For the best experience, open
https://m.newskannada.com
on your mobile browser.
Advertisement

ಮಂಗಳೂರಿನಲ್ಲಿ ತನ್ನ 2ನೇ ಮಳಿಗೆಯನ್ನು ತೆರೆಯುತ್ತಿದೆ ಮುಂಬೈನ ರತ್ನ "ಅಪ್ಸರಾ ಐಸ್ ಕ್ರೀಮ್ಸ್"

ಐಸ್ ಕ್ರೀಮ್ ಪ್ರಿಯರೇ. . . 1971 ರಿಂದ ಮುಂಬೈನ ರತ್ನವಾಗಿರುವ ಅಪ್ಸರಾ ಐಸ್ ಕ್ರೀಮ್ಸ್, ಮಾರ್ಚ್ 11, 2024 ರಂದು ಮಣ್ಣಗುಡ್ಡದಲ್ಲಿ ತನ್ನ ಎರಡನೇ ಮಳಿಗೆಯನ್ನು ಮಂಗಳೂರಿನಲ್ಲಿ ತೆರೆದು ಐಸ್ ಕ್ರೀಮ್ ಪ್ರಿಯರಿಗೇ ಮತ್ತಷ್ಟು ಮೋಡಿ ಮಾಡಲು ಸಜ್ಜಾಗಿದೆ. ಈಗಾಗಲೇ ಮಂಗಳೂರಿನ ಕದ್ರಿಯಲ್ಲಿ ಅಪ್ಸರಾ ಐಸ್ ಕ್ರೀಮ್ಸ್ ತನ್ನ ಮೊದಲ ಮಳಿಗೆಯನ್ನು ತೆರೆದು ಯಶಸ್ಸನ್ನು ಕಂಡಿದೆ.
04:16 PM Mar 07, 2024 IST | Ashitha S
ಮಂಗಳೂರಿನಲ್ಲಿ ತನ್ನ 2ನೇ ಮಳಿಗೆಯನ್ನು ತೆರೆಯುತ್ತಿದೆ ಮುಂಬೈನ ರತ್ನ  ಅಪ್ಸರಾ ಐಸ್ ಕ್ರೀಮ್ಸ್

ಮಂಗಳೂರು: ಐಸ್ ಕ್ರೀಮ್ ಪ್ರಿಯರೇ. . . 1971 ರಿಂದ ಮುಂಬೈನ ರತ್ನವಾಗಿರುವ ಅಪ್ಸರಾ ಐಸ್ ಕ್ರೀಮ್ಸ್, ಮಾರ್ಚ್ 11, 2024 ರಂದು ಮಣ್ಣಗುಡ್ಡದಲ್ಲಿ ತನ್ನ ಎರಡನೇ ಮಳಿಗೆಯನ್ನು ಮಂಗಳೂರಿನಲ್ಲಿ ತೆರೆದು ಐಸ್ ಕ್ರೀಮ್ ಪ್ರಿಯರಿಗೇ ಮತ್ತಷ್ಟು ಮೋಡಿ ಮಾಡಲು ಸಜ್ಜಾಗಿದೆ. ಈಗಾಗಲೇ ಮಂಗಳೂರಿನ ಕದ್ರಿಯಲ್ಲಿ ಅಪ್ಸರಾ ಐಸ್ ಕ್ರೀಮ್ಸ್ ತನ್ನ ಮೊದಲ ಮಳಿಗೆಯನ್ನು ತೆರೆದು ಯಶಸ್ಸನ್ನು ಕಂಡಿದೆ.

Advertisement

ಮಣ್ಣಗುಡ್ಡದ ಗಾಂಧಿ ಪಾರ್ಕ್ ನ ಪ್ರಶಾಂತತೆಯಲ್ಲಿ ನೆಲೆಸಿರುವ ಲೋಟಸ್ ಧಾಮ್ ನ ಆಕರ್ಷಕ ವಾತಾವರಣದ ನಡುವೆ, ಅಪ್ಸರಾ ಐಸ್ ಕ್ರೀಮ್ಸ್ ನ ಹೊಸ ಭವ್ಯವಾದ ಮಳಿಗೆಯ ಉದ್ಘಾಟನಾ ಸಮಾರಂಭವು ಹಮ್ಮಿಕೊಂಡಿದೆ. ಬೆಳಿಗ್ಗೆ 11:00 ಗಂಟೆಗೆ ಇದರ ಉದ್ಘಾಟನೆ ನಡೆಯಲಿದ್ದು, ಈ ಶುಭಾರಂಭಕ್ಕೆ ಅಪ್ಸರಾ ಐಸ್ ಕ್ರೀಮ್ ಪ್ರೀಯರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದೆ. ಇನ್ನು ಈ ಮಳಿಗೆಯನ್ನು ಶ್ರೀ ಸುಬ್ರಯಾ ಎಮ್‌ ಪೈ ಚೇರ್‌ ಮಾನ್‌ ಭಾರತ್‌ ಆಟೋ ಕಾರ್ಸ್‌ ಪ್ರೈ.ಲೀ ಕಾರ್ಯನಿರ್ವಾಹಕರು ಭಾರತ್‌ ಬೀಡಿ ವರ್ಕ್ಸ್‌ ಪ್ರೈ.ಲೀ ಇವರು ಉದ್ಘಾಟಿಸಲಿದ್ದಾರೆ.

