For the best experience, open
https://m.newskannada.com
on your mobile browser.
Advertisement

ರಾಧಿಕಾ ಮರ್ಚೆಂಟ್​ರನ್ನೇ ಆರಿಸಿಕೊಂಡಿದ್ದೇಕೆ ಅನಂತ್ ಅಂಬಾನಿ ?

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಸಂಬ್ರಮ ಮನೆ ಮಾಡಿದೆ. ಇದರ ನಡುವೆ ತನ್ನ ಬಾಳ ಸಂಗಾತಿ ಆಯ್ಕೆ ಮತ್ತು ಅದರ ಹಿಂದಿರುವ ಕಾರಣ ಬಗ್ಗೆ ಅನಂತ್ ಮನಬಿಚ್ಚಿ ಮಾತನಾಡಿದ್ದಾರೆ.
04:30 PM Feb 28, 2024 IST | Ashitha S
ರಾಧಿಕಾ ಮರ್ಚೆಂಟ್​ರನ್ನೇ ಆರಿಸಿಕೊಂಡಿದ್ದೇಕೆ ಅನಂತ್ ಅಂಬಾನಿ

ಮುಂಬೈ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಸಂಬ್ರಮ ಮನೆ ಮಾಡಿದೆ. ಇದರ ನಡುವೆ ತನ್ನ ಬಾಳ ಸಂಗಾತಿ ಆಯ್ಕೆ ಮತ್ತು ಅದರ ಹಿಂದಿರುವ ಕಾರಣ ಬಗ್ಗೆ ಅನಂತ್ ಮನಬಿಚ್ಚಿ ಮಾತನಾಡಿದ್ದಾರೆ.

Advertisement

ರಾಧಿಕಾ ನನಗೆ ವ್ಯವಹಾರ ಸೇರಿದಂತೆ ಎಲ್ಲದರಲ್ಲೂ ಬೆಂಬಲವಾಗಿ ನಿಲ್ಲುವ ವಿಶ್ವಾಸವಿದೆ. ನನ್ನ ಉದ್ಯಮದಲ್ಲಿ ನಾನು ಇನ್ನೂ ಒಬ್ಬ ವ್ಯಕ್ತಿಯನ್ನು ಹೊಂದಲಿದ್ದೇನೆ. ರಾಧಿಕಾ ಕೂಡ ಈ ಬಗ್ಗೆ ತುಂಬಾ ಉತ್ಸುಕಳಾಗಿದ್ದಾಳೆ. ನಾವಿಬ್ಬರೂ ನನ್ನ ಹೆತ್ತವರ ಆಶೀರ್ವಾದ ಮತ್ತು ನನ್ನ ಒಡಹುಟ್ಟಿದ ಆಕಾಶ್ ಮತ್ತು ಇಶಾ ಅವರ ಸಹಕಾರದೊಂದಿಗೆ ಇನ್ನೂ ಉನ್ನತ ಮಟ್ಟಕ್ಕೆ ಹೋಗುತ್ತೇವೆ ಎಂಬ ವಿಶ್ವಾಸವಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ರಾಧಿಕಾ ಪ್ರಾಣಿ ರಕ್ಷಣಾ ಯೋಜನೆಗಾಗಿ ಜಾಮ್‌ನಗರಕ್ಕೆ ಆಗಾಗ್ಗೆ ಭೇಟಿ ನೀಡಬೇಕೆನ್ನುತ್ತಿದ್ದರು. ಈಗ ನನಗೆ ಜಾಮ್‌ನಗರ ನನ್ನ ಮನೆಯಾಗಿದೆ. ಆಕೆಗೆ ಪ್ರಾಣಿಗಳ ಮೇಲೆ ಒಲವು ಹೆಚ್ಚು. ಅದೇ ನನಗೂ ಬಹಳ ಇಷ್ಟ.

ಆಕೆಗೆ ನನ್ನ ಬೆಂಬಲವಿದೆ. ನಿಜಕ್ಕೂ ಅಂಬಾನಿ ಕುಟುಂಬಕ್ಕೆ ಹೊಂದಿಕೊಳ್ಳುವ ಪರಿಪೂರ್ಣ ಸಂಗಾತಿಯನ್ನು ಕಂಡುಕೊಂಡಿದ್ದಾನೆ. ಈ ಎರಡು ಆತ್ಮಗಳು ಒಬ್ಬರನ್ನೊಬ್ಬರು ಏಕೆ ಆರಿಸಿಕೊಂಡವು ಎಂಬುದಕ್ಕೆ ಕಾರಣ ಸ್ಪಷ್ಟವಾಗಿದೆ ಎಂದು ಅನಂತ್ ಅಂಬಾನಿ ಹೇಳಿದ್ದಾರೆ.

Advertisement

ಅನಂತ್ ಮತ್ತು ರಾಧಿಕಾ ವಿವಾಹ ಮಹೋತ್ಸವವವು ಮಾರ್ಚ್ 1 ರಿಂದ 3 ರವರೆಗೆ ನಡೆಯಲಿದೆ.

ಇನ್ನು ರಿಲಯನ್ಸ್ ಫೌಂಡೇಶನ್ "ವಂತರಾ" ಎಂಬ ಒಂದು ಹೊಸ ಯೋಜನೆಯನ್ನು ಕೈಗೊಂಡಿದೆ. ಇದರ ಮೂಲ ಉದ್ದೇಶವೆಂದರೆ ಗಾಯಗೊಂಡ ಮತ್ತು ಅಪಾಯಕ್ಕೊಳಗಾದ ಪ್ರಾಣಿಗಳ ರಕ್ಷಣೆ ಮಾಡುವುದಾಗಿದೆ.ಆರ್‌ಐಎಲ್ ಮತ್ತು ರಿಲಯನ್ಸ್ ಫೌಂಡೇಶನ್‌ನ ನಿರ್ದೇಶಕ ಅನಂತ್ ಅಂಬಾನಿ ನೇತೃತ್ವದಲ್ಲಿ ಇದು ನಡೆಯಲಿದೆ. ಭಾರತಕ್ಕೆ ಸ್ಥಳೀಯವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸಲು ಮತ್ತು ಅಗತ್ಯ ಆವಾಸಸ್ಥಾನಗಳನ್ನು ನೀಡುವ ಗುರಿಯನ್ನು ಇದು ಹೊಂದಿದೆ.

ಚಿಕಿತ್ಸೆ, ಸಂರಕ್ಷಣೆ ಮತ್ತು ಪುನರ್ವಸತಿಗೆ ಒತ್ತು ನೀಡುವ ಉದ್ದೇಶ ಕೂಡ ಇದರದ್ದಾಗಿದೆ. ಈ ಯೋಜನೆಯಡಿ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಜೀವಗಳನ್ನು ಉಳಿಸಲಾಗುತ್ತಿದೆ. ಇದಕ್ಕಾಗಿ ಗುಜರಾತ್‌ನ ಜಾಮ್‌ನಗರ ರಿಫೈನರಿ ಕಾಂಪ್ಲೆಕ್ಸ್‌ನಲ್ಲಿರುವ ರಿಲಯನ್ಸ್ ಗ್ರೀನ್ ಬೆಲ್ಟ್‌ನಲ್ಲಿ 3000 ಎಕರೆ ಜಾಗವನ್ನು ಮೀಸಲಿಟ್ಟಿದೆ.

Advertisement
Tags :
Advertisement