For the best experience, open
https://m.newskannada.com
on your mobile browser.
Advertisement

ಅಂಬಾಗಿಲು: ಬೈಕ್ ಗೆ ಟಿಪ್ಪರ್ ಡಿಕ್ಕಿ; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

ಹಿಂದಿನಿಂದ ಬಂದ ಟಿಪ್ಪರ್ ವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಟಿಪ್ಪರ್ ನ ಚಕ್ರದಡಿಗೆ ಸಿಲುಕಿ ಸ್ಥಳದಲ್ಲೇ ಪ್ರಾಣಬಿಟ್ಟ ಘಟನೆ ಉಡುಪಿ-ಅಂಬಾಗಿಲು ಮುಖ್ಯ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
06:13 PM Apr 19, 2024 IST | Chaitra Kulal
ಅಂಬಾಗಿಲು  ಬೈಕ್ ಗೆ ಟಿಪ್ಪರ್ ಡಿಕ್ಕಿ  ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

ಉಡುಪಿ: ಹಿಂದಿನಿಂದ ಬಂದ ಟಿಪ್ಪರ್ ವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಟಿಪ್ಪರ್ ನ ಚಕ್ರದಡಿಗೆ ಸಿಲುಕಿ ಸ್ಥಳದಲ್ಲೇ ಪ್ರಾಣಬಿಟ್ಟ ಘಟನೆ ಉಡುಪಿ-ಅಂಬಾಗಿಲು ಮುಖ್ಯ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

Advertisement

ಮೃತ ಸವಾರನನ್ನು ಬ್ರಹ್ಮಾವರ ಮಟಪಾಡಿ ನಿವಾಸಿ ಪ್ರಭಾಕರ ಆಚಾರಿ ಎಂದು ಗುರುತಿಸಲಾಗಿದೆ. ಅವರು ಅಂಬಾಗಿಲಿನಿಂದ ಪೆರಂಪಳ್ಳಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ಅಂಬಾಗಿಲು- ಪೆರಂಪಳ್ಳಿ ರಸ್ತೆಯ ತಿರುವಿನಲ್ಲಿ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ.

ಟಿಪ್ಪರ್ ಡಿಕ್ಕಿಯಾದ ರಭಸಕ್ಕೆ ಟಿಪ್ಪರ್ ನ ಚಕ್ರದಡಿಗೆ ಸಿಲುಕಿದ ಪ್ರಭಾಕರ್ ಅವರು ಸ್ಥಳದಲ್ಲೇ ಉಸಿರುಚೆಲ್ಲಿದ್ದಾರೆ. ಬೈಕ್ ನಲ್ಲಿದ್ದ ಸಹಸವಾರ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Advertisement

Advertisement
Tags :
Advertisement