ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಭೀಕರ ಬರಕ್ಕೆ ತುತ್ತಾದ ಅಮೆಜಾನ್: ಸತ್ತು ಬೀಳುತ್ತಿವೆ ಡಾಲ್ಫಿನ್‌ಗಳು

ದಕ್ಷಿಣ ಅಮೆರಿಕದಲ್ಲಿ ಚಾಚಿಕೊಂಡಿರುವ ಅಮೆಜಾನ್ ನದಿ, ಕೋಟ್ಯಂತರ ಜನರ ಪಾಲಿಗೆ ಅಮೃತದ ಬಟ್ಟಲು. 6,400 ಕಿಲೋ ಮೀಟರ್ ಅಥವಾ 4,000 ಮೈಲಿ ದೂರ ಹರಿಯುವ ಅಮೆಜಾನ್ ನದಿ ಇದು.  ಬ್ರೆಜಿಲ್‌ ದೇಶದಲ್ಲಿ ಅಮೆಜಾನ್ ಮಳೆಕಾಡಿನ ಬಹುಭಾಗ ಆವರಿಸಿದ್ದು ಕೋಟ್ಯಂತರ ಜನರಿಗೆ ಕುಡಿಯುವ ನೀರು ಒದಗಿಸುತ್ತದೆ. ಆದರೆ ಈ ಬಾರಿ ಅಮೆಜಾನ್‌ನ ಪ್ರಮುಖ ಉಪನದಿಗಳ ಪೈಕಿ 2 ಉಪನದಿಗಳು ಸಂಪೂರ್ಣ ಬತ್ತಿ ಹೋಗಿವೆ.
05:31 PM Jan 05, 2024 IST | Ashitha S

ದಕ್ಷಿಣ ಅಮೇರಿಕಾ: ದಕ್ಷಿಣ ಅಮೆರಿಕದಲ್ಲಿ ಚಾಚಿಕೊಂಡಿರುವ ಅಮೆಜಾನ್ ನದಿ, ಕೋಟ್ಯಂತರ ಜನರ ಪಾಲಿಗೆ ಅಮೃತದ ಬಟ್ಟಲು. 6,400 ಕಿಲೋ ಮೀಟರ್ ಅಥವಾ 4,000 ಮೈಲಿ ದೂರ ಹರಿಯುವ ಅಮೆಜಾನ್ ನದಿ ಇದು.  ಬ್ರೆಜಿಲ್‌ ದೇಶದಲ್ಲಿ ಅಮೆಜಾನ್ ಮಳೆಕಾಡಿನ ಬಹುಭಾಗ ಆವರಿಸಿದ್ದು ಕೋಟ್ಯಂತರ ಜನರಿಗೆ ಕುಡಿಯುವ ನೀರು ಒದಗಿಸುತ್ತದೆ. ಆದರೆ ಈ ಬಾರಿ ಅಮೆಜಾನ್‌ನ ಪ್ರಮುಖ ಉಪನದಿಗಳ ಪೈಕಿ 2 ಉಪನದಿಗಳು ಸಂಪೂರ್ಣ ಬತ್ತಿ ಹೋಗಿವೆ.

Advertisement

ರಿಯೊ ನೆಗೊ ಹಾಗೂ ಮಡೈರಾಗೆ ಈ ಪರಿಸ್ಥಿತಿ ಎದುರಾಗಿದೆ. ಸೊಲಿಮೊಸ್, ಜುರುವಾ, ಪುರಸ್ ನದಿಗಳ ನೀರಿನ ಮಟ್ಟ ಕೂಡ ಸಾರ್ವಕಾಲಿಕ ಮಟ್ಟದಲ್ಲಿ ಕುಸಿತ ಕಂಡಿದೆ. ಹೀಗಾಗಿ ವರ್ಷ ಪೂರ್ತಿ ತುಂಬಿ ಹರಿಯುವ ಅಮೆಜಾನ್ ನದಿ ಈಗ ಬರಿದಾಗಿ, ಬಿರುಕು ಬಿಟ್ಟ ನೆಲ ಕಾಣುತ್ತಿದೆ.

