ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೆಂಗಳೂರು: ಮತ್ತೊಂದು ಭ್ರೂಣ ಹತ್ಯೆ ತಂಡ ಸಕ್ರಿಯ

ಹೆಣ್ಣು ಭ್ರೂಣ ಪತ್ತೆ ಹಚ್ಚಿ ಗರ್ಭಪಾತ ಮಾಡುತ್ತಿದ್ದ ಪ್ರಕರಣ ರಾಜ್ಯದಲ್ಲಿ ಭಾರಿ ಸುದ್ದಿಯಾಗಿತ್ತು. ಇದೀಗ ತನಿಖೆ ವೇಳೆ ಮೈಸೂರಿನ ಡಾ. ಚಂದನ್‌ ಬಲ್ಲಾಳ್‌, ಮಧ್ಯವರ್ತಿ ಶಿವಲಿಂಗೇಗೌಡ ತಂಡ ಮಾತ್ರವಲ್ಲ, ರಾಜ್ಯದಲ್ಲಿ ಮತ್ತೂಂದು ಹೆಣ್ಣು ಭ್ರೂಣ ಹತ್ಯೆ ತಂಡ ಸಕ್ರಿಯವಾಗಿದೆ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
08:50 AM Dec 04, 2023 IST | Ashika S

ಬೆಂಗಳೂರು: ಹೆಣ್ಣು ಭ್ರೂಣ ಪತ್ತೆ ಹಚ್ಚಿ ಗರ್ಭಪಾತ ಮಾಡುತ್ತಿದ್ದ ಪ್ರಕರಣ ರಾಜ್ಯದಲ್ಲಿ ಭಾರಿ ಸುದ್ದಿಯಾಗಿತ್ತು. ಇದೀಗ ತನಿಖೆ ವೇಳೆ ಮೈಸೂರಿನ ಡಾ. ಚಂದನ್‌ ಬಲ್ಲಾಳ್‌, ಮಧ್ಯವರ್ತಿ ಶಿವಲಿಂಗೇಗೌಡ ತಂಡ ಮಾತ್ರವಲ್ಲ, ರಾಜ್ಯದಲ್ಲಿ ಮತ್ತೂಂದು ಹೆಣ್ಣು ಭ್ರೂಣ ಹತ್ಯೆ ತಂಡ ಸಕ್ರಿಯವಾಗಿದೆ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

Advertisement

ಇದೇ ಕಾರಣಕ್ಕೆ ಮೈಸೂರಿನ ಹಳೇ ಆಸ್ಪತ್ರೆಯೊಂದರ ಶುಶ್ರೂಷಕಿ ಉಷಾರಾಣಿ (35)ಯನ್ನು ಬಂಧಿಸಲಾಗಿದೆ. ಈಕೆಯ ವಿಚಾರಣೆಯಲ್ಲಿ ಚಂದನ್‌ ಬಲ್ಲಾಳ್‌, ಚೆನ್ನೈನ ಮಕ್ಕಳ ತಜ್ಞನ ತಂಡ ಮಾತ್ರವಲ್ಲ. ಮೈಸೂರಿನ ಪುಟ್ಟರಾಜು ಹಾಗೂ ಮಂಡ್ಯದ ಧನಂಜಯ್‌ ಎಂಬವರ ತಂಡವೂ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವುದು ಪತ್ತೆಯಾಗಿದ್ದು, ಪೊಲೀಸರೇ ಒಂದು ಕ್ಷಣ ಶಾಕ್‌ ಆಗಿದ್ದಾರೆ. ಸದ್ಯ ಪುಟ್ಟರಾಜು ಮತ್ತು ಧನಂಜಯ್‌ ನಿರೀಕ್ಷಣ ಜಾಮೀನು ಪಡೆದುಕೊಂಡಿದ್ದಾರೆ.

ಮೈಸೂರಿನ ಮೊದಲ ಆಸ್ಪತ್ರೆ ಎಂದು ಹೇಳಲಾದ ಆಸ್ಪತ್ರೆಯೊಂದರಲ್ಲಿ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಉಷಾರಾಣಿಗೆ ಮೈಸೂರಿನ ವಿವಿಧ ಆಸ್ಪತ್ರೆಗಳಿಗೆ ಕ್ಯಾಟರಿಂಗ್‌ ಮಾಡುತ್ತಿದ್ದ ಪುಟ್ಟರಾಜು ಮತ್ತು ಮಂಡ್ಯದಲ್ಲಿ ಪ್ರಯೋಗಾಲಯ(ಲ್ಯಾಬ್‌)ದ ಟೆಕ್ನೀಷಿಯನ್‌ ಧನಂಜಯ್‌ ಪರಿಚಯವಾಗಿದೆ.

Advertisement

ಈ ವೇಳೆ ಹೆಣ್ಣು ಭ್ರೂಣ ಗರ್ಭಪಾತ ಮಾಡಿಸಿಕೊಟ್ಟರೆ ಪ್ರತೀ ಕೇಸ್‌ಗೆ 2-3 ಸಾವಿರ ರೂ. ಕೊಡುವುದಾಗಿ ಇಬ್ಬರ ನಡುವೆ ಒಪ್ಪಂದವಾಗಿತ್ತು. ಅದರಂತೆ ಧನಂಜಯ್‌, ಮಂಡ್ಯದ ಲ್ಯಾಬ್‌ನಲ್ಲಿ ಗರ್ಭಿಣಿಯರಿಗೆ ಸ್ಕ್ಯಾನಿಂಗ್‌ ಮಾಡಿ ಗರ್ಭಪಾತ ಬಯಸುವ ಪೋಷಕರನ್ನು ಪುಟ್ಟರಾಜುಗೆ ಸಂಪರ್ಕಿಸುತ್ತಿದ್ದ. ಈತ ಉಷಾರಾಣಿ ಬಳಿ ಕಳುಹಿಸಿ ಗರ್ಭಪಾತ ಮಾಡಿಸುತ್ತಿದ್ದ. ಈಕೆ ಪ್ರತೀ ತಿಂಗಳು 4-5 ಗರ್ಭಪಾತ ಮಾಡಿಸುತ್ತಿದ್ದಳು ಎಂಬುದು ಗೊತ್ತಾಗಿರುವುದಾಗಿ ಮೂಲಗಳು ತಿಳಿಸಿವೆ.

Advertisement
Tags :
LatetsNewsNewsKannadaತನಿಖೆಪ್ರಕರಣಮಧ್ಯವರ್ತಿಹೆಣ್ಣು ಭ್ರೂಣ ಪತ್ತೆ
Advertisement
Next Article