ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಾಮ ಮಂದಿರ ಉದ್ಘಾಟನೆ ಸಂಭ್ರಮ: ಅಮೆರಿಕದಲ್ಲಿ ಹಿಂದೂಗಳ ಬೃಹತ್ ರ‍್ಯಾಲಿ

ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ. ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿದೆ. ಆಯೋಧ್ಯೆ ಸಂಪೂರ್ಣ ಅಲಂಕಾರಗೊಂಡಿದೆ. ಅಧಿಕಾರಿಗಳು ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ.
05:17 PM Dec 17, 2023 IST | Ashitha S

ವಾಶಿಂಗ್ಟನ್: ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ. ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿದೆ. ಆಯೋಧ್ಯೆ ಸಂಪೂರ್ಣ ಅಲಂಕಾರಗೊಂಡಿದೆ. ಅಧಿಕಾರಿಗಳು ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ.

Advertisement

ದೇಶ ವಿದೇಶಗಳಲ್ಲಿ ಸಂಭ್ರಮ ಜೋರಾಗಿದೆ. ಇದೀಗ ಅಮೆರಿಕದ ವಾಶಿಂಗ್ಟನ್‌ನಲ್ಲಿ ಹಿಂದೂಗಳು ಬೃಹತ್ ರ‍್ಯಾಲಿ ಆಯೋಜಿಸಿದ್ದಾರೆ. ಫೆಡ್ರಿಕ್ ಸಿಟಿ ಮೇರಿಲೆಂಡ್ ಬಳಿ ಇರುವ ಆಂಜನೇಯ ದೇವಸ್ಥಾನ ಬಳಿಯಿಂದ ಬೃಹತ್ ಕಾರು ರ‍್ಯಾಲಿ ನಡೆಸಲಾಗಿದೆ.

ಭಾರತದಲ್ಲಿ ಈಗಾಗಲೇ ಸಂಭ್ರಮ ಆರಂಭಗೊಂಡಿದೆ. ಭಾರತೀಯರಾಗಿ ನಾವು ಅಮೆರಿಕದಲ್ಲಿ ರಾಮ ಮಂದಿರ ಉದ್ಘಾಟನೆಯ ಸಂಭ್ರಮ ಆಚರಿಸುತ್ತಿದ್ದೇವೆ. 500 ವರ್ಷಗಳಿಂದ ಹಿಂದೂಗಳು ನಡೆಸಿದ ಸತತ ಹೋರಾಟಕ್ಕೆ ಇದೀಗ ಫಲ ಸಿಕ್ಕಿದೆ. ಅದೆಷ್ಟೋ ಜನರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡಿದ್ದಾರೆ. ಸಾಧು ಸಂತರು, ಹಿಂದೂ ಕಾರ್ಯಕರ್ತರ ಬಲಿದಾನದ ಫಲವಾಗಿ ಇದೀಗ ರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿದೆ. ನಮಗೆ ಹೆಮ್ಮೆಯಾಗುತ್ತಿದೆ ಎಂದು ಅಮೆರಿಕ ಡಿಸಿ ಘಟಕದ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಮಹೇಂದ್ರ ಸಪಾ ಹೇಳಿದ್ದಾರೆ.

Advertisement

ಜನವರಿ 20 ರಂದು ಮತ್ತೆ ವಾಶಿಂಗ್ಟನ್ ಡಿಸಿಯಲ್ಲಿ ಇದೇ ರೀತಿ ಬೃಹತ್ ರ‍್ಯಾಲಿ ಆಯೋಜಿಸಲಾಗುತ್ತದೆ.  ಹಿಂದೂಗಳು ಕುಟುಂಬಗಳು ಭಾಗಿಯಾಗುತ್ತಿದೆ. ಜನವರಿ 20 ರಂದು ಆಯೋಜಿಸುವ ಕಾರ್ಯಕ್ರಮದಲ್ಲಿ ಶ್ರೀರಾಮಾಯಣ ಕಥಾ, ರಾಮ ಲೀಲಾ, ರಾಮ ಭಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹೇಂದ್ರ ಸಪಾ ಹೇಳಿದ್ದಾರೆ.

ಇನ್ನು ಜ.22ರಂದು ಈ ಗರ್ಭಗುಡಿಯಲ್ಲೇ ರಾಮಲಲ್ಲಾ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರಿ ಮೋದಿ ಪ್ರಾಣ ಪ್ರತಿಷ್ಠೆ ನೆರವೇರಿಸಲಿದ್ದಾರೆ.

 

 

Advertisement
Tags :
americanayodhya-ramGOVERNMENTHINDUSindiaLatestNewsNewsKannadaಅಮೆರಿಕನವದೆಹಲಿಬೆಂಗಳೂರುರಾಮ ಮಂದಿರ
Advertisement
Next Article