For the best experience, open
https://m.newskannada.com
on your mobile browser.
Advertisement

ಮೋದಿ ಅಂದರೆ ಮೇಕರ್ ಆಫ್ ಡೆವಲಪ್ಡ್‌ ಇಂಡಿಯಾ ಎಂದ ಅನುರಾಗ್ ಠಾಕೂರ್

ಮೋದಿ ಮಾಸ್ಟರ್ ಆಫ್ ಡಿಜಿಟಲ್ ಇನ್‍ಫರ್ಮೇಶನ್ ಅಥವಾ ಮೇಕರ್ ಆಫ್ ಡೆವಲಪ್ಡ್‌ ಇಂಡಿಯಾ ‘ವಿಕಸಿತ ಭಾರತ’ ಎಂದು ಕರೆಯಬಹುದು ಎಂದು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದರು.
02:02 PM Apr 05, 2024 IST | Chaitra Kulal
ಮೋದಿ ಅಂದರೆ ಮೇಕರ್ ಆಫ್ ಡೆವಲಪ್ಡ್‌ ಇಂಡಿಯಾ ಎಂದ ಅನುರಾಗ್ ಠಾಕೂರ್

ಬೆಂಗಳೂರು: ಮೋದಿ ಮಾಸ್ಟರ್ ಆಫ್ ಡಿಜಿಟಲ್ ಇನ್‍ಫರ್ಮೇಶನ್ ಅಥವಾ ಮೇಕರ್ ಆಫ್ ಡೆವಲಪ್ಡ್‌ ಇಂಡಿಯಾ ‘ವಿಕಸಿತ ಭಾರತ’ ಎಂದು ಕರೆಯಬಹುದು ಎಂದು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದರು.

Advertisement

ಅವರು ನಗರದ ದಿ ಕ್ಯಾಪಿಟಲ್ ಹೋಟೆಲ್‍ನಲ್ಲಿ ನಡೆದ ಸಾಫ್ಟ್‌ವೇರ್ ತಂತ್ರಜ್ಞರ ಜತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಐಟಿ ಕುರಿತು ಮಾತನಾಡುವಾಗ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಕುರಿತು ಮಾತನಾಡಬೇಕಾಗುತ್ತದೆ. ಸಾರ್ವಜನಿಕ ಮೂಲಸೌಕರ್ಯ, ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿಗೆ ಕಳೆದ ವರ್ಷ 10 ಲಕ್ಷ ಕೋಟಿ ವ್ಯಯಿಸಿದ್ದರೆ, ಈ ವರ್ಷ 11 ಲಕ್ಷ ಕೋಟಿಗೂ ಹೆಚ್ಚು ವೆಚ್ಚ ಮಾಡುತ್ತಿದ್ದೇವೆ ಎಂದು ತಿಳಿಸಿದರು.

10 ವರ್ಷಗಳ ಹಿಂದೆ ಭಾರತ ಮತ್ತು ಭಾರತೀಯರು ಕಾಂಗ್ರೆಸ್ಸಿನ ಮತ್ತು ಆ ಸರ್ಕಾರದ ಭಾಗೀದಾರ ಪಕ್ಷಗಳ ಭ್ರಷ್ಟಾಚಾರ ಹಗರಣಗಳಿಂದ ಮುಕ್ತಿ ಪಡೆಯುವುದು ಹೇಗೆ ಎಂದು ಚಿಂತಿಸುವ ಸ್ಥಿತಿ ಇತ್ತು. ಕಾಮನ್‍ವೆಲ್ತ್ ಗೇಮ್ಸ್ ಹಗರಣ, ಅಗಸ್ಟ ವೆಸ್ಟಂಡ್ ಹಗರಣ, ಕಲ್ಲಿದ್ದಲು ಹಗರಣ, ಅಂತರಿಕ್ಷ್ ದೇವಾಸ್ ಹಗರಣ ಮೊದಲಾದವುಗಳ ಬಗ್ಗೆ ಇಂದಿನ 18-22ರ ಹರೆಯದ ಯುವಜನರಿಗೆ ಅರಿವಿಲ್ಲ.

Advertisement

2009 ರಿಂದ 2014 ರ ನಡುವೆ ಒಂದಾದ ನಂತರ ಒಂದು ಹಗರಣಗಳು ನಡೆದವು. 2014ರಲ್ಲಿ ಅಭಿವೃದ್ಧಿ ಸ್ಥಗಿತವಾಗಿತ್ತು. ದೇಶದಲ್ಲಿ ಹಣದುಬ್ಬರ ಹೆಚ್ಚಾಗಿತ್ತು. ಅಸಮರ್ಪಕ ನೀತಿಯಿಂದ ದೇಶಕ್ಕೆ ಸಮಸ್ಯೆ ಉಂಟಾಗಿತ್ತು ಎಂದು ಆರೋಪಿಸಿದ ಅವರು, ಆಗ ಬಿಜೆಪಿ ಪರ್ಯಾಯವಾಗಿ ಆಡಳಿತಕ್ಕೆ ಬಂತು ಎಂದರು.

ಈ ಸಂದರ್ಭದಲ್ಲಿ ಪ್ರಕೋಷ್ಠಗಳ ಸಂಯೋಜಕ ಎಸ್. ದತ್ತಾತ್ರೀ, ವೃತ್ತಿಪರರ ಪ್ರಕೋಷ್ಠದ ರಾಜ್ಯ ಸಂಚಾಲಕ ಕಿರಣ್ ಕುಮಾರ್ ಅಣ್ಣಿಗೇರಿ, ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಜಯ್‍ಕುಮಾರ್ ಮತ್ತು ಪಕ್ಷದ ಮುಖಂಡರು ಇದ್ದರು.

Advertisement
Tags :
Advertisement