ಪ್ರಪಂಚದಲ್ಲೇ ಅತೀಹೆಚ್ಚು ಇಂಗಾಲದ ಡೈ ಆಕ್ಸೈಡ್​ ಅನ್ನು ಹೀರಿಕೊಳ್ಳುವ ಅಮೆಜಾನ್ ಪ್ರದೇಶ ಭೀಕರ ಬರಕ್ಕೆ ತುತ್ತಾಗಿರುವುದು ಆತಂಕಕ್ಕೆ ಕಾರಣವಾಘೀಧೇ. ಕಳೆದ 100 ವರ್ಷಗಳಿಂದ ಇಂತಹ ಬರ ಬರಲಿಲ್ಲವೆಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಹಲವಾರು ಉಪನದಿಗಳಿಂದ ಕೂಡಿದ ಅಮೆಜಾನ್ ನದಿಯು ನೂರಾರು ಹಳ್ಳಿಗಳನ್ನು ತಲುಪುತ್ತಿಲ್ಲವಾಗಿದೆ. ನೀರಿಲ್ಲದೇ ಸಾವಿರಾರು ಜಲಚರಗಳು ಸಾವನ್ನಪ್ಪುತ್ತಿದೆ. ಇನ್ನು ಅಮೆಜಾನ್ ಕಾಡಿನಲ್ಲೂ ಅತೀ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದ್ದು ಅಲ್ಲಲ್ಲಿ ಕಾಡ್ಗಿಚ್ಚು ಹಬ್ಬಿ ಅರಣ್ಯ ನಾಶವಾಗ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಪ್ರಪಂಚದ ಅತ್ಯಮೂಲ್ಯ ಆಸ್ತಿಯನ್ನು ಕಳೆದುಕೊಳ್ಳ ಬೇಕಾಗಬಹುದು ಹಾಗೆಯೇ ಇದು ಜಗತ್ತಿನ ವಿನಾಶದ ಸೂಚನೆ ಎಂದು ವಿಜ್ಞಾನಿಗಳು ಆತಂಕ ಹೊರಹಾಕಿದ್ದಾರೆ.

ಅಮೆಜಾನ್ ಕಾಡಿನಲ್ಲಿ ಬರ ಆವರಿಸಿರುವ ಕಾರಣ ಪ್ರವಾಸಿಗರು ಬರುತ್ತಿಲ್ಲ. ಹೀಗಾಗಿ ಸ್ಥಳೀಯರು ತತ್ತರಿಸಿ ಹೋಗಿದ್ದಾರೆ. ಜೊತೆಗೆ ತಿನ್ನಲು ಅನ್ನ ಇಲ್ಲದೆ, ಕುಡಿಯುವ ನೀರಿಗೂ ಬರ ಎದುರಾಗಿದೆ. ಹಾಗೇ ಕಾಡಿನಲ್ಲಿ ಸಿಗುತ್ತಿದ್ದ ಹಣ್ಣು, ತರಕಾರಿ ಮಾರುತ್ತಿದ್ದ ಬುಡಕಟ್ಟು ಜನಾಂಗದವರು ಕೂಡ ಏನು ಮಾಡುವುದು ಅಂತಾ ಕಣ್ಣೀರು ಹಾಕುತ್ತಿದ್ದಾರೆ.

ಬೇಸರದ ಸಂಗತಿಯೆಂದರೇ ಏನೂ ತಪ್ಪು ಮಾಡದ ಮನುಷ್ಯ ಸ್ನೇಹಿಯಾಗಿ ಬದುಕುತ್ತಿರುವ ಅಮೆಜಾನ್ ನದಿಯ ಸಿಹಿ ನೀರಿನ ಡಾಲ್ಫಿನ್ಸ್ ಕೂಡ ಸತ್ತು ದಡಕ್ಕೆ ಬಂದು ಬಿದ್ದಿವೆ. ಹಾಗೇ ಅಮೆಜಾನ್ ಕಾಡಿನಲ್ಲಿ ಈವರೆಗೆ ಸಾವಿರಾರು ತಳಿಯ ಸಸ್ಯಗಳು ನಾಶವಾಗಿವೆ ಅಂತಾ ಹೇಳಲಾಗಿದೆ. ಇದು ಅಮೆಜಾನ್ ಕಾಡಿನ ಭೀಕರ ಬರಗಾಲದ ಎಫೆಕ್ಟ್. ಇನ್ನು ಪರಿಸ್ಥಿತಿ ಹೀಗೆ ಕೈಮೀರಿ ಹೋದರೂ ಬ್ರೆಜಿಲ್ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

Advertisement
Tags :
GOVERNMENTindiaKARNATAKALatestNewsNewsKannadaಅಮೆಜಾನ್ನವದೆಹಲಿಪ್ರಧಾನಿ ನರೇಂದ್ರ ಮೋದಿಭೀಕರ ಬರ
Advertisement
Next Article