ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಾಜ್ಯಪಾಲ ಆನಂದ್ ಬೋಸ್ ವಿರುದ್ಧ ಲೈಂಗಿಕ ಆರೋಪ : ತನಿಖೆಗೆ ಟಿಎಂಸಿ ಆಗ್ರಹ

ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ್‌ ಬೋಸ್‌ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದ್ದು, ಈಗಾಗಲೇ ಬಾರಿ ಸದ್ದು ಮಾಡಿದೆ.
10:43 AM May 04, 2024 IST | Nisarga K
ರಾಜ್ಯಪಾಲ ಆನಂದ್ ಬೋಸ್ ವಿರುದ್ಧ ಲೈಂಗಿಕ ಆರೋಪ : ತನಿಖೆಗೆ ಟಿಎಂಸಿ ಆಗ್ರಹ

ಕೋಲ್ಕತಾ: ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ್‌ ಬೋಸ್‌ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದ್ದು, ಈಗಾಗಲೇ ಬಾರಿ ಸದ್ದು ಮಾಡಿದೆ. 2019ರಿಂದ ರಾಜಭವನದಲ್ಲಿ ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಯೊಬ್ಬರು ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ದೂರಿನ ಕುರಿತು ಪರಿಶೀಲನೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ.

Advertisement

ಆದರೆ ಸಂವಿಧಾನದ 361ನೇ ವಿಧಿಯಡಿ ರಾಜ್ಯಪಾಲರು ಹುದ್ದೆಯಲ್ಲಿರುವ ವೇಳೆ ಅವರ ವಿರುದ್ಧ ಯಾವುದೇ ಅಪರಾಧ ವಿಚಾರಣಾ ಪ್ರಕ್ರಿಯೆ (ಕ್ರಿಮಿನಲ್‌ ಪ್ರೊಸಿಡಿಂಗ್ಸ್‌ ) ನಡೆಸದಂತೆ ವಿನಾಯಿತಿ ಇರುವುದರಿಂದ ಪ್ರಕರಣ ದಾಖಲಾಗದು ಎನ್ನಲಾಗಿದೆ. ಈ ಮಧ್ಯೆ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಆಡಳಿತಾರೂಢ ಟಿಎಂಸಿ ಆಗ್ರಹಿಸಿದೆ.

Advertisement
Advertisement
Tags :
Anand BoseCASEGOVERNORINVESTIGATIONkolkattaLatestNewsNewsKarnatakaSEXUAL HARASSMENT
Advertisement
Next Article