For the best experience, open
https://m.newskannada.com
on your mobile browser.
Advertisement

ಆ್ಯಪಲ್‌ನ ವಿಷನ್ ಪ್ರೋ ಬಿಡುಗಡೆ ಡೇಟ್ ಪಿಕ್ಸ್

ಆ್ಯಪಲ್ ಉತ್ಪನ್ನಗಳ ಪೈಕಿ ಬಹು ನಿರೀಕ್ಷಿತ ಉತ್ನನ್ನ ಮಾರುಕಟ್ಟೆಗೆ ಬರಲು ಸಜ್ಜಾಗಿದೆ.
02:16 PM Dec 27, 2023 IST | Ramya Bolantoor
ಆ್ಯಪಲ್‌ನ  ವಿಷನ್ ಪ್ರೋ ಬಿಡುಗಡೆ ಡೇಟ್ ಪಿಕ್ಸ್

ನವದೆಹಲಿ : ಆ್ಯಪಲ್ ಉತ್ಪನ್ನಗಳ ಪೈಕಿ ಬಹು ನಿರೀಕ್ಷಿತ ಉತ್ನನ್ನ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಆ್ಯಪಲ್ ವಿಷನ್ ಪ್ರೋ ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಭಾರತ ಸೇರಿದಂತೆ ಎಲ್ಲಾ ದೇಶದಲ್ಲೂ ಬಿಡುಗಡೆ ಆಗುತ್ತದೆ. ಆ್ಯಪಲ್ ವಿಷನ್ ಪ್ರೋ ಬೆಲೆ $3499. ಭಾರತೀಯ ರೂಪಾಯಿಗಳಲ್ಲಿ 2.8 ಲಕ್ಷ ರೂಪಾಯಿ. ಆ್ಯಪಲ್ ಪ್ರೋ ವಿಷನ್ ಉತ್ಪಾದನೆ ನಡೆಯುತ್ತಿದೆ.

Advertisement

ಆ್ಯಪಲ್ ವಿಷನ್ ಪ್ರೋ ಬಗ್ಗೆ ಆ್ಯಪಲ್ ಸಿಇಒ ಮಾಹಿತಿ ಬಹಿರಂಗಪಡಿಸಿದ್ದರು. ಸದ್ಯ ಜನರು ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಕ್ಯಾಮೆರಾ, ಟಿವಿ ಸೇರಿದಂತೆ ಇತರ ಗ್ಯಾಜೆಟ್ಸ್ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದರೆ ಆ್ಯಪಲ್ ಪ್ರೋ ವಿಷನ್‌ನಿಂದ ಜನರು ಈ ಗ್ಯಾಜೆಟ್ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದು ಕುಕ್ ಹೇಳಿದ್ದಾರೆ.

ಆ್ಯಪಲ್ ಕಂಪನಿ ಉತ್ಪನ್ನಗಳು ಭಾರತದಲ್ಲಿಉತ್ಪಾದನೆಯಾಗುತ್ತಿದೆ.  ಪ್ರಧಾನಿ ನರೇಂದ್ರ ಮೋದಿಯವರ ಉತ್ಪಾದನೆ ಆಧರಿತ ಪ್ರೋತ್ಸಾಹ (ಪಿಎಲ್‌ಐ) ಯೋಜನೆಯಡಿ ಈಗಾಗಲೇ ಭಾರತವು ಸ್ಮಾರ್ಟ್‌ಫೋನ್‌ ಉತ್ಪಾದನೆಯಲ್ಲಿ ದೊಡ್ಡ ಜಾಗತಿಕ ಹಬ್‌ ಆಗಿ ಹೊರಹೊಮ್ಮುತ್ತಿದೆ.

Advertisement

Advertisement
Tags :
Advertisement