For the best experience, open
https://m.newskannada.com
on your mobile browser.
Advertisement

ಐವರು ಯೋಧರು ವೀರ ಮರಣ ಕೇಸ್: ಕಾಶ್ಮೀರಕ್ಕೆ ಸೇನಾ ಮುಖ್ಯಸ್ಥರು ಭೇಟಿ

ಪೂಂಚ್​ನಲ್ಲಿ ಭಾರತೀಯ ಸೇನೆಯ ವಾಹನದ ಮೇಲೆ ಭಯೋತ್ಪಾದಕರು ದಾಳಿ ಮಾಡಿದ ಪರಿಣಾಮ ಐವರು ಯೋಧರು ಸಾವನ್ನಪ್ಪಿದ್ದರು. ಪ್ರಕರಣ ಬೆನ್ನಲ್ಲೇ ಕಸ್ಟಡಿಗೆ ತೆಗೆದುಕೊಂಡಿದ್ದ ಮೂವರು ಸಾವನ್ನಪ್ಪಿದ್ದಾರೆ.
09:29 AM Dec 26, 2023 IST | Ashitha S
ಐವರು ಯೋಧರು ವೀರ ಮರಣ ಕೇಸ್  ಕಾಶ್ಮೀರಕ್ಕೆ ಸೇನಾ ಮುಖ್ಯಸ್ಥರು ಭೇಟಿ

ಶ್ರೀನಗರ: ಪೂಂಚ್​ನಲ್ಲಿ ಭಾರತೀಯ ಸೇನೆಯ ವಾಹನದ ಮೇಲೆ ಭಯೋತ್ಪಾದಕರು ದಾಳಿ ಮಾಡಿದ ಪರಿಣಾಮ ಐವರು ಯೋಧರು ಸಾವನ್ನಪ್ಪಿದ್ದರು. ಪ್ರಕರಣ ಬೆನ್ನಲ್ಲೇ ಕಸ್ಟಡಿಗೆ ತೆಗೆದುಕೊಂಡಿದ್ದ ಮೂವರು ಸಾವನ್ನಪ್ಪಿದ್ದಾರೆ.

Advertisement

ಮೂವರು ಸಾವನ್ನಪ್ಪಿರುವ ಸಂಬಂಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿಸೆಂಬರ್ 21 ರಂದು ಸೇನಾ ವಾಹನದ ಮೇಲೆ ದಾಳಿ ಬಳಿಕ ಮಾರನೇಯ ದಿನ 9 ಮಂದಿಯನ್ನು ಆರ್ಮಿ ಅಧಿಕಾರಿಗಳು ತನಿಖೆಯ ಭಾಗವಾಗಿ ವಶಕ್ಕೆ ಪಡೆದುಕೊಂಡಿದ್ದರು. ಸಫೀರ್ ಹುಸ್ಸೈನ್ (44), ಶೌಕೇತ್ ಅಲಿ (22), ಶಬಿರ್ ಹುಸ್ಸೈನ್ (32) ಮೃತಪಟ್ಟವರು. ಹೀಗಾಗಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಮ್ಮುವಿಗೆ ಭೇಟಿ ನೀಡಿದ ಬಳಿಕ ಅಲ್ಲಿಂದ ರಾಜೌರಿ ಮತ್ತು ಪೂಂಚ್​ ಜಿಲ್ಲೆಯಲ್ಲಿನ ಸೇನಾ ಸೆಕ್ಟರ್​ಗೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲನೆ ಮಾಡಿದ್ದಾರೆ. ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಕಸ್ಟಡಿಯಲ್ಲಿ ನಾಗರಿಕರು ಸಾವನ್ನಪ್ಪಿದ್ದರ ಕುರಿತು ಸಹ ವಿವರವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

Advertisement

Advertisement
Tags :
Advertisement