ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅರ್ಜುನ್ ಮೋಹನ್ ರಾಜೀನಾಮೆ : ಬೈಜುಸ್​ಗೆ ಸಿಇಒ ಆಗಿ ಮರಳಿದ ರವೀಂದ್ರನ್

ಈಗಾಗಲೇ ಹಲವು ಸಂಕಷ್ಟಗಳ ಜೊತೆ ಸಿಲುಕಿದ್ದ ಬೈಜುಸ್ ಸಂಸ್ಥೆಯ ಸಿಇಒ ಆಗಿದ್ದ ಅರ್ಜುನ್ ಮೋಹನ್ ಅವರು ಇಂದು ತಮ್ಮ ಪದವಿಗೆ ರಾಜಿನಾಮೆ ನೀಡಿದ್ದಾರೆ. 2020ರಲ್ಲಿ ರಾಜೀನಾಮೆ ನೀಡಿ ಅಪ್​ಗ್ರಾಡ್​ಗೆ ಸಿಇಒ ಆಗಿದ್ದರು.
02:52 PM Apr 15, 2024 IST | Nisarga K
ಅರ್ಜುನ್ ಮೋಹನ್ ರಾಜೀನಾಮೆ : ಬೈಜುಸ್​ಗೆ ಸಿಇಒ ಆಗಿ ಮರಳಿದ ರವೀಂದ್ರನ್

ಬೆಂಗಳೂರು: ಈಗಾಗಲೇ ಹಲವು ಸಂಕಷ್ಟಗಳ ಜೊತೆ ಸಿಲುಕಿದ್ದ ಬೈಜುಸ್ ಸಂಸ್ಥೆಯ ಸಿಇಒ ಆಗಿದ್ದ ಅರ್ಜುನ್ ಮೋಹನ್ ಅವರು ಇಂದು ತಮ್ಮ ಪದವಿಗೆ ರಾಜಿನಾಮೆ ನೀಡಿದ್ದಾರೆ. 2020ರಲ್ಲಿ ರಾಜೀನಾಮೆ ನೀಡಿ ಅಪ್​ಗ್ರಾಡ್​ಗೆ ಸಿಇಒ ಆಗಿದ್ದರು. ಬೈಜುಸ್​ಗೆ ಮರಳಿದ ಅವರು ಇಂಟರ್ನ್ಯಾಷನಲ್ ಬಿಸಿನೆಸ್​ ವಿಭಾಗದ ಮುಖ್ಯಸ್ಥರಾಗಿದ್ದರು. ಕಳೆದ 10 ತಿಂಗಳಿಂದ ಅವರು ಸಿಇಒ ಆಗಿಯೂ ಆಡಳಿತ ನಡೆಸಿದ್ದಾರೆ. ಇದೀಗ ಅವರು ರಾಜಿನಾಮೆ ನೀಡಿದ್ದು ಸಿಇಒ ಸ್ಥಾನಕ್ಕೆ ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರು ಮರಳಿದ್ದು ಇನ್ನು ಆಡಳಿತವನ್ನು ಅವರೇ ನಡೆಸಲಿದ್ದಾರೆ.

Advertisement

ನಿರ್ಗಮಿತ ಅರ್ಜುನ್ ಮೋಹನ್ ಅವರು ಬಾಹ್ಯ ಸಲಹೆಗಾರರಾಗಿ ಬೈಜೂಸ್ ಜೊತೆ ನಂಟು ಹೊಂದಿರಲಿದ್ದಾರೆ. ಆಡಳಿತ ನಿರ್ಧಾರಗಳಲ್ಲಿ ಅವರ ಪಾತ್ರ ಇರುವುದಿಲ್ಲ. ಬೈಜುಸ್‌ ಸಂಸ್ಥೆ ಮೂರುಭಾಗಳಾಗಿ ಕಾರ್ಯನಿರ್ವಹಿಸಲಿದೆ. ಬೈಜುಸ್ ಲರ್ನಿಂಗ್ ಆ್ಯಪ್ ಒಂದು, ಆನ್ಲೈನ್ ಕ್ಲಾಸ್ ಮತ್ತು ಟ್ಯೂಷನ್ ಸೆಂಟರ್​ಗಳ ಬಿಸಿನೆಸ್ ಇನ್ನೊಂದು. ಪರೀಕ್ಷಾ ಸಿದ್ಧತೆಗಳ ಬಿಸಿನೆಸ್ ಮೂರನೆಯದು. ಈ ಮೂರೂ ಘಟಕಗಳು ಪ್ರತ್ಯೇಕ ನಾಯಕತ್ವದೊಂದಿಗೆ ಸ್ವತಂತ್ರವಾಗಿ ಕಾರ್ಯ ವಹಿಸಲಿವೆ.

Advertisement
Advertisement
Tags :
Arjun MohanBaijusbengaluruByju RaveendranCEOinstitutionLatestNewsNewsKarnatakaresigned
Advertisement
Next Article