For the best experience, open
https://m.newskannada.com
on your mobile browser.
Advertisement

ತಮಿಳುನಾಡಿನ ಅಂತರ್ ರಾಜ್ಯ ನಟೋರಿಯಸ್ ಕಳ್ಳಿಯ ಬಂಧನ

ನಗರ ಠಾಣಾ ಪೊಲೀಸರಿಂದ ತಮಿಳುನಾಡು ಮೂಲದ ಅಂತರ್ ರಾಜ್ಯ ನಟೋರಿಯಸ್ ಕಳ್ಳಿಯ ಬಂಧನ ಹಾಗೂ  ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆಪಡೆಯಲಾಗಿದೆ.
11:59 AM Mar 24, 2024 IST | Nisarga K
ತಮಿಳುನಾಡಿನ ಅಂತರ್ ರಾಜ್ಯ ನಟೋರಿಯಸ್ ಕಳ್ಳಿಯ ಬಂಧನ
ತಮಿಳುನಾಡಿನ ಅಂತರ್ ರಾಜ್ಯ ನಟೋರಿಯಸ್ ಕಳ್ಳಿಯ ಬಂಧನ

ಪುತ್ತೂರು: ನಗರ ಠಾಣಾ ಪೊಲೀಸರಿಂದ ತಮಿಳುನಾಡು ಮೂಲದ ಅಂತರ್ ರಾಜ್ಯ ನಟೋರಿಯಸ್ ಕಳ್ಳಿಯ ಬಂಧನ ಹಾಗೂ  ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆಪಡೆಯಲಾಗಿದೆ.

Advertisement

ದಿನಾಂಕ:12.02.2024 ರಂದು ಪುತ್ತೂರು ನಗರದ KSRTC ಬಸ್ ನಿಲ್ದಾಣದಲ್ಲಿ ಫಿರ್ಯಾಧಿ ರೇಷ್ಮಾ ಎನ್ (41) ರವರ ಬ್ಯಾಗಿನಲ್ಲಿದ್ದ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣವನ್ನು ಪುತ್ತೂರು ನಗರ ಠಾಣಾ ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ನಡೆಸಿ ಸದ್ರಿ ಪ್ರಕರಣದ ಆರೋಪಿತಳಾದ ತಮಿಳುನಾಡು ಮೂಲದ ಅಂತರ್ ರಾಜ್ಯ ನಟೋರಿಯಸ್ ಕಳ್ಳಿಯಾದ ಈಶ್ವರಿ (45) ಗಂಡ:ವೇಲಪ್ಪನ್ ವಾಸ ಶಕ್ತಿ ನಗರ ಸೋಲವಂಪಳಯಂ, ಸಿಕ್ಕಲಂಪಳಯಂ ಕೋಯಂಬತ್ತೂರ್ ಜಿಲ್ಲೆ ತಮಿಳುನಾಡು ರಾಜ್ಯ ಎಂಬಳನ್ನು ವಶಕ್ಕೆ ಪಡೆದು, ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.

Advertisement

ಈ ಪ್ರಕರಣವನ್ನು ಬೇದಿಸುವಲ್ಲಿ ದ ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ ಬಿ ರಿಷ್ಯತ್ ಮತ್ತು ದ ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಎಮ್ ಎನ್ ರವರ ನಿರ್ದೇಶನದಲ್ಲಿ ಪುತ್ತೂರು ಉಪವಿಭಾಗದ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ರವರ ಮಾರ್ಗದರ್ಶನದಲ್ಲಿ, ಪುತ್ತೂರು ನಗರ ಪೊಲೀಸ್ ನಿರೀಕ್ಷಕರಾದ ಸತೀಶ್ ಜಿ ಜೆ, ರವರ ಸಾರಥ್ಯದಲ್ಲಿ ಪುತ್ತೂರು ನಗರ ಠಾಣಾ ಪೊಲೀಸ್ ಉಪ ನಿರೀಕ್ಷಕರುಗಳಾದ ನಂದಕುಮಾರ್ ಎಮ್ ಎಮ್ ಹಾಗೂ ಸುಬ್ರಹ್ಮಣ್ಯ ಹೆಚ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹೆಚ್ ಸಿ ಸ್ಮರಿಯ ಎಮ್ ಎ, ಹೆಚ್ ಸಿ ಕೆ ಬಸವರಾಜ, ಹೆಚ್ ಸಿ ಜಗದೀಶ್, ಹೆಚ್ ಸಿ ಸುಬ್ರಹ್ಮಣ್ಯ, ಪಿಸಿ ವಿನಾಯಕ ಎಸ್ ಬಾರ್ಕಿ, ಪಿಸಿ ಶರಣಪ್ಪ ಪಾಟೀಲ್, ಮಪಿಸಿ ರೇವತಿ ಹಾಗೂ ದ.ಕ ಜಿಲ್ಲಾ ಗಣಕ ಯಂತ್ರ ವಿಭಾಗದ ಎಹೆಚ್ ಸಿ ಸಂಪತ್ ಮತ್ತು ಸಿಪಿಸಿ ದಿವಾಕರ್ ರವರು ಭಾಗವಹಿಸಿರುತ್ತಾರೆ.

Advertisement
Tags :
Advertisement