ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಏಪ್ರಿಲ್​ 19ರಂದು ಒಟಿಟಿ ಬರಲಿದೆ ‘ಆರ್ಟಿಕಲ್​ 370’ ಸಿನಿಮಾ

ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ ಆರ್ಟಿಕಲ್​ 370 ರದ್ದು ಮಾಡಿದ್ದ ಘಟನೆಗಳನ್ನು ಆಧರಿಸಿದ ‘ಆರ್ಟಿಕಲ್​ 370’ ಸಿನಿಮಾ ಕೆಲವೇ ದಿನಗಳ ಹಿಂದೆ  ಬಿಡುಗಡೆ ಆಯಿತು. 
08:20 PM Mar 24, 2024 IST | Ashika S

ಮುಂಬೈ:  ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ ಆರ್ಟಿಕಲ್​ 370 ರದ್ದು ಮಾಡಿದ್ದ ಘಟನೆಗಳನ್ನು ಆಧರಿಸಿದ ‘ಆರ್ಟಿಕಲ್​ 370’ ಸಿನಿಮಾ ಕೆಲವೇ ದಿನಗಳ ಹಿಂದೆ  ಬಿಡುಗಡೆ ಆಯಿತು.

Advertisement

ಚಿತ್ರಮಂದಿರದಲ್ಲಿ ಈ ಸಿನಿಮಾಗೆ ಒಳ್ಳೆಯ ಕಲೆಕ್ಷನ್​ ಆಗಿದೆ. ಒಟಿಟಿಯಲ್ಲಿ ‘ಆರ್ಟಿಕಲ್​ 370’ ನೋಡಬೇಕು ಎಂದು ಅನೇಕರು ಕಾದಿದ್ದಾರೆ. ಒಟಿಟಿ ರಿಲೀಸ್​  ದಿನಾಂಕದ ಸಂಭವನೀಯ ದಿನಾಂಕದ ಬಗ್ಗೆ ಸುದ್ದಿ ಹಬ್ಬಿದೆ.

ಆರಂಭದಲ್ಲೇ ‘ಆರ್ಟಿಕಲ್​ 370’ ಸಿನಿಮಾಗೆ ಸಾಧಾರಣ ಕಲೆಕ್ಷನ್​ ಆಯಿತು. ನಂತರದ ದಿನಗಳಲ್ಲಿ ಅದೇ ಸ್ಥಿತಿ ಮುಂದುವರಿಯಿತು. ಅಚ್ಚರಿ ಏನೆಂದರೆ, ಸತತ ಒಂದು ತಿಂಗಳ ಪ್ರದರ್ಶನದ ಬಳಿಕ ಭಾರತದ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್​ 78.33 ಕೋಟಿ ರೂಪಾಯಿ ಆಗಿದೆ.

Advertisement

ವರದಿಗಳ ಪ್ರಕಾರ, ಏಪ್ರಿಲ್​ 19ರಂದು ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್​ ಆಗಲಿದೆ. ‘ಜಿಯೋ ಸಿನಿಮಾ’ ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಈ ಸಿನಿಮಾದಲ್ಲಿ ಯಾಮಿ ಗೌತಮ್​ ಅವರ ಜೊತೆ ಪ್ರಿಯಾಮಣಿ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ನರೇಂದ್ರ ಮೋದಿ ಪಾತ್ರವನ್ನು ಹಿರಿಯ ನಟ ಅರುಣ್​ ಗೋವಿಲ್​ ಅವರು ನಿಭಾಯಿಸಿದ್ದಾರೆ.

Advertisement
Tags :
BOLLYWOODLatetsNewsNewsKarnataka
Advertisement
Next Article