For the best experience, open
https://m.newskannada.com
on your mobile browser.
Advertisement

ಖ್ಯಾತ ಭರತನಾಟ್ಯ ಕಲಾವಿದ ಅಮರನಾಥ್​ ಘೋಷ್​ ಅವರನ್ನು ಗುಂಡಿಕ್ಕಿ ಹತ್ಯೆ

ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಕಲಾವಿದ ಅಮರನಾಥ್​ ಘೋಷ್ ಅವರನ್ನು ಅಮೆರಿಕದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕಿರುತೆರೆ ನಟಿ ದೇವೋಲೀನಾ ಭಟ್ಟಾಚಾರ್ಜಿ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ನೀಡಿದ್ದಾರೆ.
09:24 AM Mar 03, 2024 IST | Ashitha S
ಖ್ಯಾತ ಭರತನಾಟ್ಯ ಕಲಾವಿದ ಅಮರನಾಥ್​ ಘೋಷ್​ ಅವರನ್ನು ಗುಂಡಿಕ್ಕಿ ಹತ್ಯೆ

ಅಮೆರಿಕ: ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಕಲಾವಿದ ಅಮರನಾಥ್​ ಘೋಷ್ ಅವರನ್ನು ಅಮೆರಿಕದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕಿರುತೆರೆ ನಟಿ ದೇವೋಲೀನಾ ಭಟ್ಟಾಚಾರ್ಜಿ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ನೀಡಿದ್ದಾರೆ.

Advertisement

ಅಮರನಾಥ್ ಅವರ ಸ್ನೇಹಿತರಾಗಿದ್ದರು. ಅಮರನಾಥ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವೋಲೀನಾ ಮನವಿ ಮಾಡಿದ್ದಾರೆ.

ದೇವೋಲೀನಾ ಭಟ್ಟಾಚಾರ್ಜಿ ಅವರು ಅಮರನಾಥ್ ಅವರ ಸಾವಿಗೆ ಸಂಬಂಧಿಸಿದ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮಂಗಳವಾರ (ಫೆಬ್ರವರಿ 27) ಸಂಜೆ, ಮಿಸೌರಿಯ ಸೇಂಟ್ ಲೂಯಿಸ್‌ನಲ್ಲಿ ನನ್ನ ಸ್ನೇಹಿತ ಅಮರನಾಥ್ ಘೋಷ್ ಅವರನ್ನು ಕೊಲೆ ಮಾಡಲಾಗಿದೆ.

Advertisement

ಅಮರನಾಥ್​ರ ತಂದೆ ಅಮರ್​ನಾಥ್​ ಅವರು ಚಿಕ್ಕವರಿರುವಾಗಲೇ ತೀರಿಕೊಂಡಿದ್ದರು. ಮೂರು ವರ್ಷಗಳ ಹಿಂದೆ ಅಮರನಾಥ್​ರ ತಾಯಿಯೂ ಇರಲಿಲ್ಲ. ಅಮರನಾಥ್ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಅಮರನಾಥ್​ ಕೋಲ್ಕತ್ತಾದವರು ಎಂದು ದೇವೋಲೀನಾ ಬರೆದಿದ್ದಾರೆ. ಪಿಎಚ್‌ಡಿ ಮಾಡುತ್ತಿದ್ದ ಅತ್ಯುತ್ತಮ ನೃತ್ಯ ಕಲಾವಿದ, ಸಂಜೆ ವಾಕಿಂಗ್ ಹೋಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement
Tags :
Advertisement