ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಡಿ.10ರಿಂದ ಚೊಚ್ಚಲ ಖೇಲೋ ಪ್ಯಾರಾ ಗೇಮ್ಸ್‌: ಅನುರಾಗ್ ಠಾಕೂರ್ ಘೋಷಣೆ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಖೇಲೋ ಇಂಡಿಯಾ ಕ್ರೀಡಾಕೂಟ ಭಾರಿ ಯಶಸ್ಸು ಕಂಡ ಬಳಿಕ ಇದೀಗ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ ಆಯೋಜಿಸಲು ಸರ್ಕಾರ ಸಜ್ಜಾಗಿದೆ.
04:47 PM Nov 23, 2023 IST | Ashitha S

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಖೇಲೋ ಇಂಡಿಯಾ ಕ್ರೀಡಾಕೂಟ ಭಾರಿ ಯಶಸ್ಸು ಕಂಡ ಬಳಿಕ ಇದೀಗ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ ಆಯೋಜಿಸಲು ಸರ್ಕಾರ ಸಜ್ಜಾಗಿದೆ.

Advertisement

ಚೊಚ್ಚಲ ಆವೃತ್ತಿಯು ಡಿ.10ರಿಂದ 17ರ ವರೆಗೂ ನವದೆಹಲಿಯಲ್ಲಿ ನಡೆಯಲಿದ್ದು, 28 ರಾಜ್ಯ ಹಾಗೂ 4 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 1350ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಮಾಧ್ಯಮಗಳಿಗೆ ತಿಳಿಸಿದರು.

ಪ್ಯಾರಾ ಖೇಲೋ ಇಂಡಿಯಾ ಕ್ರೀಡಾಕೂಟ ಆರಂಭಗೊಳ್ಳುತ್ತಿದೆ ಎಂದು ತಿಳಿಸಲು ಬಹಳ ಖುಷಿಯಾಗುತ್ತಿದೆ. ಈ ಕ್ರೀಡಾಕೂಟವು ದೇಶದ ಮೂಲೆ ಮೂಲೆಗಳಿಂದ ಪ್ರತಿಭೆಗಳನ್ನು ಹೆಕ್ಕಿ ತೆಗೆಯಲಿದೆ.

Advertisement

ಜಾಗತಿಕ ಮಟ್ಟದಲ್ಲಿ ಭಾರತೀಯರು ಇನ್ನಷ್ಟು ಸಾಧನೆ ಮಾಡಲು ಈ ಕ್ರೀಡಾಕೂಟ ನೆರವಾಗಲಿದೆ’ ಎಂದು ಅನುರಾಗ್‌ ಹೇಳಿದರು. ಇತ್ತೀಚೆಗೆ ನಡೆದ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 29 ಚಿನ್ನ, 31 ಬೆಳ್ಳಿ ಹಾಗೂ 51 ಕಂಚಿನ ಪದಕ ಪಡೆದು ಇತಿಹಾಸ ಸೃಷ್ಟಿಸಿತ್ತು.

Advertisement
Tags :
indiaLatestNewsNewsKannadaಅನುರಾಗ್ ಠಾಕೂರ್ಖೇಲೋ ಪ್ಯಾರಾ ಗೇಮ್ಸ್‌ನವದೆಹಲಿ
Advertisement
Next Article