For the best experience, open
https://m.newskannada.com
on your mobile browser.
Advertisement

ಕಾಟ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿಯಲು ಆದೇಶ

ಬೆಂಗಳೂರು: ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಜನರು ವಾಸಮಾಡುವುದು ಸಾಧ್ಯವಿಲ್ಲ ಎಂಬ ಸ್ಥಿತಿಯಿದೆ. ಮಲೆನಾಡಿನಲ್ಲಿ ಎರಡು ತಿಂಗಳಲ್ಲಿ ಇಬ್ಬರನ್ನ ಒಂಟಿ ಸಲಗ ಬಲಿ ಪಡೆದಿದೆ. ಗ್ರಾಮ ಗ್ರಾಮಗಳಲ್ಲಿ ದಾಂಧಲೆ ಎಬ್ಬಿಸುತ್ತಿರುವ ಒಂಟಿ ಸಲಗದ ಹಾವಳಿಗೆ ಮಲೆನಾಡಿಗರು ಕಂಗಾಲಾಗಿದ್ದಾರೆ. ಹಾಗಾಗಿ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸುವಂತೆ ಸರ್ಕಾರದಿಂದ ಆದೇಶ ನೀಡಲಾಗಿದೆ. ಸದ್ಯ ಸೆರೆಹಿಡಿದಿರುವ 7 ಕಾಡಾನೆಗಳನ್ನು ಚಿಕ್ಕಮಗಳೂರು ವಲಯ ಅರಣ್ಯಕ್ಕೆ ಸ್ಥಳಾಂತರ ಮಾಡುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಮಾಡಿದ್ದಾರೆ.
09:48 PM Nov 08, 2023 IST | Umesha HS

ನಾಳೆಯಿಂದ ಕಾಡಾನೆಗಳ ಸೆರೆಹಿಡಿಯುವ ಮತ್ತು ಸ್ಥಳಾಂತರ ಕಾರ್ಯಾಚರಣೆಗೆ ಸಕ್ರೆಬೈಲಿನ ಮೂರು ಆನೆಗಳು ಆಗಮಿಸುತ್ತಿವೆ. ಕಾಡಾನೆಗಳ ಸೆರೆ, ಸ್ಥಳಾಂತರಕ್ಕೆ ಆಗ್ರಹಿಸಿ ತೀವ್ರ ಪ್ರತಿಭಟನೆ ಹಿನ್ನೆಲೆ ಕೊನೆಗೂ ಎಚ್ಚೆತ್ತುಕೊಂಡ ಸರ್ಕಾರ ಕಾಡಾನೆಗಳ ಸೆರೆ ಹಿಡಿಯಲು ಆದೇಶ ನೀಡಿದೆ.

Advertisement
Advertisement
Tags :
Advertisement