For the best experience, open
https://m.newskannada.com
on your mobile browser.
Advertisement

ಏಪ್ರಿಲ್‌ 26ರಂದು ಚುನಾವಣಾ ಹಿನ್ನೆಲೆ ಬನ್ನೇರುಘಟ್ಟ ಪಾರ್ಕ್‌ ಕ್ಲೋಸ್‌

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಡಳಿತ ಮಂಡಳಿ ಏಪ್ರಿಲ್‌ 26  ಮತದಾನದ ದಿನದಂದು ರಜೆ ಘೋಷಣೆ ಮಾಡಿದೆ.
06:18 PM Apr 09, 2024 IST | Chaitra Kulal
ಏಪ್ರಿಲ್‌ 26ರಂದು ಚುನಾವಣಾ ಹಿನ್ನೆಲೆ ಬನ್ನೇರುಘಟ್ಟ ಪಾರ್ಕ್‌ ಕ್ಲೋಸ್‌

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಡಳಿತ ಮಂಡಳಿ ಏಪ್ರಿಲ್‌ 26  ಮತದಾನದ ದಿನದಂದು ರಜೆ ಘೋಷಣೆ ಮಾಡಿದೆ.

Advertisement

ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆಯನ್ನು ಘೋಷಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ. ಏಪ್ರಿಲ್ 26 ರಂದು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆದರೆ, 2ನೇ ಹಂತದ ಮತದಾನವು ಮೇ 7ರಂದು ನಡೆಯಲಿದೆ.

ಮತದಾನದ ದಿನದಂದು ಎಲ್ಲ ರಾಜ್ಯ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಎಲ್ಲ ವ್ಯಾವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಕಾಯಂ ಆಗಿ ಹಾಗೂ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ.

Advertisement

ರಜೆ ಸಿಕ್ಕ ಖುಷಿಯಲ್ಲಿ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗದೆ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಹೀಗಾಗಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಝೂ, ಸಫಾರಿ ಮತ್ತು ಚಿಟ್ಟೆ ಪಾರ್ಕ್ ಪ್ರವಾಸಿಗರ ವೀಕ್ಷಣೆಗೆ ಲಭ್ಯವಿರುವುದಿಲ್ಲ. 26 ಬದಲಾಗಿ ಏಪ್ರಿಲ್‌ 30ರಂದು ಪಾರ್ಕ್‌ ತೆರೆಯಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Advertisement
Tags :
Advertisement