For the best experience, open
https://m.newskannada.com
on your mobile browser.
Advertisement

ಬೆಂಗಳೂರಿನಲ್ಲಿ ತಿಂಗಳಿಗೆ ಸರಾಸರಿ 4.3 ಕೋಟಿ ಯೂನಿಟ್‌ ಹೆಚ್ಚಳ ವಿದ್ಯುತ್ ಬಳಕೆ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಗೃಹ ಬಳಕೆಗೆ ತಿಂಗಳಿಗೆ ಸರಾಸರಿ 4.3 ಕೋಟಿ ಯೂನಿಟ್‌ ಹೆಚ್ಚುವರಿಯಾಗಿ ಬಳಕೆಯಾಗಿದೆ.
02:54 PM May 19, 2024 IST | Chaitra Kulal
ಬೆಂಗಳೂರಿನಲ್ಲಿ ತಿಂಗಳಿಗೆ ಸರಾಸರಿ 4 3 ಕೋಟಿ ಯೂನಿಟ್‌ ಹೆಚ್ಚಳ ವಿದ್ಯುತ್ ಬಳಕೆ

ಬೆಂಗಳೂರು: ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಗೃಹ ಬಳಕೆಗೆ ತಿಂಗಳಿಗೆ ಸರಾಸರಿ 4.3 ಕೋಟಿ ಯೂನಿಟ್‌ ಹೆಚ್ಚುವರಿಯಾಗಿ ಬಳಕೆಯಾಗಿದೆ.

Advertisement

ರಾಜ್ಯ ಸರ್ಕಾರದ ‘ಗೃಹಜ್ಯೋತಿ’ ಯೋಜನೆಯಿಂದಾಗಿ ಗ್ರಾಹಕರು ವಿದ್ಯುತ್‌ ಬಿಲ್ಲಿನ ದೊಡ್ಡ ಹೊರೆಯಿಂದ ತಪ್ಪಿಸಿಕೊಂಡಿದ್ದಾರೆ. ಆದರೂ ನಿಗದಿಗಿಂತ ಹೆಚ್ಚಿನ ಬಳಕೆಗೆ ಹಣ ಪಾವತಿ ಮಾಡಬೇಕಿದೆ. ಇದರಿಂದ ಮಾರ್ಚ್‌ ತಿಂಗಳು ಒಂದರಲ್ಲಿಯೇ ಬೆಸ್ಕಾಂಗೆ ₹ 47.18 ಕೋಟಿ ಪಾವತಿಯಾಗಿದೆ.

‘ನಮಗೆ ತಿಂಗಳಿಗೆ ₹600 ಬಿಲ್ ಬರುತ್ತಿತ್ತು. ಗೃಹಜ್ಯೋತಿಯಿಂದಾಗಿ ₹60 ಮಾತ್ರ ಪಾವತಿಸಬೇಕಿತ್ತು. ಸೆಕೆ ವಿಪರೀತವಾಗಿರುವುದರಿಂದ ಫ್ಯಾನ್‌ ಮತ್ತು ಕೂಲರ್‌ ಹೆಚ್ಚು ಬಳಕೆಯಾಯಿತು. ಇದರಿಂದ ಏಪ್ರಿಲ್‌ನಲ್ಲಿ ₹850 ಬಿಲ್ ಬಂದಿದೆ. ₹255 ಮಾತ್ರ ಪಾವತಿ ಮಾಡಬೇಕಿದೆ. ಗೃಹಜ್ಯೋತಿ ಯೋಜನೆಯಲ್ಲದೇ ಇದ್ದಿದ್ದರೆ ಅಷ್ಟೂ ಮೊತ್ತ ಕಟ್ಟಬೇಕಿತ್ತು’ ಎಂದು ಸುಬ್ರಹ್ಮಣ್ಯನಗರ ನಿವಾಸಿ ಎಚ್‌.ಸಿ. ರಮೇಶ್‌ ತಿಳಿಸಿದರು.

Advertisement

‘200 ಯೂನಿಟ್‌ವರೆಗೆ ಉಚಿತವಿದ್ದರೂ ಪ್ರತಿಯೊಬ್ಬರಿಗೂ 200 ಯುನಿಟ್‌ ಎಂದರ್ಥವಲ್ಲ. ಅದು ಗರಿಷ್ಠ ಮಿತಿ. ತಿಂಗಳಿಗೆ ಬಳಕೆ ಮಾಡುತ್ತಿದ್ದ ಸರಾಸರಿ ಯೂನಿಟ್‌ಗಿಂತ 10 ಯುನಿಟ್‌ ಹೆಚ್ಚುವರಿಯಾಗಿ ಬಳಸಿದರೂ ಉಚಿತವಾಗಿರುತ್ತದೆ. ಅದಕ್ಕಿಂತ ಅಧಿಕ ಎಷ್ಟು ಬಳಕೆ ಮಾಡಿರುತ್ತಾರೋ ಅದಕ್ಕೆ ಬಿಲ್‌ ಪಾವತಿ ಮಾಡಬೇಕು.

ಗೃಹಜ್ಯೋತಿ ಯೋಜನೆ ಜಾರಿಯಾಗುವವರೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ ತಿಂಗಳಿಗೆ ಸರಾಸರಿ 75 ಕೋಟಿ ಯೂನಿಟ್‌ ವಿದ್ಯುತ್‌ ಮನೆ ಬಳಕೆಗೆ ಬೇಕಾಗುತ್ತಿತ್ತು. ಯೋಜನೆ ಜಾರಿಯಾದ ಮೇಲೆ ಜನರು ನಿರಾಳವಾಗಿ ಬಳಸತೊಡಗಿದ್ದರು. 2023ರ ಆಗಸ್ಟ್‌ನಿಂದ 2024ರ ಜನವರಿವರೆಗೆ ತಿಂಗಳಿಗೆ ಸರಾಸರಿ 2 ಕೋಟಿ ಯೂನಿಟ್‌ ಬಳಕೆ ಅಧಿಕವಾಗಿತ್ತು.

‘ಉಚಿತ ವಿದ್ಯುತ್‌ ಯೋಜನೆ ಜಾರಿಯಾದ ಮೇಲೆ ಜನರು ಜಾಗರೂಕವಾಗಿ ವಿದ್ಯುತ್‌ ಬಳಕೆ ಮಾಡುವುದು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು ನಿಜ. ಇದರಿಂದಾಗಿ ಬಹುತೇಕ ಗ್ರಾಹಕರಿಗೆ ‘ಶೂನ್ಯ’ ಬಿಲ್‌ ಬದಲು ಸಣ್ಣ ಮೊತ್ತ ಪಾವತಿಗೆ ಬರುತ್ತಿತ್ತು’ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.

Advertisement
Tags :
Advertisement