For the best experience, open
https://m.newskannada.com
on your mobile browser.
Advertisement

ಕೆಫೆ ಬಗ್ಗೆ ತಪ್ಪು ಹೇಳಿಕೆ : ತ.ನಾಡು ಜನತೆಗೆ ಕ್ಷಮೆ ಯಾಚಿಸಿದ ಸಚಿವೆ ಶೋಭ

ನಗರದ ರಾಮೇಶ್ವರಂ ಕೆಫೆಯಲ್ಲಿ ಇತ್ತೀಚೆಗೆ ನಡೆದ ಬಾಂಬ್‌ ಸ್ಪೋಟದ ಕುರಿತು ಕೇಂದ್ರ ಸಚಿವೆ ಶೋಭ ಕರಾಂದ್ಲಾಜೆ ತಪ್ಪು ಹೇಳಿಕೆ ನೀಡಿದ್ದರು ನಂತರ ಕೂಡಲೇ ಟ್ವೀಟ್‌ ಮೂಲಕ ಕ್ಷಮೆ ಯಾಚಿಸಿದ್ದಾರೆ.
11:35 AM Mar 20, 2024 IST | Nisarga K
ಕೆಫೆ ಬಗ್ಗೆ ತಪ್ಪು ಹೇಳಿಕೆ   ತ ನಾಡು ಜನತೆಗೆ ಕ್ಷಮೆ ಯಾಚಿಸಿದ ಸಚಿವೆ ಶೋಭ
ಕೆಫೆ ಬಗ್ಗೆ ತಪ್ಪು ಹೇಳಿಕೆ : ತ.ನಾಡು ಜನತೆಗೆ ಕ್ಷಮೆ ಯಾಚಿಸಿದ ಸಚಿವೆ ಶೋಭ

ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಇತ್ತೀಚೆಗೆ ನಡೆದ ಬಾಂಬ್‌ ಸ್ಪೋಟದ ಕುರಿತು ಕೇಂದ್ರ ಸಚಿವೆ ಶೋಭ ಕರಾಂದ್ಲಾಜೆ ತಪ್ಪು ಹೇಳಿಕೆ ನೀಡಿದ್ದರು ನಂತರ ಕೂಡಲೇ ಟ್ವೀಟ್‌ ಮೂಲಕ ಕ್ಷಮೆ ಯಾಚಿಸಿದ್ದಾರೆ.

Advertisement

ಮಂಗಳವಾರ ದಂದು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ  ಬಾಂಬ್‌ ಸ್ಪೋಟದ ಶಂಕಿತ ಆರೋಪಿ ತಮಿಳುನಾಡಿನವನು ಎಂದು ಹೇಳಿಕೆ ನೀಡಿದ್ದರು ಇದರಿಂದ ತಮಿಳುನಾಡಿನ ಕೆಲವರಿಗೆ ಬೇಸರ ತಂದಿರುವುದು ತಿಳಿದು ಮತ್ತೊಮ್ಮೆ ಎಕ್ಸ್‌ ಮೂಲಕ ಕ್ಷಮೆಯಾಚಿಸಿದ್ದಾರೆ.ನನ್ನ ಮಾತುಗಳು ಪ್ರಕರಣದ ಬಗ್ಗೆ ಬೆಳಕು ಚೆಲ್ಲುವ ಉದ್ದೇಶ ಇತ್ತೆ ಹೊರತು,ಆರೋಪ ಹೊರಿಸುವ ಆಶಯ ಇರಲಿಲ್ಲ. ಆದರೂ ನನ್ನ ಹೇಳಿಕೆಗಳು ಕೆಲವರಿಗೆ ನೋವುತಂದಿರುವುದನ್ನು ಗಮನಿಸಿದ್ದೇನೆ ಹಾಗಾಗಿ ನಾನು ಅವರಲ್ಲಿ ಕ್ಷಮೆ ಯಾಚಿಸುತ್ತೇನೆ. ನನ್ನ ಟೀಕೆಗಳು ರಾಮೇಶ್ವರಂ ಕೆಫೆ ಸ್ಪೋಟಕ್ಕೆ ಸಂಬಂಧಿಸಿದ ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದವರ ಬಗ್ಗೆ ಹೇಳಿರುವುದಾಗಿತ್ತು. ತಮಿಳುನಾಡಿನ ಎಲ್ಲರಿಗೂ ನನ್ನ ಹೃದಯದಿಂದ ಕ್ಷಮೆ ಯಾಚಿಸುತ್ತೇನೆ. ನನ್ನ ಹಿಂದಿನ ಮಾತುಗಳನ್ನು ಹಿಂಪಡೆಯುತ್ತೇನೆ.ಎಂದು ಹೇಳಿದ್ದಾರೆ

Advertisement

ಈ ಹಿಂದೆ ಅವರು ʻರಾಮೇಶ್ವರಂ ಕೆಫೆಯಲ್ಲಿ ತಮಿಳುನಾಡಿನಿಂದ ಬಂದವನು ಬಾಂಬ್‌ ಇಟ್ಟಿದ್ದ, ದೆಹಲಿಯಿಂದ ಬಂದ ಒಬ್ಬ ವ್ಯಕ್ತಿ ವಿಧಾನಸೌದದ ಮುಂದೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ, ಕೇರಳದಿಂದ ಬಂದ ವ್ಯಕ್ತಿ ವಿದ್ಯಾರ್ಥೀಗಳ ಮೇಲೆ ಆಸಿಡ್‌ ಎರಚಿದ್ದʼ ಎಂದು ಮಂಗಳವಾರ ಎಕ್ಸ್‌ ಮೂಲಕ ಹೇಳಿದ್ದರು

Advertisement
Tags :
Advertisement