For the best experience, open
https://m.newskannada.com
on your mobile browser.
Advertisement

ಶಕ್ತಿ ಪದವಿ ಪೂರ್ವಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ

ಶಕ್ತಿ ನಗರದ ಶಕ್ತಿ ಪದವಿ ಪೂರ್ವಕಾಲೇಜಿನ ವಾರ್ಷಿಕೋತ್ಸವ ಬಹಳ ವಿಜ್ರಂಭಣೆಯಿಂದ ನಡೆಯಿತು. ಸಾಂಪ್ರದಾಯಿಕ ಚೆಂಡೆ ವಾದನದಿಂದ ಆರಂಭವಾದ ಕಾರ್ಯಕ್ರಮ ಹೊಂಬಾಳೆ (ತೆಂಗಿನ ಕೊಂಬು) ಅರಳಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.
03:45 PM Dec 22, 2023 IST | Gayathri SG
ಶಕ್ತಿ ಪದವಿ ಪೂರ್ವಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ

ಮಂಗಳೂರು: ಶಕ್ತಿ ನಗರದ ಶಕ್ತಿ ಪದವಿ ಪೂರ್ವಕಾಲೇಜಿನ ವಾರ್ಷಿಕೋತ್ಸವ ಬಹಳ ವಿಜ್ರಂಭಣೆಯಿಂದ ನಡೆಯಿತು. ಸಾಂಪ್ರದಾಯಿಕ ಚೆಂಡೆ ವಾದನದಿಂದ ಆರಂಭವಾದ ಕಾರ್ಯಕ್ರಮ ಹೊಂಬಾಳೆ (ತೆಂಗಿನ ಕೊಂಬು) ಅರಳಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.

Advertisement

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ವಿದ್ಯಾಸಂಸ್ಥೆಯಾದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥಡಾ. ಮೋಹನ ಆಳ್ವಾ ಮಾತನಾಡಿ ಹದಿಹರೆಯ ಪ್ರತಿಯೂಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮುಖ್ಯವಾದುದು, ಈ ಪದವಿ ಪೂರ್ವಕಾಲೇಜಿನ ಕಾಲಘಟ್ಟ ಜೀವನದ ನಿರ್ಣಾಯಕ ಘಟ್ಟ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಶಕ್ತಿ ವಿದ್ಯಾಸಂಸ್ಥೆ ಜಿಲ್ಲೆಯ ಉತ್ತಮ ವಿದ್ಯಾಸಂಸ್ಥೆಗಳಲ್ಲಿ ಒಂದು. ಈ ಸಂಸ್ಥೆ ಈ ವರ್ಷ ನೂರಕ್ಕೆ ನೂರು ಫಲಿತಾಂಶದೊಂದಿಗೆ ಉತ್ತಮ ಸಾಧನೆಯನ್ನು ಮಾಡಲಿ ಎಂಬ ಆಶಯ ವ್ಯಕ್ತ ಪಡಿಸಿದರು. ಡಾ. ಕೆ ಸಿ ನಾಯಕ್‌ ಅವರು ನಮ್ಮ ತಂದೆಯವರ ಕಾಲದಿಂದಿದಲೂ ಆತ್ಮೀಯರು ಅವರ ಈ ಸಾಧನೆ ಅತ್ಯಂತ ಶ್ರೇಷ್ಠವಾದುದು ಎಂದು ಹೇಳಿದರು.

Advertisement

ವಿದ್ಯಾರ್ಥಿಗಳ ಒಳಿತಿಗೋಸ್ಕರ ಅನೇಕ ಒಳ್ಳೆಯ ನಿರ್ಧಾರಗಳನ್ನು ಸಂಸ್ಥೆ ತೆಗೆದುಕೊಳ್ಳುವಾಗ ವಿದ್ಯಾರ್ಥಿಗಳು ಮತ್ತುಅವರ ಪೋಷಕರು ಸಹಕರಿಸಬೇಕು. ಯಾಕೆಂದರೆ ಸಂಸ್ಥೆಯು ವಿದ್ಯಾರ್ಥಿಗಳು ಈ ಸಮಯದಲ್ಲಿ ದಾರಿ ತಪ್ಪದಂತೆ ನೋಡಿಕೊಳ್ಳುತ್ತದೆ. ಪಾಠದಕಡೆಗೆ ಹೆಚ್ಚಿನ ಗಮನ ನೀಡಿದಾಗ ಮಾತ್ರರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಸಾಧ್ಯವಿದೆ. ನಾವು ಓದುವ ಸಮಯವನ್ನುಯಾವುದೇ ಕಾರಣಕ್ಕೂ ವ್ಯರ್ಥ ಮಾಡಬಾರದು. ಒಮ್ಮೆ ಬಂದ ಸಮಯ ಮತ್ತೆತಿರುಗಿ ಬರುವುದಿಲ್ಲ ಇದನ್ನು ನೆನಪಿನಲ್ಲಿಟುಕೊಂಡು ಮುನ್ನಡೆದಾಗ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವೆಂದು ಅವರು ಕಿವಿಮಾತು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ.ನಾಯಕ್ ಈ ಕಾರ್ಯಕ್ರಮದ ಅಡಿಗಲ್ಲು ಸಮಾರಂಭಕ್ಕೆ ಡಾ. ಮೋಹನ್ ಆಳ್ವರನ್ನೇ ಕರೆದಿದ್ದೆವು, ಈಗ ಅವರ ಅನುಭವದ ದಾರಿಯಲ್ಲಿ ಸಾಗುತ್ತಿದ್ದೇವೆ. ಅವರು ಆರಂಭದಿಂದಲೂ ನಮ್ಮ ಮೇಲೆ ಪ್ರೀತಿಗೌರವ ಇಟ್ಟು ಸಹಕರಿಸುತ್ತಿದ್ದಾರೆ. ಇಂದೂ ಸಹ ನಮ್ಮ ಕರೆಯನ್ನು ಮನ್ನಿಸಿ ನಮ್ಮಲ್ಲಿಗೆ ಬಂದಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ, ಶಕ್ತಿ ಪ. ಪೂ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ, ಶಕ್ತಿ ವಸತಿ ಶಾಲೆ ಪ್ರಾಂಶುಪಾಲ ರವಿಶಂಕರ ಹೆಗಡೆ ಉಪಸ್ಥಿತರಿದ್ದರು. ಉಪಪ್ರಾಂಶುಪಾಲೆ ದಿವ್ಯಜ್ಯೊತಿ ಸ್ವಾಗತಿಸಿದರೆ, ಉಪನ್ಯಾಸಕ ಸುಶೀಲ್ ವಂದಿಸಿದರು, ಉಪನ್ಯಾಸಕಿ ಚೈತ್ರಾ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು"

Advertisement
Tags :
Advertisement