For the best experience, open
https://m.newskannada.com
on your mobile browser.
Advertisement

ಮನಮಿಡಿಯುವ ದೃಶ್ಯ: ಅಮ್ಮನ ಮಡಿಲು ಸೇರಿದ ಕಂದಮ್ಮನ ಕಂಡು ಮಹೀಂದ್ರಾ ಭಾವುಕ

ತಮಿಳುನಾಡಿನ ಅರಣ್ಯದಲ್ಲಿ ತೆಗೆದ ಒಂದು ಫೋಟೋ ಮನಮಿಡಿಯುವ ಕಥೆಯೊಂದನ್ನ ಸಾರಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದ್ದು, ಉದ್ಯಮಿ ಆನಂದ್ ಮಹೀಂದ್ರಾ ಅವರು ಪ್ರತಿಕ್ರಿಯಿಸಿದ್ದಾರೆ.
05:16 PM Jan 03, 2024 IST | Ashitha S
ಮನಮಿಡಿಯುವ ದೃಶ್ಯ  ಅಮ್ಮನ ಮಡಿಲು ಸೇರಿದ ಕಂದಮ್ಮನ ಕಂಡು ಮಹೀಂದ್ರಾ ಭಾವುಕ

ದೆಹಲಿ: ತಮಿಳುನಾಡಿನ ಅರಣ್ಯದಲ್ಲಿ ತೆಗೆದ ಒಂದು ಫೋಟೋ ಮನಮಿಡಿಯುವ ಕಥೆಯೊಂದನ್ನ ಸಾರಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದ್ದು, ಉದ್ಯಮಿ ಆನಂದ್ ಮಹೀಂದ್ರಾ ಅವರು ಪ್ರತಿಕ್ರಿಯಿಸಿದ್ದಾರೆ.

Advertisement

ಹೌದು. . . ಅಣ್ಣಾಮಲೈ ಹುಲಿ ಸಂರಕ್ಷಣಾ ಅಭಯಾರಣ್ಯದಲ್ಲಿ ಮರಿಯಾನೆಯೊಂದು ತನ್ನ ತಾಯಿಯಿಂದ ತಪ್ಪಿಸಿಕೊಂಡಿತ್ತು. ಈ ಸುದ್ದಿ ತಿಳಿದ ಅರಣ್ಯ ಸಿಬ್ಬಂದಿ ತಕ್ಷಣವೇ ಕಾರ್ಯಾಚರಣೆಗೆ ಇಳಿದಿತ್ತು. ಡ್ರೋನ್ ಹಾಗೂ ನುರಿತ ಸಿಬ್ಬಂದಿಗಳ ಸಹಾಯದಿಂದ ಕೊನೆಗೂ ಮರಿಯಾನೆಯನ್ನು ಪತ್ತೆ ಹಚ್ಚಲಾಗಿದೆ. ದೂರವಾಗಿದ್ದ ಮರಿಯಾನೆಯನ್ನು ಹರಸಾಹಸ ಪಟ್ಟು ತಾಯಿ ಆನೆಯ ಬಳಿ ಕರೆದುಕೊಂಡು ಬಂದಿದ್ದಾರೆ. ತಾಯಿ ಆನೆ ಬಳಿ ಸೇರಿಕೊಂಡ ಮರಿಯಾನೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಇದಾದ ಬಳಿಕ ಅರಣ್ಯ ಸಿಬ್ಬಂದಿ ಆನೆ ಹಾಗೂ ಮರಿಯಾನೆ ಆಯಾಗಿ ಮಲಗಿರೋ ಫೋಟೋ ಒಂದನ್ನ ಸೆರೆ ಹಿಡಿದಿದ್ದಾರೆ.

ತಮಿಳುನಾಡು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, IAS ಅಧಿಕಾರಿ ಸುಪ್ರಿಯಾ ಸಾಹು ಅವರು ಈ ಒಂದು ಫೋಟೋವನ್ನು ಸೋಷಿಯಲ್ ಮೀಡಿಯಾ‌ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಜೊತೆಗೆ ತಾಯಿ ಆನೆಯಿಂದ ಬೇರೆಯಾಗಿದ್ದ ಮರಿಯಾನೆಯ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಾಯಿಯಿಂದ ಬೇರೆಯಾಗಿದ್ದ ಮರಿಯಾನೆಯನ್ನು ಒಂದುಗೂಡಿಸಿದ ಅರಣ್ಯ ಸಿಬ್ಬಂದಿಯ ಕಾರ್ಯಾಚರಣೆಗೆ ಆನಂದ್ ಮಹೀಂದ್ರಾ ಧನ್ಯವಾದ ಹೇಳಿದ್ದರು. "ಇದು ಎಷ್ಟೊಂದು ಅದ್ಭುತವಾದ ಫೋಟೋ. ಆನೆಯ ಮಡಿಲು ಸೇರಿದ ಅಂತಿಮ ಫೋಟೋ ಭಾವನಾತ್ಮಕ ಸಂದೇಶವನ್ನು ಸಾರುತ್ತಿದೆ. ಇದು ನಿಮ್ಮ ಸಾಕ್ಷ್ಯಚಿತ್ರದಲ್ಲಿ ಸೇರಿಕೊಳ್ಳವಂತದ್ದು" ಎಂದಿದ್ದಾರೆ.

Advertisement

ಆನಂದ್ ಮಹೀಂದ್ರಾ ಅವರ ಈ ಟ್ವೀಟ್‌ಗೆ ಸುಪ್ರಿಯಾ ಸಾಹು ಅವರು ಪ್ರತಿಕ್ರಿಯಿಸಿದ್ದು, ಖಂಡಿತ ಸಾರ್.. ಈ ಫೋಟೋವನ್ನು ನಾವು ಸಾಕ್ಷ್ಯಚಿತ್ರದಲ್ಲಿ ಸೇರಿಸುತ್ತೇವೆ. ನೀವು ಕೂಡ ಆ ಸಾಕ್ಷ್ಯಚಿತ್ರವನ್ನು ನೋಡಲು ಅಣ್ಣಾಮಲೈ ಹುಲಿ ಸಂರಕ್ಷಣಾ ಅರಣ್ಯ ಆಗಮಿಸಬೇಕು ಎಂದಿದ್ದಾರೆ.

Advertisement
Tags :
Advertisement