For the best experience, open
https://m.newskannada.com
on your mobile browser.
Advertisement

ರಾಜ್ಯವೇ ಶಾಕ್‌ ಆಗುವಂತಹ ಸುದ್ದಿ ಕೊಟ್ಟ ʼದಿವ್ಯಾ ವಸಂತʼಗಾಗಿ ಖಾಕಿ ಹುಡುಕಾಟ

'ಇದು ರಾಜ್ಯವೇ ಖುಷಿ ಪಡುವ ಸುದ್ದಿ' ಎಂದು ಫೇಮಸ್ ಆಗಿದ್ದ ನಿರೂಪಕಿ ಇದೀಗ ಜನರಿಗೆ ಬೆಚ್ಚಿ ಬೀಳಿಸುವ ಸುದ್ದಿ ಕೊಟ್ಟಿದ್ದಾರೆ.
12:27 PM Jul 07, 2024 IST | Ashitha S
ರಾಜ್ಯವೇ ಶಾಕ್‌ ಆಗುವಂತಹ ಸುದ್ದಿ ಕೊಟ್ಟ ʼದಿವ್ಯಾ ವಸಂತʼಗಾಗಿ ಖಾಕಿ ಹುಡುಕಾಟ

ಬೆಂಗಳೂರು : "ಇದು ರಾಜ್ಯವೇ ಖುಷಿ ಪಡುವ ಸುದ್ದಿ" ಎಂದು ಫೇಮಸ್ ಆಗಿದ್ದ ನಿರೂಪಕಿ ಇದೀಗ ಜನರಿಗೆ ಬೆಚ್ಚಿ ಬೀಳಿಸುವ ಸುದ್ದಿ ಕೊಟ್ಟಿದ್ದಾರೆ.

Advertisement

ಖಾಸಗಿ ಸುದ್ದಿ ವಾಹಿನಿಯಲ್ಲಿ ನಿರೂಪಕಿಯಾಗಿ, ಗಿಚ್ಚಿ ಗಿಲಿಗಿಲಿಯಲ್ಲೂ ಖ್ಯಾತರಾಗಿದ್ದ ದಿವ್ಯಾ ವಸಂತ ಇದೀಗ ವಂಚನೆ ಪ್ರಕರಣದಡಿ ಕುಖ್ಯಾತಿಗಳಿಸಿದ್ದಾರೆ. ಹೌದು, ಸ್ಪಾ ವೊಂದರ ವ್ಯವಸ್ಥಾಪಕನನ್ನು ಬೆದರಿಸಿ, ಹಣ ವಸೂಲಿ ಮಾಡಲು ಯತ್ನಿಸಿರುವ ಪ್ರಕರಣದಲ್ಲಿ ಕೆಲವರನ್ನು ಬಂಧಿಸಲಾಗಿದೆ. ಖಾಸಗಿ ಸುದ್ದಿ ವಾಹಿನಿ ರಾಜ್ ನ್ಯೂಸ್ ಸಿಇಒ ವೆಂಕಟೇಶ್ , ದಿವ್ಯಾ ವಸಂತ ಸಹೋದರ ಸಂದೇಶ್ ನನ್ನು ಬಂಧಿಸಲಾಗಿದೆ. ಸದ್ಯ, ದಿವ್ಯಾ ವಸಂತ ನಾಪತ್ತೆಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ. ಐಷಾರಾಮಿ ಜೀವನಕ್ಕೆ ಬಿದ್ದಿದ್ದ ದಿವ್ಯಾ, ಸುಲಭವಾಗಿ ಹಣ ಸಂಪಾದಿಸಲು ಅಡ್ಡ ಮಾರ್ಗ ತುಳಿದು ಸಂಕಷ್ಟಕ್ಕೆ ತುತ್ತಾಗಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಮಸಾಜ್ ಪಾರ್ಲರ್‌ಗಳು ಹಾಗೂ ವೈದ್ಯರು ಸೇರಿ ಹಣವಂತರಿಗೆ ಹನಿಟ್ರ್ಯಾಪ್‌ ಮಾದರಿಯಲ್ಲಿ ಸ್ನೇಹದ ಬಲೆಗೆ ಬೀಳಿಸಿಕೊಂಡು ಸುಲಿಗೆ ಮಾಡುತ್ತಿದ್ದರು. ಇದುವರೆಗೆ ಸುಮಾರು 100ಕ್ಕೂ ಹೆಚ್ಚಿನ ಜನರಿಂದ ಈ ತಂಡ ಸುಲಿಗೆ ಮಾಡಿದೆ. ಸಂತ್ರಸ್ತರಿಂದ 80 ಸಾವಿರ, 50 ಸಾವಿರ ಹಾಗೂ 1 ಲಕ್ಷ ರುವರೆಗೆ ಆನ್‌ಲೈನ್‌ ಮೂಲಕ ತಮ್ಮ ಖಾತೆಗಳಿಗೆ ವೆಂಕಟೇಶ್ ಹಾಗೂ ದಿವ್ಯಾ ಹಣ ವರ್ಗಾಯಿಸಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

Advertisement

ವೆಂಕಟೇಶ್ ಹಾಗೂ ದಿವ್ಯಾ ಸ್ಪೈ ರಿಸರ್ಚ್ ಟೀಂ ಹೆಸರಿನ ವಾಟ್ಸ್ಯಾಪ್ ಗ್ರೂಪ್ ಮಾಡಿ, ಆ ಮೂಲಕ ದುಷ್ಕೃತ್ಯ ಮಾಡುತ್ತಿದ್ದರು ಎನ್ನಲಾಗಿದೆ. ತಮ್ಮ ಡೀಲ್, ಪ್ಲ್ಯಾನ್‌ಗಳ ಬಗ್ಗೆ ಇದೇ ಗ್ರೂಪ್‌ನಲ್ಲಿ ಆರೋಪಿಗಳು ಚರ್ಚಿಸುತ್ತಿದ್ದರು ಎನ್ನಲಾಗಿದೆ. ಖಾಸಗಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿಕೊಂಡಿದ್ದ ದಿವ್ಯಾ ಕೆಲ ದಿನಗಳ ಹಿಂದೆ ಕೆಲಸ ಬಿಟ್ಟಿದ್ದಳು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಚುರುಕಾಗಿದ್ದಾಳೆ.

Advertisement
Tags :
Advertisement