For the best experience, open
https://m.newskannada.com
on your mobile browser.
Advertisement

ಅರ್ಧ ಬೆಲೆಗೆ ಸಿಗುತ್ತಿದೆ ಆ್ಯಪಲ್ ಪ್ರೊಡಕ್ಟ್:ಈ ಆಫರ್ ಮಿಸ್ ಮಾಡ್ಬೇಡಿ

ದೀಪಾವಳಿ ಪ್ರಯುಕ್ತ ಈಗಾಗಲೇ ಫ್ಲಿಪ್​ಕಾರ್ಟ್, ಅಮೆಜಾನ್​ನಂತಹ ಇ ಕಾಮರ್ಸ್ ವೆಬ್​ಸೈಟ್​ಗಳು ದೀಪವಾಳಿ ಸೇಲ್ ಆರಂಭಿಸಿದೆ. ಇದರಲ್ಲಿ ಅನೇಕ ಉತ್ಪನ್ನಗಳ ಮೇಲೆ ಗಮನಾರ್ಹ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇದೀಗ, ಪ್ರಸಿದ್ಧ ಆ್ಯಪಲ್ ಸಂಸ್ಥೆ ಕೂಡ ತನ್ನ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ಘೋಷಿಸಿದೆ.
02:01 PM Nov 09, 2023 IST | Gayathri SG
ಅರ್ಧ ಬೆಲೆಗೆ ಸಿಗುತ್ತಿದೆ ಆ್ಯಪಲ್ ಪ್ರೊಡಕ್ಟ್ ಈ ಆಫರ್ ಮಿಸ್ ಮಾಡ್ಬೇಡಿ

ದೀಪಾವಳಿ ಪ್ರಯುಕ್ತ ಈಗಾಗಲೇ ಫ್ಲಿಪ್​ಕಾರ್ಟ್, ಅಮೆಜಾನ್​ನಂತಹ ಇ ಕಾಮರ್ಸ್ ವೆಬ್​ಸೈಟ್​ಗಳು ದೀಪವಾಳಿ ಸೇಲ್ ಆರಂಭಿಸಿದೆ. ಇದರಲ್ಲಿ ಅನೇಕ ಉತ್ಪನ್ನಗಳ ಮೇಲೆ ಗಮನಾರ್ಹ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇದೀಗ, ಪ್ರಸಿದ್ಧ ಆ್ಯಪಲ್ ಸಂಸ್ಥೆ ಕೂಡ ತನ್ನ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ಘೋಷಿಸಿದೆ.

Advertisement

ಆ್ಯಪಲ್ ತನ್ನ ದೀಪಾವಳಿ ಆಫರ್​ಗಳನ್ನು ಬಹಿರಂಗಪಡಿಸಿದೆ, ಇದು ಏರ್​ಪಾಡ್, ಐಫೋನ್ 14 ಮತ್ತು ಐಫೋನ್ 14 ಪ್ಲಸ್​ಗೆ ಅನ್ವಯಿಸುತ್ತದೆ. ಇದರಲ್ಲಿ ನೀವು 50% ವರೆಗೆ ರಿಯಾಯಿತಿ ಪಡೆಯಬಹುದು. ಐಫೋನ್ 14 ಪ್ರೊ 128GB ಮಾದರಿಯ ಮೂಲ ಬೆಲೆ 79,900 ರೂ. ಆಗಿದೆ. ಆದರೆ, ಇದೀಗ 69,900 ರೂ. ಗೆ ಮಾರಾಟ ಕಾಣುತ್ತಿದೆ.

ಗ್ರಾಹಕರು ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದಾಗ, ಆ್ಯಪಲ್ ಮ್ಯೂಸಿಕ್‌ನ ಆರು ತಿಂಗಳ ಚಂದಾದಾರಿಕೆಯನ್ನು ಪಡೆಯುತ್ತಾರೆ ಎಂದು ಆ್ಯಪಲ್ ಘೋಷಿಸಿದೆ. ಅರ್ಹ ಕಾರ್ಡ್ ಮೂಲಕ ಪಡೆದುಕೊಂಡರೆ ಕ್ಯಾಶ್‌ಬ್ಯಾಕ್ ಆಫರ್ ಕೂಡ ಇರಲಿದೆ.

Advertisement

ಹೆಚ್ಚುವರಿಯಾಗಿ, ಅರ್ಹ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರು ಮೂರು ಅಥವಾ ಆರು ತಿಂಗಳ ಅವಧಿಯೊಂದಿಗೆ ಪ್ರಸಿದ್ಧ ಬ್ಯಾಂಕ್‌ಗಳಿಂದ ಅರ್ಹತಾ ಕಾರ್ಡ್‌ಗಳನ್ನು ಬಳಸಿದಾಗ, ಅವರು ಉಚಿತ EMI ಡೀಲ್‌ಗಳ ಲಾಭವನ್ನು ಪಡೆಯಬಹುದು. ಐಪಾಡ್, ಏರ್​ಪಾಡ್ಸ್, ಏರ್ ಟ್ಯಾಗ್/ಆ್ಯಪಲ್ ಪೆನ್ಸಿಲ್ ಖರೀದಿಸುವ ಆಕರ್ಷಕ ಆಫರ್​ಗಳನ್ನು ನೀಡಲಾಗಿದೆ.

Advertisement
Tags :
Advertisement