ಕಾಮಾಕ್ಷಿ ಗ್ರೂಪ್ ನ ಅಪ್ಸರಾ ಐಸ್ ಕ್ರೀಮ್ಸ್ 1971 ರಿಂದ ಮುಂಬೈನ ಅತ್ಯಂತ ಹಳೆಯ ಐಸ್ ಕ್ರೀಮ್ ಬ್ರಾಂಡ್ ಗಳಲ್ಲಿ ಒಂದಾಗಿದೆ. ವರ್ಷವಿಡೀ ಎಲ್ಲರೂ ಇಷ್ಟಪಡುವ ಐಸ್ ಕ್ರೀಮ್ ತಿನ್ನಲು ಯಾವುದೇ ವಯಸ್ಸಿನ ಮಿತಿ ಅಥವಾ ದಿನದಲ್ಲಿ ಯಾವುದೇ ನಿರ್ದಿಷ್ಟ ಸಮಯವಿಲ್ಲ.

Advertisement

ಅಪ್ಸರಾ ಐಸ್ ಕ್ರೀಮ್ಸ್ 1971ರಲ್ಲಿ ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿ ಪ್ರಾರಂಭವಾಗಿತ್ತು. ಇಲ್ಲಿ ಪ್ರಮುಖ ಬ್ರ್ಯಾಂಡ್‌ ಆಗಿ ಹೊರಹೊಮ್ಮಿದೆ. ಬಳಿಕ ಹಲವು ವರ್ಷಗಳ ಕಾಲ ಅಂಗಡಿಗಳಿಗೆ ಅಪ್ಸರಾ ಐಸ್ ಕ್ರೀಮ್ಸ್ ಮಾರಾಟ ಮಾಡುತ್ತ, ಮದುವೆಗಳು, ಇತರ ಕಾರ್ಯಕ್ರಮಗಳಿಗೆ ಸಾಕಷ್ಟು ತಮ್ಮ ಮಾರಾಟವನ್ನು ಪೂರೈಸಿತು. ಬಳಿಕ ತನ್ನ ವಾಣಿಜ್ಯ ವ್ಯಾಪ್ತಿ ವಿಸ್ತರಿಸುತ್ತದ್ದಂತೆ 2014ರ ಬಳಿಕ ಮುಂಬೈನ ಪ್ರಮುಖ ಸ್ಥಳಗಳಾದ ಪೊವಾಯಿ, ಅಂಧೇರಿ, ಲೋಖಂಡ್ವಾಲಾ ಮತ್ತು ಕಿಂಗ್ ಸರ್ಕಲ್ನಲ್ಲಿ ನಾಲ್ಕು ಹೊಸ ಮಳಿಗೆಗಳನ್ನು ಪ್ರಾರಂಭಿಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದರು.

ಬಳಿಕ ಸಾಕಷ್ಟು ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಅಪ್ಸರಾ ಐಸ್ ಕ್ರೀಮ್ಸ್ ಬ್ರಾಂಡ್ ಫ್ರ್ಯಾಂಚೈಸ್ ಪಡೆಯಲು ಪ್ರಾರಂಭಿಸಿತು. 2015 ರಲ್ಲಿ ಬ್ರ್ಯಾಂಡ್ ನೆರೂಲ್ನಲ್ಲಿ ತನ್ನ ಮೊದಲ ಫ್ರ್ಯಾಂಚೈಸ್ ಮಳಿಗೆಯನ್ನು ತೆರೆಯಿತು. ನಂತರ ಹಿಂತಿರುಗಿ ನೋಡಲಿಲ್ಲ. 2017 ರ ಹೊತ್ತಿಗೆ 3 ನಗರಗಳಲ್ಲಿ 25 ಮಳಿಗೆಗಳು ಇದ್ದವು. ಬಳಿಕ ಬೇಡಿಕೆ ಹೆಚ್ಚುತ್ತಿದ್ದ ಬೇಡಿಕೆಯ ಆಧಾರದ ಮೇಲೆ, ಥಾಣೆಯಲ್ಲಿ 10,000 ಚದರ ಅಡಿ ಅತ್ಯಾಧುನಿಕ ಕಾರ್ಖಾನೆಯನ್ನು ತೆರೆಯಲಾಯಿತು.

