For the best experience, open
https://m.newskannada.com
on your mobile browser.
Advertisement

ಅಮೇರಿಕಾ ಪ್ರಜೆ ಸ್ಯಾಮ್ ತುಳು ಭಾಷ ಪ್ರೇಮಕ್ಕೆ ತುಳುವರೇ ಫಿದಾ

ಅಮೇರಿಕಾದ ಪ್ರಜೆಯೊಬ್ಬರು ತುಳು ಭಾಷೆಗೆ ಫಿದಾ ಆಗಿ ತುಳುವರ ಸಂಸ್ಕೃತಿ ಆರಾಧನೆ ಕಲಿಯಲೆಂದೇ ಅಮೇರಿಕಾದಿಂದ ಮಂಗಳೂರಿಗೆ ಹಾರಿ ಬಂದಿದ್ದಾರೆ.
01:40 PM May 16, 2024 IST | Ashitha S
ಅಮೇರಿಕಾ ಪ್ರಜೆ ಸ್ಯಾಮ್ ತುಳು ಭಾಷ ಪ್ರೇಮಕ್ಕೆ ತುಳುವರೇ ಫಿದಾ

ಮಂಗಳೂರು: ಅಮೇರಿಕಾದ ಪ್ರಜೆಯೊಬ್ಬರು ತುಳು ಭಾಷೆಗೆ ಫಿದಾ ಆಗಿ ತುಳುವರ ಸಂಸ್ಕೃತಿ ಆರಾಧನೆ ಕಲಿಯಲೆಂದೇ ಅಮೇರಿಕಾದಿಂದ ಮಂಗಳೂರಿಗೆ ಹಾರಿ ಬಂದಿದ್ದಾರೆ.

Advertisement

ಹೌದು. . ತುಳುವರೇ ಅವಾಕ್ಕಾಗುವ ರೀತಿಯಲ್ಲಿ ತುಳು ಮಾತನಾಡುವ ಅಮೇರಿಕಾದ ಸ್ಯಾಮ್ ಅವರಿಗೆ ತುಳುವಿನಲ್ಲಿ ಮಾತಾನಾಡುವುದೆಂದರೆ ಇಷ್ಟ ,ತುಳುವರೊಂದಿಗೆ ಬೆರೆಯುವುದೆಂದರೆ ಸಂತಸ. ಈ ಕಾರಣದಿಂದಲೇ ಅಮೇರಿಕಾದಿಂದ ಫ್ಲೈಟ್ ಏರಿ ದಕ್ಷಿಣ ಕನ್ನಡಕ್ಕೆ ಸ್ಯಾಮ್ ಬಂದಿದ್ದಾರೆ. ವ್ಲಾಗರ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆದಿರುವ ಸ್ಯಾಮ್ ಅವರು ವಾರದ ಹಿಂದಷ್ಟೇ ಮಂಗಳೂರಿಗೆ ಆಗಮಿಸಿದ್ದರು.

ಇನ್ನು ಎರಡು ತಿಂಗಳು ಕಾಲ ಕರಾವಳಿಯಲ್ಲಿ ಸ್ಯಾಮ್ ಪರ್ಯಾಟನೆ ಮಾಡಲಿದ್ದಾರೆ. ಉಡುಪಿ ,ದ.ಕ ದ ,ಜಾತ್ರೆ ,ಕೋಲ, ನೇಮ ಯಕ್ಷಗಾನ ಸಂಸ್ಕೃತಿ ಸವಿಯಲಿದ್ದಾರೆ.
ಅಮೇರಿಕಾದ ರೋಧ್ ಐಲ್ಯಾಂಡ್ ನಿವಾಸಿಯಾಗಿರುವ ಸ್ಯಾಮ ಅಮೆರಿಕಾದಲ್ಲಿರುವ ತುಳು ಗೆಳೆಯರಿಂದ ಪ್ರೇರಿತನಾಗಿ ತುಳು ಭಾಷೆ ಕಲಿತಿದ್ದಾರೆ. ಈಗ ಮಂಗಳೂರಿಗೆ ಬಂದಿರುವ ಸ್ಯಾಮ್ ಗೆ ಮಂಗಳೂರಿನಲ್ಲಿ ಭರಪೂರ ಸ್ವಾಗತ ಸಿಕ್ಕಿದೆ.

Advertisement

Advertisement
Tags :
Advertisement