ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಚೀನಾದಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ನಿಗೂಢ ಕಾಯಿಲೆ: ಕೇಂದ್ರ ಸರ್ಕಾರ ಕೊಟ್ಟ ಎಚ್ಚರಿಕೆ ಏನು?

ಚೀನಾದಲ್ಲಿ ಹುಟ್ಟಿ ಜಗತ್ತನ್ನೇ ಅಲ್ಲಾಡಿಸಿದ್ದ ಕೋವಿಡ್‌ ಸೋಂಕು ಕೊಟ್ಟ ಪೆಟ್ಟು ಎಲ್ಲರಿಗೂ ತಿಳಿದಿದೆ. ಅದೇ ದೇಶದಲ್ಲಿ ಹೊಸತೊಂದು ರೂಪದ ಸೋಂಕು ಕಾಣಿಸಿಕೊಂಡಿದೆ.
05:38 PM Nov 26, 2023 IST | Ashika S

ಬೀಜಿಂಗ್:‌ ಚೀನಾದಲ್ಲಿ ಹುಟ್ಟಿ ಜಗತ್ತನ್ನೇ ಅಲ್ಲಾಡಿಸಿದ್ದ ಕೋವಿಡ್‌ ಸೋಂಕು ಕೊಟ್ಟ ಪೆಟ್ಟು ಎಲ್ಲರಿಗೂ ತಿಳಿದಿದೆ. ಅದೇ ದೇಶದಲ್ಲಿ ಹೊಸತೊಂದು ರೂಪದ ಸೋಂಕು ಕಾಣಿಸಿಕೊಂಡಿದೆ.

Advertisement

ಚೀನಾದಲ್ಲಿ ಉಸಿರಾಟದ ತೊಂದರೆ, ನ್ಯುಮೋನಿಯಾ ರೀತಿಯ ಸೋಂಕು ವ್ಯಾಪಿಸುತ್ತಿದೆ. ಅದರಲ್ಲೂ ಮಕ್ಕಳನ್ನೇ ಈ ಸೋಂಕು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ, ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೋಲೆ ಹೊರಡಿಸಿದೆ.

ಸಾರ್ವಜನಿಕ ಆರೋಗ್ಯ ಹಾಗೂ ಸ್ವಾಸ್ತ್ಯ ಸಂರಕ್ಷಣೆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಆಸ್ಪತ್ರೆಗಳ ಸಿದ್ದತೆಯನ್ನು ಪರಿಶೀಲಿಸುವಂತೆ ತನ್ನ ಸುತ್ತೋಲೆಯಲ್ಲಿ ಸೂಚಿಸಿದೆ. ಕೋವಿಡ್ ಸೋಂಕನ್ನು ಎದುರಿಸಿದ ರೀತಿಯಲ್ಲೇ ಹೊಸ ನಿಗೂಢ ಸೋಂಕಿನ ವಿರುದ್ಧ ಹೋರಾಡಲು ಇಡೀ ದೇಶ ಸಜ್ಜಾಗಬೇಕಿದೆ.

Advertisement

ಚಳಿಗಾಲದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಹಲವು ರೀತಿಯ ಸೋಂಕುಗಳು ಹರಡುತ್ತಿವೆ. ಚಳಿಗಾಲದ ಆರಂಭದಲ್ಲೇ ಕರ್ನಾಟಕದಲ್ಲಿ ಸೋಂಕುಗಳ ಆರ್ಭಟ ಹೆಚ್ಚಿದ್ದು, ಆಸ್ಪತ್ರೆಗಳು ಭರ್ತಿಯಾಗುತ್ತಿವೆ. ಇದೇ ಪರಿಸ್ಥಿತಿ ದೇಶದೆಲ್ಲೆಡೆ ಚಳಿಗಾಲದ ವೇಳೆ ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಕೋವಿಡ್ 19 ಸೋಂಕನ್ನು ಎದುರಿಸಿದ ಮಾದರಿಯಲ್ಲೇ ಇತರ ಸೋಂಕುಗಳ ವಿರುದ್ಧವೂ ಹೋರಾಡಲು ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನ ಪರಿಷ್ಕರಣೆ ಮಾಡಲಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

Advertisement
Tags :
LatestNewsNewsKannadaಕಾಯಿಲೆಕೋವಿಡ್ ಸೋಂಕುನ್ಯುಮೋನಿಯಾಸೋಂಕು
Advertisement
Next Article