ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹೆತ್ತಬ್ಬೆಯನ್ನು ಬೀದಿ ಬದಿ ಬಿಟ್ಟುಹೋದ ಮಗಳು, ಅಳಿಯ

ವಯಸ್ಸಾದ ವೃದ್ಧೆಯನ್ನು ಮಗಳು ಹಾಗೂ ಅಳಿಯ  ರಾತ್ರೋರಾತ್ರಿ ಕಾರಿನಲ್ಲಿ ಕರೆದುಕೊಂಡು ಬಂದು ರಸ್ತೆಯಲ್ಲಿ ಬಿಟ್ಟುಹೋದ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರ  ಸಮೀಪದ ವಿ.ಕಲ್ಲಹಳ್ಳಿಯಲ್ಲಿ ನಡೆದಿದೆ.
07:41 PM Jan 06, 2024 IST | Ashika S

ಆನೇಕಲ್: ವಯಸ್ಸಾದ ವೃದ್ಧೆಯನ್ನು ಮಗಳು ಹಾಗೂ ಅಳಿಯ  ರಾತ್ರೋರಾತ್ರಿ ಕಾರಿನಲ್ಲಿ ಕರೆದುಕೊಂಡು ಬಂದು ರಸ್ತೆಯಲ್ಲಿ ಬಿಟ್ಟುಹೋದ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರ  ಸಮೀಪದ ವಿ.ಕಲ್ಲಹಳ್ಳಿಯಲ್ಲಿ ನಡೆದಿದೆ.

Advertisement

ಗ್ರೇಸಿ ಪೀಟರ್ (80) ಎಂಬ ವೃದ್ಧೆಯನ್ನು ರಸ್ತೆಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾರೆ.

ಮಗಳು ಆಶಾ ರಾಣಿ, ಅಳಿಯ ಮಂಜುನಾಥ್ ಹಾಗೂ ಮೊಮ್ಮಕ್ಕಳ ಜೊತೆ ವೃದ್ಧೆ ದೊಮ್ಮಸಂದ್ರದಲ್ಲಿ ವಾಸವಾಗಿದ್ದರು. ಇವರುಗಳ ಈ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Advertisement

ಅಳಿಯ ಮಂಜುನಾಥ್ ದಿನನಿತ್ಯ ಕುಡಿದು ಬಂದು ವೃದ್ದೆಯ ಮೇಲೆ ಹಲ್ಲೆ ನಡೆಸುತ್ತಿದ್ದ. ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದನೆ ಕೂಡಾ ಮಾಡುತ್ತಿದ್ದ. ವೃದ್ಧೆಯ ಕಾಲು ಮುರಿದು ಈ ಪಾಪಿಗಳು ಹಲ್ಲೆ ನಡೆಸಿದ್ದರು. ಮೈಮೇಲಿನ ಗಾಯಗಳಿಂದ ವೃದ್ಧೆ ನರಳಾಡುತ್ತಿದ್ದರು.

ವೃದ್ಧೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಆಕೆಯನ್ನು ದೇವಾಲಯದ ಬಳಿ ಮಲಗಿಸಿ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ.

ದೇವಾಲಯದ ಬಳಿ ಮಲಗಿದ್ದ ಈ ಹಿರಿ ಜೀವವನ್ನು ಗ್ರಾಮಸ್ಥರು ಗಮನಿಸಿ ಬನ್ನೇರುಘಟ್ಟದ ಆಶ್ರಮಕ್ಕೆ ರವಾನಿಸಿದ್ದು, ವೈದ್ಯರ ಚಿಕಿತ್ಸೆಯೊಂದಿಗೆ ವೃದ್ಧೆ ಚೇತರಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement
Tags :
LatestNewsNewsKannadaಅಳಿಯಮಗಳುರಸ್ತೆವೃದ್ಧೆ
Advertisement
Next Article