಗಿದ್ದಾನೆ.
05:35 PM Mar 14, 2024 IST | Nisarga K
ಆಳ್ವಾಸ್‌ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ನೇಣಿಗೆ ಶರಣು
ಆಳ್ವಾಸ್‌ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ನೇಣಿಗೆ ಶರಣು

ಮಂಗಳೂರು: ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೇಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೋಲಾರ ಮೂಲದ ಭುವನ್‌(17) ಇಂದು ನೇಣಿಗೆ ಶರಣಾಗಿದ್ದಾನೆ. ಇತ್ತೀಚೆಗಷ್ಟೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತರ್ಚಿಹಾಳ ಗ್ರಾಮದ ಮಲ್ಲಪ್ಪನವರ ಎಂಬುವವರ ಪುತ್ರ ಮನೋಜ್ ಎಂಬಾತ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಈ ಬೆನ್ನಲ್ಲೆ ಇನ್ನೋರ್ವ ಬಲಿಯಾಗಿದ್ದಾನೆ.

Advertisement

ವಿಷಯ ತಿಳಿದ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ ಕೂಡಲೇ ಬಂದು ಮುತ್ತಗೆ ಹಾಕಿದೆ.ಈ ಒಕ್ಕೂಟದ ಜಿಲ್ಲಾಧ್ಯಕ್ಷ ಸುಹಾನ್ ನೇತೃತ್ವದಲ್ಲಿ ಮುತ್ತಿಗೆ‌ ಹಾಕಲಾಗಿದೆ.ಸ್ಥಳಕ್ಕೆ ಪೊಲೀಸರು ಆಗಮಿಸಿ ಕಾಲೇಜಿಗೆ ಭದ್ರತೆ ಒದಗಿಸಿದ್ದಾರೆ.ಇನ್ನು ವಿದ್ಯಾರ್ಥಿ ಆತ್ಮಹತ್ಯೆ ಕುರಿತು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿಷ್ಪಕ್ಷಪಾತ ತನಿಖೆಗೆ ವಿದ್ಯಾರ್ಥಿ ಸಂಘಟನೆ ಪೊಲೀಸರಿಗೆ ಆಗ್ರಹ ಮಾಡಿದೆ.

Advertisement
Advertisement
Tags :
Advertisement