For the best experience, open
https://m.newskannada.com
on your mobile browser.
Advertisement

ಇಂದು ಆರ್ಟಿಕಲ್ 370 ಸಿನಿಮಾ ರಿಲೀಸ್‌: ಯಾಮಿ ಗೌತಮ್ ಸಖತ್‌ ಆಕ್ಟಿಂಗ್‌

ಇಂದು ದೇಶದಾದ್ಯಂತ ಆರ್ಟಿಕಲ್ 370 ಸಿನಿಮಾ ಬಿಡುಗಡೆಯಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ಏಜೆಂಟ್ ಆಗಿ ಯಾಮಿ ಗೌತಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಪ್ರಮುಖ ಪಾತ್ರವಹಿಸಿದ್ದಾರೆ.
02:22 PM Feb 23, 2024 IST | Ashitha S
ಇಂದು ಆರ್ಟಿಕಲ್ 370 ಸಿನಿಮಾ ರಿಲೀಸ್‌  ಯಾಮಿ ಗೌತಮ್ ಸಖತ್‌ ಆಕ್ಟಿಂಗ್‌

ಬೆಂಗಳೂರು: ಇಂದು ದೇಶದಾದ್ಯಂತ ಆರ್ಟಿಕಲ್ 370 ಸಿನಿಮಾ ಬಿಡುಗಡೆಯಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ಏಜೆಂಟ್ ಆಗಿ ಯಾಮಿ ಗೌತಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಪ್ರಮುಖ ಪಾತ್ರವಹಿಸಿದ್ದಾರೆ.

Advertisement

ತನ್ನ ಅಭಿಯನದ ಮೂಲಕ ಪ್ರೇಕ್ಷಕರ ಗಮನಸೆಳೆದಿದ್ದಾರೆ. ʻಆರ್ಟಿಕಲ್‌ 370ʼ ಚಿತ್ರ ಆದಿತ್ಯಧರ್‌ ನಿರ್ದೇಶ ದಲ್ಲಿ ಮೂಡಿಬಂದಿದೆ. ಈ ಹಿಂದೆ ಇವರ ನರ್ದೇಶನದ ಉರಿ: ಸರ್ಜಿಕಲ್ ಸ್ಟ್ರೈಕ್ (Uri: The Surgical Strike) ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಹಿಂದೆಂದೂ ನೋಡಿರದ ಸ್ಟ್ರೈಕ್ ಸೀಕ್ವೆನ್ಸ್‌ಗಳು, ಕ್ಯಾಮೆರಾ ವರ್ಕ್‌, ಅದ್ಭುತ ನಿರ್ದೇಶನ, ಸಂಕಲನ ಪ್ರೇಕ್ಷಕರನ್ನು ಮನಮುಟ್ಟುವಂತೆ ಮಾಡಿತ್ತು. ಇದೀಗ ಐದು ವರ್ಷಗಳ ನಂತರ ʻಆರ್ಟಿಕಲ್ 370ʼ ಚಿತ್ರ ನಿರ್ದೇಶಿ ಇಂದು ಬಿಡುಗಡೆಯಾಗಿದೆ.ಹಾಗೂ ಚಿತ್ರದಲ್ಲಿ ಅರುಣ್ ಗೋವಿಲ್, ವೈಭವ್ ತತ್ವವಾಡಿ, ಸ್ಕಂದ್ ಠಾಕೂರ್, ಅಶ್ವಿನಿ ಕೌಲ್, ಮತ್ತು ಕಿರಣ್ ಕರ್ಮಾಕರ್, ಇತರರು ನಟಿಸಿದ್ದಾರೆ.

Advertisement

ಏನಿದು ʻಆರ್ಟಿಕಲ್ 370ʼ ಅಂತಿರಾ ಇಲ್ಲಿದೆ ಮಾಹಿತಿ,ಭಾರತೀಯ ಸಂವಿಧಾನದಲ್ಲಿ ಅವಿಭಜಿತ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಪ್ರಮುಖ ನಿಬಂಧನೆಯಾಗಿದೆ. 1949 ಜುಲೈ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಮಧ್ಯಂತರ ಪ್ರಧಾನ ಮಂತ್ರಿ ಶೇಖ್ ಅಬ್ದುಲ್ಲಾ ಅವರು ಭಾರತೀಯ ಸಂವಿಧಾನ ಸಭೆಯೊಂದಿಗೆ ಮಾತುಕತೆಗಳನ್ನು ನಡೆಸಿ, ಅಂತಿಮವಾಗಿ 370 ನೇ ವಿಧಿಯನ್ನು ಅಳವಡಿಸಲಾಯಿತು.

ಆ ವಿಧಿಯ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಕೆಲವು ಸ್ವಾಯತ್ತತೆಯನ್ನು ನೀಡಲಾಯಿತು. ಉದಾಹರಣೆಗೆ ರಾಜ್ಯವು ತನ್ನದೇ ಆದ ಸಂವಿಧಾನವನ್ನು ಹೊಂದಲು ಅವಕಾಶ ನೀಡಿತು, ಪ್ರತ್ಯೇಕ ಧ್ವಜ ಮತ್ತು ಭಾರತ ಸರ್ಕಾರದ ಸೀಮಿತ ನ್ಯಾಯವ್ಯಾಪ್ತಿಯನ್ನು ಕಲ್ಪಿಸಿತು. ಹೀಗೆ ನೈಜ ಘಟನೆ ಆಧರಿಸಿ ಚಿತ್ರಿಸಿರುವ ಈ ಚಿತ್ರ ಪ್ರೇಕ್ಷಕರಲ್ಲಿ ಕೂತುಹಲ ಮೂಡಿಸಿದೆ.

Advertisement
Tags :
Advertisement