ಇನ್ನು 2020ರ ವೇಳೆಗೆ ತನ್ನ 100ನೇ ಮಳಿಗೆಯನ್ನು ತೆರೆದಾಗ ಅಪ್ಸರಾ ಐಸ್ ಕ್ರೀಮ್ಸ್ ಬ್ರ್ಯಾಂಡ್ ಮಹತ್ವದ ಮೈಲಿಗಲ್ಲನ್ನು ತಲುಪಿತು. ಅಪ್ಸರಾ ಐಸ್ ಕ್ರೀಮ್ಸ್ ಇಂದು 50+ ಫ್ಲೇವರ್ ಗಳು ಮತ್ತು 125+ ಮಳಿಗೆಗಳ ಮೂಲಕ ಮಹತ್ತರ ಬೆಳವಣಿಗೆಯನ್ನು ಕಂಡು, ಯಶಸ್ಸು ಕಾಣುತ್ತಿದೆ.

ಅಪ್ಸರಾ ಐಸ್ ಕ್ರೀಮ್ ಗಳನ್ನು ಪ್ರತ್ಯೇಕಿಸುವ ಅಂಶವೆಂದರೆ ಉತ್ಕೃಷ್ಟತೆಯ ಬದ್ಧತೆ. ತಾಜಾ ಪೂರ್ಣ ಕೆನೆ ಹಾಲು ಮತ್ತು 100% ನಿಜವಾದ ಹಣ್ಣುಗಳು ಮತ್ತು ಒಣ ಹಣ್ಣುಗಳನ್ನು ಬಳಸಿಕೊಂಡು ಸ್ವಾಧಿಷ್ಠತೆಯನ್ನು ನೀಡುತ್ತಾ ಬಂದಿದೆ. ಪ್ರತಿ ಸ್ಕೂಪ್ ಕೂಡ ಪರಿಪೂರ್ಣತೆಗೆ ಸಾಕ್ಷಿಯಾಗಿದೆ.

ಅಪ್ಸರಾ ಐಸ್ ಕ್ರೀಮ್ಸ್ ತನ್ನ ಎರಡನೇ ಮಳಿಗೆಯನ್ನು ಗ್ರೌಂಡ್‌ ಫ್ಲೋರ್‌, ಲೋಟಸ್‌ ಧಾಮ್‌ ಗಾಂಧೀ ಪಾರ್ಕ್‌ ಮಣ್ಣಗುಡ್ಡದ ಗಾಂಧೀನಗರದಲ್ಲಿ ತೆರೆಯುವ ಸಂಭ್ರಮದಲ್ಲಿದೆ. ಈ ಪ್ರಯುಕ್ತ ಮಾರ್ಚ್ 11 ರಿಂದ 13, 2024 ರವರೆಗೆ ವಾಕ್-ಇನ್ ಗಳಿಗಾಗಿ ಪ್ರತ್ಯೇಕವಾಗಿ ಎಲ್ಲಾ ಸ್ಕೂಪ್ ಗಳ ಮೇಲೆ 50% ರಿಯಾಯಿತಿ ನೀಡುತ್ತದೆ. ಹಾಗಾಗಿ ನೀವು ಈ ಸುವರ್ಣಾವಕಾಶವನ್ನು ಮಿಸ್‌ ಮಾಡಿಕೊಳ್ಳಬೇಡಿ. ಮಣ್ಣಗುಡ್ಡದಲ್ಲಿ ತೆರೆಯಲಿರುವ ಹೊಸ ಮಳಿಗೆಗೆ ಭೇಟಿ ನೀಡಿ ನಿಮ್ಮ ಇಷ್ಟದ ಐಸ್ ಕ್ರೀಮ್ಸ್ ಫ್ಲೆವರ್‌ ಸವಿಹಿರಿ.

ಹೆಚ್ಚಿನ ಮಾಹಿತಿ ಮತ್ತು ಆರ್ಎಸ್ವಿಪಿಗಾಗಿ, ಮನೇಲ್ ಶ್ರೀಕಾಂತ್ ನಾಯಕ್ ಅವರನ್ನು +91 7738397410 ನಲ್ಲಿ ಸಂಪರ್ಕಿಸಿ.

ಅಪ್ಸರಾ ಐಸ್ ಕ್ರೀಮ್ ಸವಿಯುವಲ್ಲಿ ನಿಮ್ಮನ್ನು ನಿವೂ ತೊಡಗಿಸಿಕೊಳ್ಳಿ - ಅಲ್ಲಿ ಪ್ರತಿ ಸ್ಕೂಪ್ ಒಂದೊಂದು ಒಂದು ಕಥೆಯನ್ನು ಹೇಳುತ್ತದೆ

ಅಪ್ಸರಾ ಅವರ ಪರಂಪರೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ http://apsaraicecreams.com/brand-story   ಭೇಟಿ ನೀಡಿ.

Advertisement
Tags :
Advertisement